ಮಡಿಕೇರಿ, ಫೆ. ೨೭: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಪೊನ್ನಂಪೇಟೆ ಹಳ್ಳಿಗಟ್ಟುವಿನ ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು ಕಾಲೇಜಿನ ಸಹಯೋಗದಲ್ಲಿ ಸಿ.ಐ.ಟಿ. ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಗುಡ್ಡಗಾಡು ಓಟ ಮತ್ತು ಕಬಡ್ಡಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಬಾಲಕರ ಗುಡ್ಡಗಾಡು ಓಟದ ಸ್ಪರ್ಧೆಗೆ ಕೊಡವ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಚೆರಿಯಪಂಡ ರಾಕೇಶ್ ಪೂವಯ್ಯ ಚಾಲನೆ ನೀಡಿದರು. ಸಿ.ಐ.ಪಿ.ಯು. ಸಿ.ಯ ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಬಾಲಕಿಯರ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಕ ಹರೀಶ್ ಸ್ಪರ್ಧೆಯ ನೇತೃತ್ವವನ್ನು ವಹಿಸಿಕೊಂಡಿದ್ದರು. ಸಿ.ಐ.ಟಿ. ಕಾಲೇಜು ಪ್ರಾಂಶು ಪಾಲ ಡಾ. ಎಂ. ಬಸವರಾಜು ಮತ್ತು ಕ್ಯಾಂಪಸ್ ಅಡ್ಮಿನಿಸ್ಟೆçÃಟರ್ ಜೀವನ್ ಚಿಣ್ಣಪ್ಪ ಕಬಡ್ಡಿ ಕ್ರೀಡಾಪಟುಗಳಿಗೆ ಶುಭಕೋರಿದರು. ಸಿ.ಐ.ಪಿ.ಯು.ಸಿ, ಉಪನ್ಯಾಸಕ ವೃಂದ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಗುಡ್ಡಗಾಡು ಓಟ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವರ ವಿವರ
ಬಾಲಕಿಯರ ವಿಭಾಗದಲ್ಲಿ: ಚೋಂದಮ್ಮ ಕೆ.ಟಿ.-ಸಿ.ಐ.ಪಿ.ಯು.ಸಿ ಪೊನ್ನಂಪೇಟೆ, ತ್ರಿಷಾ ಕೆ.-ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರೀಮಂಗಲ, ಮೋನಿಕಾ ಹೆಚ್.ಎನ್. -ಸಾಯಿಶಂಕರ್ ಪಿ.ಯು.ಕಾಲೇಜು ಪೊನ್ನಂಪೇಟೆ, ತ್ರಿಷಾ ತಂಗಮ್ಮ ಕೆ.ಡಿ.-ಸಿ.ಐ.ಪಿ.ಯು.ಸಿ. ಪೊನ್ನಂಪೇಟೆ, ಸಂಜನ ಕೆ.ಪಿ.-ಸಿ.ಐ.ಪಿ.ಯು.ಸಿ. ಪೊನ್ನಂಪೇಟೆ, ಇಂಪನ ವಿ.ಪಿ.-ಸೆಂಟ್ ಆಂಟೋನಿಸ್ ಪಿ.ಯು. ಕಾಲೇಜು. ಪೊನ್ನಂಪೇಟೆ ಆಯ್ಕೆಗೊಂಡರು.
ಬಾಲಕರ ವಿಭಾಗದಲ್ಲಿ: ಬೋಪಣ್ಣ ಸಿ.ಐ.-ಸಂತ ಅನ್ನಮ್ಮ ಪಿ.ಯು. ಕಾಲೇಜು ವೀರಾಜಪೇಟೆ, ಅರ್ಜುನ್ ಸೋಮಣ್ಣ-ಸಿ.ಐ.ಪಿ. ಯು.ಸಿ. ಪೊನ್ನಂಪೇಟೆ, ನಾಚಪ್ಪ ಎಸ್.ವಿ.-ಸಾಯಿಶಂಕರ್ ಪಿ.ಯು. ಕಾಲೇಜು ಪೊನ್ನಂಪೇಟೆ, ಹೇಮಂತ್ ಪಿ.ಬಿ. -ಸೆಂಟ್ ಆಂಟೋನಿಸ್ ಪಿ.ಯು. ಕಾಲೇಜು ಪೊನ್ನಂಪೇಟೆ, ಹರ್ಷವರ್ಧನ್-ಸಿ.ಐ.ಪಿ.ಯು.ಸಿ. ಪೊನ್ನಂಪೇಟೆ, ಮಿಲನ್ ಮುತ್ತಣ್ಣ-ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು ಪೊನ್ನಂಪೇಟೆ ಆಯ್ಕೆಗೊಂಡರು.
ಜಿಲ್ಲಾಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾದವರ ವಿವರ
ಬಾಲಕಿಯರ ವಿಭಾಗದಲ್ಲಿ: ಪ್ರಿಯಾಂಕ ಎಂ.ಸಿ.-ಕಾವೇರಿ ಪದವಿ ಪೂರ್ವ ಕಾಲೇಜು., ವೀರಾಜಪೇಟೆ, ಗಾಯನ ಗೌರಮ್ಮ ಪಿ.ಎಂ. -ಸಂತ ಅನ್ನಮ್ಮ ಪಿ.ಯು. ಕಾಲೇಜು ವೀರಾಜಪೇಟೆ, ಲಕ್ಷಿö್ಮ ಸಿ.-ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ನೇತ್ರಾವತಿ ಹೆಚ್.ಪಿ.-ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ನಿತ್ಯ ಸಿ.ಎಸ್.- ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು-ಪೊನ್ನಂಪೇಟೆ, ತುಳಸಿ ಎಂ.ಡಿ. ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು-ಪೊನ್ನಂಪೇಟೆ, ದೀಪಿಕಾ ಜೆ.ಸಿ. - ಸರ್ಕಾರಿ ಪದವಿಪೂರ್ವ ಕಾಲೇಜು ಪಾಲಿಬೆಟ್ಟ, ಪೂಜಾ ಪಿ.ಎಂ.-ಸರ್ಕಾರಿ ಪದವಿಪೂರ್ವ ಕಾಲೇಜು ಪಾಲಿಬೆಟ್ಟ, ತಾನ್ಯ ಅಯ್ಯಪ್ಪ ಸಿ.- ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು-ಪೊನ್ನಂಪೇಟೆ, ಸ್ವಪ್ನ ಸಿ.ಆರ್.-ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ, ವಿನಿತ ಎಂ.-ಸAತ ಅನ್ನಮ್ಮ ಪಿ.ಯು. ಕಾಲೇಜು ವೀರಾಜಪೇಟೆ, ಮನಿಷಾ ಕೆ.ಎ.-ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು-ಪೊನ್ನಂಪೇಟೆ, ಕೋಯಲ್ - ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು, ಪೊನ್ನಂಪೇಟೆ, ಸೋನಿಯಾ ಎಸ್.-ಕಾವೇರಿ ಪದವಿ ಪೂರ್ವ ಕಾಲೇಜು., ವೀರಾಜಪೇಟೆ, ಗುಣವತಿ - ಸರ್ಕಾರಿ ಪದವಿ ಪೂರ್ವ ಕಾಲೇಜು ಪಾಲಿಬೆಟ್ಟ ಆಯ್ಕೆಗೊಂಡರು.
ಬಾಲಕರ ವಿಭಾಗದಲ್ಲಿ: ಅಬಿಷೆೆÃಕ್-Iಕಿಖಊ ಕಾಲೇಜು, ಶಶಾಂಕ್ - ಕಾವೇರಿ ಪಿ.ಯು. ಕಾಲೇಜು ವೀರಾಜಪೇಟೆ, ಧನುಷ್-ಸಾಯಿಶಂಕರ್ ಪಿ.ಯು. ಕಾಲೇಜು ಪೊನ್ನಂಪೇಟೆ, ಅರ್ಜುನ್ ಪೊನ್ನಣ್ಣ -ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿ.ಯು. ಕಾಲೇಜು-ಪೊನ್ನಂಪೇಟೆ, ಸುಹೈಬ್-Iಕಿಖಊ ಕಾಲೇಜು, ಹೃತಿಕ್- ಸಂತ ಅನ್ನಮ್ಮ ಪಿ.ಯು. ಕಾಲೇಜು ವೀರಾಜಪೇಟೆ, ಲಿಖಿತ್-ಸಂತ ಅನ್ನಮ್ಮ ಪಿ.ಯು. ಕಾಲೇಜು ವೀರಾಜಪೇಟೆ, ಲಿನು-ಸಂತ ಅನ್ನಮ್ಮ ಪಿ.ಯು. ಕಾಲೇಜು ವೀರಾಜಪೇಟೆ, ಆದರ್ಶ್-ಕಾವೇರಿ ಪಿ.ಯು. ಕಾಲೇಜು ವೀರಾಜಪೇಟೆ, ತಿಲಕ್-ವಿದ್ಯಾನಿ ಕೇತನ ಕಾಲೇಜು ಗೋಣಿಕೊಪ್ಪಲು, ಫಾರಿಕ್-Iಕಿಖಊ ಕಾಲೇಜು, ಶಿವು- ಸರ್ಕಾರಿ ಪದವಿಪೂರ್ವ ಕಾಲೇಜು ಪಾಲಿಬೆಟ್ಟ, ಅಮೀರ್ ಅಬ್ಬಾಸ್ - Iಕಿಖಊ ಕಾಲೇಜು, ಆಯ್ಕೆಯಾಗಿದ್ದಾರೆ.