ಮಾಯಮುಡಿ, ಫೆ. ೨೬: ಗೋಣಿಕೊಪ್ಪಲು ಸಮೀಪದ ಮಾಯಮುಡಿ-ಬೆಮ್ಮತ್ತಿ ಯೂತ್ ಕ್ಲಬ್ ತಂಡದ ಆಶ್ರಯದಲ್ಲಿ ಮಾಯಮುಡಿಯ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಾಯಮುಡಿ-ಬೆಮ್ಮತ್ತಿ ಪ್ರೀಮಿಯರ್ ಲೀಗ್ (ಎಂ.ಬಿ.ಪಿ.ಎಲ್.) ಕಪ್ ಅನ್ನು ಬಾಳೆಲೆಯ ಧನಲಕ್ಷಿö್ಮ ಕ್ರಿಕೆಟರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗೆದ್ದುಕೊಂಡಿದೆ.

೩ ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ ಮಾಯಮುಡಿಯ ಕಲ್ಪಡ ವಾರಿಯರ್ಸ್ ಕ್ರಿಕೆಟ್ ತಂಡ ಅಂತಿಮವಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಯಮುಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಉದ್ಯಮಿಗಳಾದ ಸಣ್ಣುವಂಡ ಸುರೇಶ್ (ದೊಡ್ಡಮಾಡ್), ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡಿರ ಪ್ರದೀಪ್, ಮಾಯಮುಡಿ ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್ ಮೊದಲಾದವರು ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ಮತ್ತು ವೈಯಕ್ತಿಕ ಪಾರಿತೋಷಕಗಳನ್ನು ವಿತರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ಅಧ್ಯಕ್ಷರು ಮತ್ತು ಉದ್ಯಮಿಗಳಾದ ಸಣ್ಣುವಂಡ ಸುರೇಶ್ (ದೊಡ್ಡಮಾಡ್), ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡಿರ ಪ್ರದೀಪ್, ಮಾಯಮುಡಿ ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುಧೀರ್ ಮೊದಲಾದವರು ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ಮತ್ತು ವೈಯಕ್ತಿಕ ಪಾರಿತೋಷಕಗಳನ್ನು ವಿತರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು), ರೈತ ಸಂಘದ ಮುಖಂಡರಾದ ಪುಚ್ಚಿಮಾಡ ರಾಯಿ, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಟಾಟು ಪೊಣ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಥ್ವಿ, ಪಂದ್ಯಾವಳಿಯ ಪ್ರಾಯೋಜಕರಾದ ಸಿ.ಎಂ. ಅಬೂಬಕ್ಕರ್, ಟಿ.ವೈ. ಉಮರ್ ಮೊದಲಾದವರು ಭಾಗವಹಿಸಿದ್ದರು.

ಪಂದ್ಯಾವಳಿಯ ಆಯೋಜಕರಾದ ವಿನೀಶ್ ಮಾಯಮುಡಿ, ರಾಫಿ ಬೆಮ್ಮತ್ತಿ, ಉಮ್ಮರ್ ಸೇರಿದಂತೆ ಮಾಯಮುಡಿ-ಬೆಮ್ಮತ್ತಿ ಯೂಥ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.