“ಕಣಿ” ಪೂಜೆ ಮಾಡಲು ಚೆಂಡುಹೂಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕಣಿಪೂಜೆಗೆ ಅಣಿಗೊಳಿಸಿಯಾದ ನಂತರ ಕೊಡವ ಹೆಂಗಸರು ಬಾವಿಗೆ ಹೋಗಿ ಬಾವಿಯ ಹತ್ತಿರ ಸೂರ್ಯನಿಗೆ ಅಕ್ಕಿ ಹಾಕಿ, ತೆಂಗಿನಕಾಯಿ ಒಡೆದು, ಎಲೆ, ಅಡಿಕೆ, ಹೂ, ಕುಂಕುಮವನ್ನು ನೀರಿಗೆ ಬಿಟ್ಟು ಧೂಪದ ಬತ್ತಿ ಹೊತ್ತಿಸಿ, ಹೊಸ ನೀರು ಮನೆಗೆ ತಂದು ಅಡಿಗೆ ಮಾಡುತ್ತಾರೆ. ದೋಸೆ, ಸಿಹಿಕುಂಬಳ ಸಾರು ಅಂದಿನ ಬೆಳಗ್ಗಿನ ಅಡುಗೆ. ಮೊದಲಿಗೆ ಹುಯ್ಯವ ಮೂರು ದೋಸೆಗಳನ್ನು ಬಾಳೆ ಎಲೆಯ ತುದಿ ಭಾಗ ಅಥವಾ ತ್ರಿಕೋನಾಕಾರದಲ್ಲಿರುವ ಬಾಳೆ ಎಲೆಯಲ್ಲಿ ಇಟ್ಟು, ಜೇನುತುಪ್ಪ, ಹಸುವಿನ ತುಪ್ಪ, ತೆಂಗಿನಕಾಯಿಯ ಹೋಳುಗಳು, ಬಾಳೆಹಣ್ಣನ್ನು ದೋಸೆಯ ಮೇಲಿಟ್ಟು ಮನೆಯಲ್ಲಿರುವ ಗಂಡಸರು ಶುಚಿರ್ಭೂತರಾಗಿಕೊಂಡು ಹೋಗಿ ಬಿತ್ತನೆ ಹಾಕುವ ಗದ್ದೆಯಲ್ಲಿ ನೆಟ್ಟಿರುವ ಮೂರು ನಾಟೆಯ ಬೊತ್ತಿನ ಮೇಲಿಟ್ಟು ಗರುಡನನ್ನು ನೆನೆಯುತ್ತಾರೆ. ಧೂಪದಲ್ಲಿ ಮಾಡಿದ ಬತ್ತಿಯನ್ನು ಹಚ್ಚಿಟ್ಟು ಮೂರು ಸಾರಿ ಕ್ಞೂ- ಕ್ಞೂ- ಕ್ಞೂ ಎಂದು ಕೂಗುತ್ತಾರೆ. ಬೊತ್ತ್ ನೆಡುವುದು ಮತ್ತು ಗದ್ದೆಯಲ್ಲಿ ಪಕ್ಷಿರಾಜ ಗರುಡನಿಗೆ ದೋಸೆಯನ್ನು ಇಡುವುದು ಬ್ರಾಹ್ಮೀ ಮುಹೂರ್ತದಲ್ಲಿ ಗರುಡನಿಗೆ ಕಾವೇರಿ ಸಂಕ್ರಾAತಿಯಲ್ಲಿ ದೋಸೆಯನ್ನು ಇಡುವುದು ನೋಡಿದರೆ ಕೊಡವರು ವೇದ ಕಾಲದ ಕ್ಷತ್ರಿಯರಂತೆ ಸೂರ್ಯನ ಆರಾಧಕರು ಎಂದು ಸ್ಪಷ್ಟವಾಗುತ್ತದೆ. ವೇದ ಪುರಾಣಗಳಲ್ಲಿ ಶ್ರವಣ ನಕ್ಷತ್ರ, ಮಹಾವಿಷ್ಣುವಿನ ಜನ್ಮನಕ್ಷತ್ರ, ಸೂರ್ಯ ನಾರಾಯಣನು ಇರುವ ಸ್ಥಾನ ಶ್ರವಣನಕ್ಷತ್ರದಲ್ಲೇ. ಇದು ವೈಜ್ಞಾನಿಕ ಸತ್ಯವೂ ಹೌದು. ಎಲ್ಲಾ ನಕ್ಷತ್ರ ರಾಶಿಯನ್ನು ಒಂದೊAದು ಪ್ರಾಣಿಯ ರೂಪದಲ್ಲಿ ವೇದ ಗುರುತಿಸುತ್ತದೆ. ಹಾಗೆಯೇ ಶ್ರವಣ ನಕ್ಷತ್ರವನ್ನು ಗರುಡನೆಂದು ಗುರುತಿಸುತ್ತದೆ ನಮ್ಮ ವೇದ. ಅಂದರೆ ಸೂರ್ಯ ನಾರಾಯಣನ ವಾಹನವಾದ ಗರುಡನಿಗೆ ಕಾವೇರಿ ಸಂಕ್ರಮಣ ಪುಣ್ಯ ಕಾಲದಲ್ಲಿ ದೋಸೆಯ ನೈವೇದ್ಯ. ವೈಜ್ಞಾನಿಕವಾಗಿಯೂ ವಿಷ್ಣು ಪರಮ ಪಾದ ಇರುವುದು ತುಲಾ ರಾಶಿಯಿಂದ ಮಕರ ರಾಶಿಯ ಶ್ರವಣ ನಕ್ಷತ್ರದವರೆಗೆ! ನಮ್ಮ ಹಿರಿಯ ಗಣಿತ ಸೂತ್ರಕ್ಕೆ ತಲೆಬಾಗಬೇಕು ನಾವು. ದೋಸೆಯನ್ನು ಗರುಡನಿಗೆ ನೈವೇದ್ಯ ಇಟ್ಟು ಮನೆಗೆ ಗಂಡಸರು ಬಂದ ನಂತರ ಮನೆ ಮಂದಿಯೆಲ್ಲಾ ನೆಲ್ಲಕ್ಕಿ ನಡುಬಾಡೆಯಲ್ಲಿ ಕಣಿಯ ಮುಂದೆ ನಿಲ್ಲುತ್ತಾರೆ. ಮೊದಲಿಗೆ ಹಿರಿಯರಂತೆ ಒಬ್ಬೊಬ್ಬರಾಗಿ ಚಿಕ್ಕ ಮಗುವೂ ಸೇರಿ ಕಣಿ ಅಥವಾ ಕಾವೇರಿ ತಾಯಿಯ ಪ್ರತಿರೂಪಕ್ಕೆ ಅಲ್ಲಿಯೇ ಇಟ್ಟ ತಟ್ಟೆಯಿಂದ ಸಣ್ಣಕ್ಕಿ ತೆಗೆದು ಮದುಮಗಳಿಗೆ ತಲೆಗೆ ಅಕ್ಕಿ ಹಾಕುವಂತೆ ಪಾದದಿಂದ ತಲೆಯವರೆಗೆ, ಕಣಿಗೆ ಅಕ್ಕಿ ಹಾಕಿದ ನಂತರ ತಮಗೆ ಹಿರಿಯರಾದ ಪ್ರತಿಯೊಬ್ಬ ಕುಟುಂಬ ಸದಸ್ಯನ ಪಾದಕ್ಕೆ ಬಾಗಿ ನಮಿಸುತ್ತಾರೆ. ತುಲಾಸಂಕ್ರಮಣ ಕಳೆದು ಹತ್ತು ದಿವಸಗಳ ಒಳಗೆ ಎಲ್ಲಾ ಹೆಂಗಸರು ಅವರವರ ತೌರು ಮನೆಗೆ ಹೋಗಿ ಬರುವುದು ಪದ್ಧತಿ. ತುಲಾ ಮಾಸದ ಹತ್ತನೇ ದಿನವನ್ನು ಕೊಡವರು “ಪತ್ತಲೋದಿ” ಎಂದು ಕರೆಯುತ್ತಾರೆ. ಪತ್ತಲೋದಿಯೂ ಕೊಡವರಿಗೆ ಪವಿತ್ರವಾದ ದಿನ. ಅಂದಿನ ದಿನ ಯಾವ ಪಂಚಾAಗ ಶುದ್ಧಿಯೂ ನೋಡದೆ ಶುಭ ಕಾರ್ಯ ಮಾಡಬಹುದಾಗಿದೆ. ಶಾಸ್ತçದಲ್ಲಿ ೩೧/೨ ದಿನವಿದ್ದಂತೆ ಅಂದಿನ ದಿನ. ಚಿಕ್ಕ ಹೆಣ್ಣು ಮಕ್ಕಳ ಕಿವಿ ಚುಚ್ಚುವುದು, ಮಕ್ಕಳ ಅಕ್ಷರಾಭ್ಯಾಸಕ್ಕೆ ತೊಡಗಿಸುವುದು ಹೀಗೆ ಅನೇಕ ಶುಭ ಕಾರ್ಯಗಳನ್ನು ಮಾಡುವರು. ಸೌರಮಾನ ರೀತ್ಯಾ ಎಲ್ಲಾ ಆಚರಣೆಗಳನ್ನಾಚರಿಸುವ ಕೊಡವ ಕುಟುಂಬಗಳು “ಪತ್ತಲೋದಿ”ಯ ದಿನ ಸೇರಿ ತಮ್ಮ, ತಮ್ಮ ಹಿರಿಯರಿಗೆ ಎಡೆ ಇಡುತ್ತಾರೆ. ಇದನ್ನು ಕೊಡವ ಭಾಷೆಯಲ್ಲಿ “ಕಾರಣಂಗ್ ಕೊಡ್ಪೂ” ಎನ್ನುತ್ತಾರೆ.
ಚಾಂದ್ರಮಾನ ರೀತ್ಯಾ ಆಚರಣೆಗಳನ್ನಾಚರಿಸುವವರು ಪಿತೃಪಕ್ಷದ ಅಮಾವಾಸ್ಯೆಯಂದು ಪಿತೃತರ್ಪಣ ಕ್ರಿಯಾದಿಗಳನ್ನು ಮಾಡುತ್ತಾರೆ. ಸೂರ್ಯನು ಭೂಮಿಯಲ್ಲಿರುವ ಸಮಯದಲ್ಲಿ ಅಂದರೆ ತುಲಾ ಮಾಸದಲ್ಲಿ ಕೊಡವರು ತಮ್ಮ ಹಿರಿಯರಿಗೆ ಎಡೆ ಇಡುತ್ತಾರೆ. ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ತೀರ್ಥರೂಪಿಣಿ ಯಾದ ಕಾವೇರಿಯ ದರ್ಶನವಾದ ನಂತರ, ತಮ್ಮ ಹಿರಿಯರು ತುಲಾ ಮಾಸದಲ್ಲಿ ಅವರವರ ಕಿರಿಯ ಸಂತತಿಯವರ ಶರೀರ, ಮನಸ್ಸು, ಆತ್ಮದಲ್ಲಿ ಇರುವರೆಂದು ಕೊಡವರು ನಂಬುತ್ತಾರೆ. ಕೊಡವರಲ್ಲಿ ಆದ್ಯ ಸ್ಥಾನವೆ ಗುರು ಹಿರಿಯರಿಗೆ. ಇದನ್ನು ಕೊಡವ ಭಾಷೆಯಲ್ಲಿ “ಗುರು-ಕಾರಣವೋ” ಎನ್ನುತ್ತಾರೆ. ಜೀವಶಾಸ್ತçದಲ್ಲಿ ನಮ್ಮ ಹಿರಿಯ ಸಂತತಿಯ ರಕ್ತ, ಕಿರಿಯ ಸಂತತಿಯ ಡಿಎನ್‌ಎ( ಆಓಂ ) ಸೇರಿರುತ್ತದೆಯಲ್ಲವೇ. ಮಾನವ ಯಾವ ಸಂತತಿ ಅಥವಾ ರಕ್ತಕ್ಕೆ ಸೇರಿದ್ದಾರೆಂದು ಕಂಡು ಹಿಡಿಯಬೇಕಾದರೆ ಈಗ ವೈಜ್ಞಾನಿಕವಾಗಿ ಆಓಂ ಖಿesಣ ಮಾಡುತ್ತಾರಲ್ಲವೇ? ಹಿರಿಯ ಸಂತತಿ ಕಣ್ಣು ಮುಚ್ಚಿಕೊಂಡಿದ್ದರೂ ಹಿರಿಯರು ತಮ್ಮ ರಕ್ತವನ್ನು ಕೊಟ್ಟು ನಮ್ಮನ್ನು ಈ ಭೂಮಿಯ ಸದಸ್ಯರನ್ನಾಗಿಸಿಲ್ಲವೇ ? ಅನ್ನವನ್ನು ಕೊಟ್ಟು, ಬುದ್ಧಿ ಕಲಿಸಿ, ಸಾಕಿ ಸಲಹಿದರಲ್ಲಿ ನಮ್ಮ ಹಿರಿಯರ ತ್ಯಾಗವಿಲ್ಲವೇ ? ಅದಕ್ಕಾದರೂ ನಾವು ಅದರ ನೆನಪು ಮಾಡಿಕೊಳ್ಳುವುದಕ್ಕಾದರೂ ವರ್ಷಕ್ಕೊಮ್ಮೆಯಾದರೂ ತಲೆಬಾಗುವುದು ಬೇಡವೇ ? ಹಿರಿಯರ ಆತ್ಮ ಅಥವಾ ದೇವರನ್ನು ನಂಬದಿರುವ ನಾಸ್ತಿಕರೂ ಇದನ್ನು ಇಲ್ಲವೆನ್ನಲು ಸಾಧ್ಯವೇ?
ಕೊಡವರು ತಮ್ಮ ಪಿತೃಲೋಕ, ಸೂರ್ಯಲೋಕವೆಂದು ನಂಬುತ್ತಾರೆ. ಆದ್ದರಿಂದಲೇ ವೈಜ್ಞಾನಿಕವಾಗಿಯೂ ಸೂರ್ಯನು ಭೂಮಿಯಲ್ಲಿರುವ, ತುಲಾ ಸಂಕ್ರಮಣ-ವೃಶ್ಚಿಕ ಸಂಕ್ರಮಣದವರೆಗಿನ ಒಂದು ತಿಂಗಳ ಕಾಲ ಅವರವರ ಕುಟುಂಬದ ಹಿರಿಯ ೬೪ ಸಂತತಿ ಉeಟಿeಡಿಚಿಣioಟಿ ಗಳು ತಮ್ಮ ಜೈವಿಕ ಸಂಬAಧÀ (ಃioಟogiಛಿಚಿಟ ಡಿeಟಚಿಣives) ಜೊತೆ ಈ ಭೂಮಿಯಲ್ಲಿ ಇರುತ್ತಾ ರೆಂದು ನಂಬಿದ್ದಾರೆ. ಆದ್ದರಿಂದಲೇ ತುಲಾ ಸಂಕ್ರಮಣ-ವೃಶ್ಚಿಕ ಸಂಕ್ರಮಣ ದೊಳಗೆ ಯಾವುದಾದರೂ ಒಂದು ದಿನ ಕೊಡವರು ತಮ್ಮ ಐನ್ ಮನೆಗಳಲ್ಲಿ ಕೂಡ್ ಕುಟುಂಬವೆಲ್ಲಾ ಸೇರಿ ತಮ್ಮ ಹಿರಿಯರನ್ನು ನೆನಪಿಸಿಕೊಂಡು ಹಿರಿಯರಿಗೆ ತೃಪ್ತಿಯಾಗುವಂತೆ ಎಡೆ ಹಾಕುತ್ತಾರೆ. ಇದೆಲ್ಲಾ ನೋಡಿದರೆ ಹಿರಿಯ ಕೊಡವರಿಗೆ ಖಗೋಳ ವಿಜ್ಞಾನದ ಜ್ಞಾನವಿತ್ತೆಂದು ಖಂಡಿತ ಹೇಳಬಹುದು. ಈ ಭೂಮಿಯಲ್ಲಿ ತಮ್ಮ ಹಿರಿಯರಿಗೆ ತೃಪ್ತಿಯಾಗುವಂತೆ ಎಡೆ ಹಾಕಿದ ರಾಜರುಗಳ ಪಂಕ್ತಿಯಲ್ಲಿ ಶ್ರೀರಾಮ-ಶ್ರೀ ಕೃಷ್ಣರೂ, ಮಹಾ ಋಷಿಗಳಲ್ಲಿ ವಸಿಷ್ಠ ಮಹರ್ಷಿ, ಸಿದ್ಧ ಪುರುಷರಲ್ಲಿ ಮಹರ್ಷಿ ಅಗಸ್ತö್ಯರೂ ಸೇರುತ್ತಾರೆ. ಋಗ್ವೇದದಲ್ಲಿ ಅಗಸ್ತö್ಯ-ಲೋಪಾಮುದ್ರೆಯರ ಸಂಭಾಷಣೆ ಯಿದೆ. ಅಪ್ಸರೆಯರು ಯಾವ ಅಂಜಿಕೆಯೂ ಇಲ್ಲದೆ ಸ್ವತಂತ್ರವಾಗಿ ವಿಹರಿಸುವ, ಜಲ ಕ್ರೀಡೆಯಾಡುವ ನಾಡು ಕಾವೇರಿ ನಾಡು-ಕೊಡವ ನಾಡು ಎಂದು ರಾಮಾಯಣ-ಮಹಾಭಾರತಗಳಲ್ಲಿ ಹಲವಾರು ಬಾರಿ ಉಕ್ತವಾಗಿದೆ. ಮಹಾಭಾರತದ ವನಪರ್ವತದಲ್ಲಿ ತಿರುಪತಿಯೂ ವೃಷಭಾದ್ರಿ ಬೆಟ್ಟದ ಯಾತ್ರೆ ಮುಗಿಸಿ ಅಪ್ಸರೆಯರು ಯಾವದೇ ಭಯವಿಲ್ಲದೆ ಓಡಾಡುವ ಜಲಕ್ರೀಡೆಯಾಡುವ ಕಾವೇರಿ ನಾಡು ಎಂದು ಭೀಷ್ಮ, ಪುಲಸ್ತö್ಯರ ವಾದ-ವಿವಾದವನ್ನು ದೇವರ್ಷಿ ನಾರದರು ಯುಧಿಷ್ಟಿರನಿಗೆ ಹೇಳುತ್ತಾರೆ. ಭಾಗವತದಲ್ಲೂ ನಾರದ ವಸುದೇವರಿಗೆ ನಡೆದ ಮಾತುಕತೆಯಲ್ಲಿ ದಕ್ಷಿಣ ದೇಶದ ಕಾವೇರಿಯ ಪವಿತ್ರತೆಯನ್ನು ಪ್ರಸ್ತಾಪಿಸುತ್ತಾರೆ. ಪಾಂಡವರ ಪರ ನಿಂತು ಯುದ್ಧ ಮಾಡಿದ ೫೬ ದೇಶಗಳಲ್ಲಿ ಕೊಡಗು ದೇಶವು ಒಂದು ಎಂದು ಮಹಾಭಾರತದಲ್ಲಿ ಉಕ್ತವಾಗಿದೆ. ಮಹಾಭಾರತ-ರಾಮಾಯಣ-ಭಾಗವತಗಳಲ್ಲಿ ಉಕ್ತವಾಗಿರುವ ಅಪ್ಸರೆಯರು ಇಂದಿಗೂ ಚಂದದ ಬೆಡಗಿಯರಾಗಿರುವ ಕೊಡವತಿಯಾಗಿರಬಹುದಲ್ಲವೇ ?
ಪಾಂಡವ ಕೌರವ “ಬೊತ್ತ್”ಗೆ ಸಾಕ್ಷಿ ಎಂಬAತೆ ಅಥವಾ ಮಹಾಂತೋಡ್ ಪಕ್ಕದ ನೆಲೆಯೆಂದೋ, ತುಲಾ ಸಂಕ್ರಮಣಕ್ಕೆ ಏಳು (೭) ದಿನಗಳಿಗೆ ಮುಂಚಿತವಾಗಿ ಕುಂದತ್‌ಬೊಟ್ಟ್ ಎಂಬಲ್ಲಿ ಬೋಡ್‌ನಮ್ಮೆ ಅಂದರೆ, ಶಿವನು ಬೇಟೆಗಾರ ವೇಷಧಾರಿಯಾಗಿ ಅರ್ಜುನನಿಗೆ ಬೈತೂರಿನಲ್ಲಿ ದರ್ಶನ ಕೊಟ್ಟಂತೆ, ತಾವೂ ಶಿವನಂತೆ ವೇಷಮರೆಸಿಕೊಂಡು ಹಾಡಿ ಕುಣಿಯುವ ಹಬ್ಬವು ಆರಂಭಗೊಳ್ಳುತ್ತದೆ. ಕಾವೇರಿ ತೀರ್ಥ ಉದ್ಭವಿಸಿದ ತುಲಾ ಸಂಕ್ರಮಣ ದಂದು ಕಾವೇರಿ ತೀರ್ಥ ಸಮೇತರಾಗಿ ಕುದುರೆ (ಬಿದಿರಿನಿಂದ ಮಾಡಲಾದ ಕುದುರೆ) ತೆಗೆದುಕೊಂಡು ಕುಂದತ್ ಬೊಟ್ಟ್ ಎಂಬ ಬೆಟ್ಟವನ್ನು ಹತ್ತುವ ಪದ್ಧತಿ ಈಗಲೂ ಇದೆ. ಅಂದೇ, ರಾತ್ರಿ ಸಮಯದಲ್ಲಿ ಇಲ್ಲಿ ಬೋಡ್ ನಮ್ಮೆ ಅಥವಾ ೧೮ ತರಹದ ವೇಷಧಾರಿಗಳು ವೇಷ ಮರೆಸಿಕೊಂಡು ಹಾಡಿ ಕುಣಿಯುವ ಹಬ್ಬ ನಡೆಯುತ್ತದೆ. ರಿಕ್ಟರ್ ಎಂಬ ಇಂಗ್ಲೀಷ್ ವಿದ್ವಾಂಸರು “ಬೋಡ್” ನಮ್ಮೆಯನ್ನು ಅವರ ಭಾಷೆಯಲ್ಲಿ ಹೀಗೆಂದು ಬಣ್ಣಿಸಿದ್ದಾರೆ.
“ಈoಡಿ seveಟಿ ಜಚಿಥಿs beಜಿoಡಿe ಣhe ಖಿuಟಚಿsಚಿಟಿಞಡಿಚಿmಚಿಟಿಚಿ iಟಿ ಣhe viಟಟಚಿge ಒuguಣಚಿgeಡಿi ಚಿಣ ಣhe ಜಿooಣ oಜಿ ಣhe hiಟಟ, ಣhe ಡಿಥಿoಣs ಚಿssembಟe oಟಿe ಜಿಡಿom eಚಿಛಿh house ಚಿಣ ಣhe ಒಚಿಟಿಜ ಚಿಟಿಜ siಟಿg ಅooಡಿg ಛಿhಚಿಟಿಣs iಟಿ ಠಿಡಿಚಿise oಜಿ ಉoಜ. ಔಟಿ ಣhe ಟಿighಣ oಜಿ ೭ಣh ಜಚಿಥಿ ಣhe iಟಿhಚಿbiಣಚಿಟಿಣs oಜಿ ಣhe ತಿhoಟe ಟಿಚಿಜ ಛಿome ಣogeಣheಡಿ ಜisguisiಟಿg ಣhemseಟves iಟಿ mಚಿsಞs oಜಿ ೧೮ vಚಿಡಿious ಜesಛಿಡಿiಠಿಣioಟಿs, ಣheಟಿ ಣheಥಿ go ಣo ಣhe ಚಿmbಚಿಟಚಿ ಚಿಟಿಜ ಜಚಿಟಿಛಿe & siಟಿg ಣo ಣhe souಟಿಜ oಜಿ ಆuಜiಞoಣ”
ಇಲ್ಲಿ ನಡೆಯುವ “ಬೋಡ್ ನಮ್ಮೆ” ಯನ್ನು ನೋಡಿದರೆ ಪೂರ್ವದಲ್ಲಿ ಕಾವೇರಿ ಗುಯ್ಯದಿಂದ ಎರಡು ಕವಲುಗಳಾಗಿ (ಪೂರ್ವ-ಪಶ್ಚಿಮ) ಹರಿಯುತ್ತಿದ್ದ ಭೌಗೋಳಿಕ ಸಂಗತಿ ಹಿರಿಯ ಕೊಡವರಿಗೆ ತಿಳಿದಿತ್ತೆಂದೂ, ಕಾವೇರಿಯ ಪಶ್ಚಿಮದ ಹರಿವಿಗೆ ಈ ಹಬ್ಬ ಸಾಂಕೇತಿಕವಾಗಿ ನಾವಿಲ್ಲಿ ಕಾಣಬಹುದು. “ಕುಂದತ್ ಬೊಟ್ಟ್” ಎಂಬ ಬೆಟ್ಟದ ಸುತ್ತಲಿನ ಪರಿಸರ, ದೊಡ್ಡ ಗುಂಡಿಗಳು, ಬಂಡೆಕಲ್ಲುಗಳು, ಅಲ್ಲಿಯ ರುದ್ರರಮಣೀಯ ಸೌಂದರ್ಯವನ್ನು ಗಮನಿಸಿದರೆ ಭೂ ವಿಜ್ಞಾನಿಗಳಿಗೆ ಮಾತ್ರವೇಕೆ ? ನಮ್ಮಂತಹ ಸಾಮಾನ್ಯರಿಗೂ ಇಲ್ಲಿ ಪೂರ್ವದಲ್ಲಿ ಹೊಳೆ ಹರಿಯುತ್ತಿತ್ತೆಂಬ ಸೂಚನೆ ಸಿಗುತ್ತದೆ. ಅದೂ ಅಲ್ಲದೆ ತನ್ನ ಭಕ್ತನಾದ ಚಂದ್ರವAಶ ರಾಜನಾದ ದೇವವರ್ಮನಿಗೆ ತುಲಾ ಸಂಕ್ರಮಣಕ್ಕೆ ಏಳು ದಿನಗಳಿಗೆ ಮುಂಚೆ ಪಾರ್ವತಿ ಸ್ವರೂಪಿಣಿಯಾದ ಕಾವೇರಿ ತಾಯಿಯು ಸ್ವಪ್ನ ದರ್ಶನ ಕೊಟ್ಟಳೆಂಬ ಸ್ಕಾಂದ ಪುರಾಣದ ಸಾಲುಗಳಿಗೂ, ಇಲ್ಲಿ ನಡೆಯುವ ಬೋಡ್ ನಮ್ಮೆಗೂ ಸಂಬAಧವಿದೆ ಎನಿಸುತ್ತದೆ. ಈಗಲೂ ಈ ಬೆಟ್ಟದ ಮೇಲೆ “ಭೀಮಕಲ್ಲು” ಪಾಂಡವರ ಕಲ್ಲಿನ (ಪಾಂಡವ ಪಾರೆ) ಮನೆಗಳೂ ಇತಿಹಾಸವನ್ನು ಹೇಳುತ್ತಿವೆ. ಮಹಾವಿಷ್ಣುವಿನ ಅಂಶವಾದ ಮೋಹಿನಿಯೂ ಕಲ್ಲಾಗಿ ಇಲ್ಲಿಯೇ ನಿಂತಳು ಎಂಬ ನಂಬಿಕೆ ಕೊಡವರಲ್ಲಿದೆ. ಆ ಕಲ್ಲು ರುದ್ರರಮಣೀಯ ಪ್ರಕೃತಿಯ ನಡುವಿನಲ್ಲಿದೆ. ಅದನ್ನು ಕೊಡವ ಭಾಷೆಯಲ್ಲಿ “ದೇರಟ್ ಕಲ್ಲ್” ಎನ್ನುತ್ತಾರೆ. ಈ ಪ್ರಕೃತಿಯ ಮಾಯೆಯೋ, ಅಥವಾ ಕಾವೇರಿಯಮ್ಮೆ ತಾಯಿ ಆ ಕಲ್ಲಿನಲ್ಲಿ ಪ್ರದಕ್ಷಿಣೆ ಬರುವವರಿಗೆ ಅದೆಂತಾ ಶಕ್ತಿ ಕೊಡುತ್ತಾಳೋ ಅಂತೂ ಮೋಹಿನಿ ಕಲ್ಲಾಗಿ ರೂಪುಗೊಂಡ ಕಲ್ಲಿನಲ್ಲಿ ಪ್ರದಕ್ಷಿಣೆ ಬರುವವರ ಸಂಖ್ಯೆ ಕಡಿಮೆ ಏನೂ ಇಲ್ಲ. “ದೇರಟ್ ಕಲ್ಲ”ನ್ನು ಹತ್ತಿ ಪ್ರದಕ್ಷಿಣೆ ಬರುವು ದೆಂದರೆ ಪ್ರಪಂಚದ ಒಂದು ವಿಸ್ಮಯ ಎಂದೇ ಹೇಳಬಹುದು. ನೋಡುಗರ ಮೈ ಜುಮ್ಮೆನ್ನುತ್ತದೆ. ನೋಡುಗರು ತಲೆ ತಿರುಗಿ ಬೀಳಬಹುದು, ಆದರೆ ದೇರಟ್ ಕಲ್ಲಿಗೆ ಪ್ರದಕ್ಷಿಣೆ ಬರುವವರು ಮಾತ್ರ ಬೀಳುವುದಿಲ್ಲ. ದೇರಟ್ ಕಲ್ಲನ್ನು ಪ್ರದಕ್ಷಿಣೆ ಬಂದರೆ ಮಾಡಿದ ಪಾಪ ಕಳೆಯುತ್ತದೆ ಎಂದು ಬಹಳ ರಸವತ್ತಾಗಿ ಕೊಡವರು ತಮ್ಮ ಜಾನಪದ ಹಾಡಿನಲ್ಲಿ ವ್ಯಕ್ತ ಪಡಿಸುತ್ತಾರೆ. ಕೊಡವರ ಜಾನಪದ ಹಾಡು-ಕುಣಿತಗಳೆಲ್ಲಾ ಮೋಹಿನಿ-ಕಾವೇರಿಯರಿಗೆ ಸಂಬAಧ ಪಟ್ಟದ್ದೇ ಆಗಿರುತ್ತದೆ. (ಮುಂದುವರಿಯುವುದು)
?ಕರೋಟಿರ ಶಶಿ ಸುಬ್ರಮಣಿ, ವೀರಾಜಪೇಟೆ.