ಸೋಮವಾರಪೇಟೆ, ಫೆ. ೨೭: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ-ಯಲಕನೂರು ಹೊಸಳ್ಳಿ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ಆಟೋ ಮೇಲೆ ದಾಳಿ ನಡೆಸಿದ ಪರಿಣಾಮ, ಆಟೋ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯ ಮೇಲಿನ ಆಕ್ರೋಶವನ್ನು ಕಾಡಾನೆಗಳು ಆಟೋ ಹಾಗೂ ಕಾಂಪೌAಡ್ ಮೇಲೆ ತೋರಿಸಿದ್ದು, ಆಟೋ ಮತ್ತು ಕಾಂಪೌAಡ್ ಜಖಂಗೊAಡಿದೆ.ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಜೀವ ಭಯದೊಂದಿಗೆ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ನಡೆದಾಡಲೂ ಆತಂಕ ಶುರುವಾಗಿದೆ. ಕೃಷಿ ಫಸಲು ನಷ್ಟಗೊಳ್ಳುತ್ತಿವೆ. ಕಾಡಾನೆಗಳ ಹಾವಳಿ ತಡೆಗೆ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಘಟನೆಯ ವಿವರ: ಇಂದು ಬೆಳಿಗ್ಗೆ ೫ ಗಂಟೆ ಸುಮಾರಿಗೆ ಹಿತ್ಲುಮಕ್ಕಿ ಗ್ರಾಮ ನಿವಾಸಿ ಆರ್.ಎನ್. ಕುಟ್ಟಪ್ಪ (ಅಪ್ಪಯ್ಯ) ಅವರು ಹೊಸಳ್ಳಿ ಗ್ರಾಮಕ್ಕೆ ಬಾಡಿಗೆಗೆಂದು ತಮ್ಮ ಆಟೋದಲ್ಲಿ ತೆರಳುತ್ತಿದ್ದರು. ನೇರುಗಳಲೆಯ ಅಬ್ಬೂರುಕಟ್ಟೆ ಸರ್ಕಾರಿ ಶಾಲೆಯಿಂದ ೨೦೦ ಮೀಟರ್ ದೂರದಲ್ಲಿರುವ ಚರ್ಚ್ನಎದುರು ಭಾಗದಲ್ಲಿ ತೆರಳುತ್ತಿದ್ದ ಸಂದರ್ಭ ಮುಂಬದಿ ಯಿಂದ ಎದುರಾದ ಮೂರು ಆನೆಗಳಿದ್ದ ಹಿಂಡು ಆಟೋ ಮೇಲೆ ಏಕಾ ಏಕಿ ದಾಳಿ ನಡೆಸಿವೆ.ಕಾಡಾನೆಗಳ ದಾಳಿಯಿಂದ ಆಟೋ ಪಲ್ಟಿಯಾಗಿದ್ದು, ಅದರೊಳಗೆ ಸಿಲುಕಿಕೊಂಡ ಕುಟ್ಟಪ್ಪ ಅವರು ಜೋರಾಗಿ ಕಿರುಚಿದ್ದಾರೆ. ಕಾಡಾನೆಯ ದಾಳಿಯ ಸದ್ದು ಕೇಳಿದ ನೆರೆಮನೆಯವರು ಅತ್ತಲಿಂದ ಲೈಟ್ ಬೆಳಕು ಹಾಕಿ ಕಿರುಚಿದ ಸಂದರ್ಭ ಆನೆಗಳು ಅತ್ತ ತೆರಳಿವೆ. ಆಟೋದೊಳಗೆ ಪ್ರಜ್ಞೆ ತಪ್ಪಿದ್ದ ಕುಟ್ಟಪ್ಪ ಅವರನ್ನು ಸಮೀಪದ ನಿವಾಸಿಗಳಾದ ಜಾನ್ ಮೋರಿಸ್ ಹಾಗೂ ಲಿಯೋ ಮಸ್ಕರನೇಸ್ ಸೇರಿದಂತೆ ಇತರರು ಚರ್ಚ್ನ ಎದುರು ಭಾಗದಲ್ಲಿ ತೆರಳುತ್ತಿದ್ದ ಸಂದರ್ಭ ಮುಂಬದಿ ಯಿಂದ ಎದುರಾದ ಮೂರು ಆನೆಗಳಿದ್ದ ಹಿಂಡು ಆಟೋ ಮೇಲೆ ಏಕಾ ಏಕಿ ದಾಳಿ ನಡೆಸಿವೆ.

ಕಾಡಾನೆಗಳ ದಾಳಿಯಿಂದ ಆಟೋ ಪಲ್ಟಿಯಾಗಿದ್ದು, ಅದರೊಳಗೆ ಸಿಲುಕಿಕೊಂಡ ಕುಟ್ಟಪ್ಪ ಅವರು ಜೋರಾಗಿ ಕಿರುಚಿದ್ದಾರೆ. ಕಾಡಾನೆಯ ದಾಳಿಯ ಸದ್ದು ಕೇಳಿದ ನೆರೆಮನೆಯವರು ಅತ್ತಲಿಂದ ಲೈಟ್ ಬೆಳಕು ಹಾಕಿ ಕಿರುಚಿದ ಸಂದರ್ಭ ಆನೆಗಳು ಅತ್ತ ತೆರಳಿವೆ. ಆಟೋದೊಳಗೆ ಪ್ರಜ್ಞೆ ತಪ್ಪಿದ್ದ ಕುಟ್ಟಪ್ಪ ಅವರನ್ನು ಸಮೀಪದ ನಿವಾಸಿಗಳಾದ ಜಾನ್ ಮೋರಿಸ್ ಹಾಗೂ ಲಿಯೋ ಮಸ್ಕರನೇಸ್ ಸೇರಿದಂತೆ ಇತರರು (ಮೊದಲ ಪುಟದಿಂದ) ನಿನ್ನೆ ರಾತ್ರಿ ೧೨ ಗಂಟೆಯಿAದಲೇ ಮೂರು ಆನೆಗಳಿದ್ದ ಹಿಂಡು ಈ ಭಾಗದಲ್ಲಿ ವಾಸ್ತವ್ಯ ಹೂಡಿದ್ದು, ಸುತ್ತಮುತ್ತಲ ಸ್ಥಳದಲ್ಲಿ ಮನಸೋಯಿಚ್ಛೆ ಸಂಚರಿಸಿ ಕೃಷಿ ನಷ್ಟಪಡಿಸಿವೆ. ಗ್ರಾಮದ ಎನ್.ಕೆ. ಲಿಂಗಪ್ಪ ಅವರಿಗೆ ಸೇರಿದ ಜಾಗದಲ್ಲಿ ಅಳವಡಿಸಿದ್ದ ಹನಿನೀರಾವರಿಯ ಸ್ಫಿçಂಕ್ಲರ್ ಸೆಟ್‌ನ್ನು ಸಂಪೂರ್ಣ ತುಳಿದು ಹಾಕಿದ್ದು, ಸುಮಾರು ಎರಡೂವರೆ ಲಕ್ಷ ನಷ್ಟವಾಗಿದೆ. ಇದರೊಂದಿಗೆ ಫೌಸಿಯಾ ಭಾನು ಎಂಬವರ ಮನೆಯ ಬಾಗಿಲಿನವರೆಗೂ ತೆರಳಿ ಓಡಾಡಿದ್ದು, ಮನೆಯ ಮುಂಭಾಗವಿದ್ದ ಪಪ್ಪಾಯಿ ಗಿಡದಿಂದ ಕಾಯಿಗಳನ್ನು ಕಿತ್ತಿವೆ. ಹಲಸಿನ ಕಾಯಿ, ಬಾಳೆ ಗಿಡಗಳನ್ನು ತಿಂದು ನಾಶಪಡಿಸಿವೆ.

ಗ್ರಾಮಸ್ಥರ ಆಕ್ರೋಶ: ಘಟನಾ ಸ್ಥಳದಲ್ಲಿ ಜಮಾಯಿಸಿದ ಅಬ್ಬೂರುಕಟ್ಟೆ, ಅರೆಯೂರು, ನೇರುಗಳಲೆ, ಹೊಸಳ್ಳಿ, ಯಲಕನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಕಾಡಾನೆಗಳ ಹಾವಳಿಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಜೀವ ಭಯದೊಂದಿಗೆ ಸಂಚರಿಸಬೇಕಿದೆ. ಮೊನ್ನೆಯಷ್ಟೇ ಗ್ರಾಮದ ಶೈಲ ಎಂಬವರಿಗೆ ಸೇರಿದ ಒಂದೂವರೆ ಏಕರೆ ಗೆಣಸು ಕೃಷಿಯನ್ನು ಸಂಪೂರ್ಣ ನಾಶಪಡಿಸಿವೆ. ಕಳೆದ ೨೦ ದಿನಗಳಿಂದ ಕಾಡಾನೆಗಳು ಈ ಭಾಗದಲ್ಲಿ ಸಂಚರಿಸುತ್ತಿದ್ದು, ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಸ್ಥಳಕ್ಕೆ ಆಗಮಿಸಿದ ಎಸಿಎಫ್ ನೆಹರು ಹಾಗೂ ಆರ್‌ಎಫ್‌ಓ ಸುಮಂತ್ ಅವರುಗಳ ಎದುರು ಅಸಮಾಧಾನ ಹೊರಹಾಕಿದರು.

ಅವೈಜ್ಞಾನಿಕವಾಗಿ ಕಂದಕ ನಿರ್ಮಾಣ ಮತ್ತು ಸೋಲಾರ್ ಬೇಲಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಆನೆಗಳ ಹಾವಳಿ ಮಿತಿಮೀರುತ್ತಿದೆ. ರಾತ್ರಿ ವೇಳೆ ಟಾರ್ಚ್ ಬೆಳಕು ಅಥವಾ ಬೆಂಕಿ ಹಾಕಿದರೇ ನೇರವಾಗಿ ಅಲ್ಲಿಗೇ ಕಾಡಾನೆಗಳು ನುಗ್ಗುತ್ತಿವೆ. ಬೆಂಕಿ ಹಾಗೂ ಪಟಾಕಿ ಶಬ್ಧದ ಭಯವೇ ಇಲ್ಲದಂತಾಗಿದೆ. ಇಂತಹ ಆನೆಗಳನ್ನು ಸೆರೆಹಿಡಿದು ದೂರದ ಅರಣ್ಯಕ್ಕೆ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಎಸಿಎಫ್ ನೆಹರು ಎದುರು ಆಗ್ರಹಿಸಿದರು.

ಆನೆಗಳನ್ನು ಸೆರೆಹಿಡಿಯಲು ಸಾಕಷ್ಟು ನಿಯಮಗಳಿದ್ದು, ಸದ್ಯದ ಮಟ್ಟಿಗೆ ಉಪಟಳ ನೀಡುತ್ತಿರುವ ಆನೆಗಳನ್ನು ಜನವಸತಿ ಪ್ರದೇಶದಿಂದ ಅರಣ್ಯದ ಮಧ್ಯಭಾಗಕ್ಕೆ ಅಟ್ಟಲಾಗುವುದು. ಮತ್ತೆ ಅವುಗಳು ಹಿಂತಿರುಗಿ ಬಾರದಂತೆ ಇಲಾಖೆಯಿಂದಲೇ ಕಾವಲು ಕಾಯಲಾಗುವದು. ಆರ್‌ಆರ್‌ಟಿ ಸಿಬ್ಬಂದಿಗಳ ತಂಡ ಸಿದ್ಧವಾಗಿದ್ದು, ಇಂದಿನಿAದಲೇ ಆನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಲಾಗುವದು. ಆನೆ ದಾಳಿಯಿಂದ ಗಾಯಗೊಂಡ ವ್ಯಕ್ತಿಯ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಇಲಾಖೆಯೇ ಭರಿಸಲಿದ್ದು, ಕೃಷಿ ಹಾನಿಯಾಗಿದ್ದರೆ ಅರ್ಜಿ ನೀಡಿ, ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಇದರೊಂದಿಗೆ ಆನೆಕಂದಕ ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವದು. ಸುಧಾರಿತ ಸೋಲಾರ್ ಬೇಲಿ ನಿರ್ಮಾಣ ಮಾಡಲಾಗುವುದು. ಆದರೂ ಅರಣ್ಯದಂಚಿನ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸುವ ಸಂದರ್ಭ ಎಚ್ಚರಿಕೆ ವಹಿಸಬೇಕೆಂದು ಎಸಿಎಫ್ ನೆಹರು ತಿಳಿಸಿದರು. ಈ ಸಂದರ್ಭ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಸದಸ್ಯ ಅಜಿತ್, ಗಣಗೂರು ಗ್ರಾ.ಪಂ. ಸದಸ್ಯ ವಿರೂಪಾಕ್ಷ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ, ಸಮಸ್ಯೆಗಳ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳ ಗಮನ ಸೆಳೆದರು.