ಮಡಿಕೇರಿ, ಫೆ. ೨೭: ಇಲ್ಲಿನ ಜ್ಯೋತಿ ನಗರದಲ್ಲಿರುವ ಶ್ರೀ ವನ ಚಾಮುಂಡಿ ದೇವಿಯ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಸೋಮವಾರ ಹಾಗೂ ಮಂಗಳ ವಾರ ಎರಡು ದಿನಗಳ ಕಾಲ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ, ಗುರು ಗಣಪತಿ ಪೂಜೆ, ಪುಣ್ಯಾಹವಾಚನ, ಸುದರ್ಶನ ಹೋಮ, ಗಣಪತಿ ಹೋಮ, ದುರ್ಗಾ ಹೋಮ, ಪೂರ್ಣಾಹುತಿ, ಮಹಾಪೂಜೆ ನೆರವೇರಿದವು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆಯೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಿಯ ವಾರ್ಷಿಕ ಮಹಾಪೂಜೆಯು ಮಾರ್ಚ್ ೨ ರಂದು ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಪ್ರಸಾದ ವಿತರಣೆ, ೧ ಗಂಟೆಯಿAದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರುಗಳು ತಿಳಿಸಿದ್ದಾರೆ.