ಮಡಿಕೇರಿ, ಫೆ. ೨೬: ಹಾಕತ್ತೂರು ಗ್ರಾಮದ ಪ್ರೌಢಶಾಲೆ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದ ಹಿನ್ನೆಲೆ ಈ ಫಲಿತಾಂಶಕ್ಕೆ ಕಾರಣಕರ್ತರಾದ ಶಾಲೆಯ ಶಿಕ್ಷಕರನ್ನು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸನ್ಮಾನಿಸಿ ಗೌರವಿಸಿತು. ಇದೇ ಸಂದರ್ಭ ಪ್ರಥಮ ದರ್ಜೆಯೊಂದಿಗೆ ಎಸ್.ಎಸ್. ಎಲ್.ಸಿ.ಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಮಿತಿ ಸನ್ಮಾನಿಸಿ, ಪಾರಿತೋಷಕ ನೀಡಿ ಪ್ರೋತ್ಸಾಹಿಸಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ದಿವಾಕರ್ ಹೆಚ್.ಎಲ್. ಶಿಕ್ಷಕರನ್ನು ಕುರಿತು ಗೌರವಯುತವಾಗಿ ಮಾತನಾಡಿ, ಮಕ್ಕಳನ್ನುದ್ದೇಶಿಸಿ ಪ್ರೇರಣಾತ್ಮಕ ನುಡಿಗಳನ್ನು ತಮ್ಮ ಭಾಷಣದಲ್ಲಿ ಹೇಳಿ, ದಲಿತ ಸಂಘರ್ಷ ಸಮಿತಿಯ ಮುಖ್ಯ ಗುರಿ ಕೊಡಗನ್ನು ಕರ್ನಾಟಕದ ಭೂಪಟದಲ್ಲಿ ಅಕ್ಷರಸ್ಥ ಜಿಲ್ಲೆಯನ್ನಾಗಿ ಮಾಡುವುದಾಗಿದೆ ಎಂದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಉದ್ಘಾಟಿಸಿ, ಹಳ್ಳಿ ಶಾಲೆಯ ಕಷ್ಟ, ಸುಖಗಳನ್ನು ತಮ್ಮ ಭಾಷಣದಲ್ಲಿ ಕಟ್ಟಿಕೊಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ, ಮಂದ್ರೀರ ತೇಜಸ್ ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಹೇಗೆ ಮುಂದುವರೆದು ಉತ್ತಮ ಬದುಕು ಸಾಧಿಸಲು ಸಾಧ್ಯ ಎಂಬದನ್ನು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ ಅವರು, ತಮ್ಮ ಪತ್ರಿಕೋದ್ಯಮದ ಅನುಭವವನ್ನು ಹಂಚಿಕೊಳ್ಳುವುದರ, ಏಳು ಬೀಳುಗಳನ್ನು ಕಟ್ಟಿಕೊಡುವ ಮೂಲಕ ಮಕ್ಕಳಲ್ಲಿ ಶ್ರಮ, ಶ್ರದ್ಧೆ, ಗುರಿ ಸಾಧನೆಗೆ ಪ್ರಬಲ ಹಸ್ತ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ವೈದ್ಯ ಸಾಹಿತಿ ಡಾ. ಸುಭಾಶ್ ನಾಣಯ್ಯ ಅವರು ಕಾರ್ಯಕ್ರಮದ ಮುಖ್ಯ ರೂವಾರಿ ದಿವಾಕರ್ ಅವರ ಧ್ಯೇಯ ಉದ್ದೇಶಗಳ ಕುರಿತು ಮೆಚ್ಚುಗೆ ವ್ಯಕ್ತಿಪಡಿಸಿ, ಮಕ್ಕಳಿಗೆ ಎಸ್.ಎಸ್.ಎಲ್.ಸಿ. ನಂತರ ಮುಂದಿನ ವಿದ್ಯಾಭ್ಯಾಸದ ಆಯ್ಕೆಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭ ಶಾಲೆಯ ಅಡುಗೆ ಸಹಾಯಕರಾದ ರಮ್ಯ ಎಂ.ಆರ್. ಹಾಗೂ ಸಜಿನಿ ಎಸ್. ಅವರನ್ನು ಗೌರವಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಸನ್ಮಾನದ ನಂತರ ಸಭೆಯಲ್ಲಿದ್ದ ಸುಭಾಶ್ ನಾಣಯ್ಯ ಅವರು ಕಾರ್ಯಕ್ರಮದ ಮುಖ್ಯ ರೂವಾರಿ ದಿವಾಕರ್ ಅವರ ಧ್ಯೇಯ ಉದ್ದೇಶಗಳ ಕುರಿತು ಮೆಚ್ಚುಗೆ ವ್ಯಕ್ತಿಪಡಿಸಿ, ಮಕ್ಕಳಿಗೆ ಎಸ್.ಎಸ್.ಎಲ್.ಸಿ. ನಂತರ ಮುಂದಿನ ವಿದ್ಯಾಭ್ಯಾಸದ ಆಯ್ಕೆಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭ ಶಾಲೆಯ ಅಡುಗೆ ಸಹಾಯಕರಾದ ರಮ್ಯ ಎಂ.ಆರ್. ಹಾಗೂ ಸಜಿನಿ ಎಸ್. ಅವರನ್ನು ಗೌರವಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಸನ್ಮಾನದ ನಂತರ ಸಭೆಯಲ್ಲಿದ್ದ ಸ್ಮರಿಸುತ್ತಾ ಸನ್ಮಾನಿತ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿ, ಮಕ್ಕಳಿಗೆ ಸರಕಾರಿ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಶಿಕ್ಷಣ ಪಡೆದು, ಉನ್ನತ ಹುದ್ದೆಯನ್ನು ಗುರಿಯಾಗಿಸಿ ಕೊಳ್ಳುವಂತೆ ಕಿವಿ ಮಾತು ಹೇಳಿದರು.
ಈ ಸಂದರ್ಭ ಮುಖ್ಯ ಶಿಕ್ಷಕ ರಾಮಚಂದ್ರ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಹೇಮಾವತಿ ಎಂ.ಡಿ. ಉಪಸ್ಥಿತರಿದ್ದರು.
ನಿರೂಪಣೆ ಶಿಕ್ಷಕ ರಾಜೇಶ್ ಪಿ.ಆರ್., ವಂದನಾರ್ಪಣೆ ಶಿಕ್ಷಕಿ ಎಂ. ವನಜ ನೆರವೇರಿಸಿದರು.