ವೀರಾಜಪೇಟೆ, ಫೆ. ೨೬: ‘ಲಿವಿಂಗ್ ಟುಗೆಧರ್’ ವಿಚಾರದಲ್ಲಿ ಯುವಕನೋರ್ವನನ್ನು ಕೊಲೆ ಮಾಡಿ ಇಬ್ಬರು ಜೈಲು ಸೇರಿರುವ ಪ್ರಕರಣ ವೀರಾಜಪೇಟೆಯಲ್ಲಿ ನಡೆದಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಪುಲ್‌ಪಲ್ಲಿ ನಿವಾಸಿ ಶಿಂಟೊ ತಂಗಚ್ಚನ್ (೩೫) ಕೊಲೆಯಾದ ಯುವಕ.

ಘಟನೆ ವಿವರ : ಮೃತ ಯುವಕನ ಪೋಷಕರು ವೃದ್ಧರಾಗಿದ್ದು, ಕೂಲಿ ಅವಲಂಭಿತವಾದ ಕುಟುಂಬವಾಗಿದೆ. ಮೃತನ ತಂದೆ ಅಂಗವೈಫಲ್ಯದಿAದ ಬಳಲುತ್ತಿದ್ದು, ತಾಯಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮೃತ ಶಿಂಟೋ ಕುಡಿತದ ದಾಸನಾಗಿದ್ದ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಮೃತನು ತನ್ನ ಊರಿನಲ್ಲಿ ಕಾಯಕದಲ್ಲಿ ತೊಡಗಿರುವ ಸಂದರ್ಭದಲ್ಲಿ ವೀರಾಜಪೇಟೆ ನಗರ ಕಲ್ಲುಬಾಣೆ ನಿವಾಸಿ ಬೇಬಿ (೫೯) ಎಂಬಾಕೆಯ ಪರಿಚಯವಾಗುತ್ತದೆ. ಕೆಲವು ದಿನಗಳವರೆಗೆ ಕೆಲಸ ನಿರ್ವಹಿಸಿದ ನಂತರ ವೀರಾಜಪೇಟೆ ನಗರಕ್ಕೆ ಮಹಿಳೆ ಆಗಮಿಸಿದ್ದಾಳೆ. ಬೇಬಿಯ ದೂರವಾಣಿ ಸಂಖ್ಯೆ ಪಡೆದ ಶಿಂಟೋ ನಿರಂತರ ಸಂಪರ್ಕದಲ್ಲಿ ತೊಡಗುತ್ತಾನೆ. ಬೇಬಿಯ ಪತಿ ಕೆಲವು ವರ್ಷಗಳ ಹಿಂದೆ ನಿಧನರಾದ ಬಳಿಕ ತನ್ನ ಮೂವರು ಮಕ್ಕಳು ಹಾಗೂ ಮೊಮಕ್ಕಳನ್ನು ತ್ಯಜಿಸಿ ಏಕಾಂಗಿಯಾಗಿ ವೀರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಮೃತ ಶಿಂಟೋ ಹವ್ಯಾಸಿ ಚಾಲಕನಾಗಿದ್ದು, ಎಲ್ಲಾ ರೀತಿಯ ಕೂಲಿ ಕೆಲಸಗಳಿಗೆ ಹೋಗುತ್ತಿದ್ದ. ಬೇಬಿಯ ಸಂಪರ್ಕವಾದ ಬಳಿಕ ಬೇಬಿಯ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ.ಸುಮಾರು ೯ ತಿಂಗಳುಗಳಿAದ ಕಿರಿದಾದ ಮನೆಯಲ್ಲಿ ಇಬ್ಬರು ವಾಸವಿದ್ದರು. ಬಾಡಿಗೆ ಮನೆಯ ಮಾಲೀಕರ ಅಣ್ಣ ಪತ್ರಿಕಾ ವಿತರಕನಾಗಿರುವ ಫಜಲುದ್ದೀನ್ (೫೩) ಕೆಲವು ಸಮಯದಿಂದ ಪತ್ರಿಕಾ ವಿತರಣೆಯನ್ನು ಸ್ಥಗಿತಗೊಳಿಸಿ ದಿನ ನಿತ್ಯ ಬೇಬಿಯ ಮನೆಗೆ ಬಂದು ಹೋಗುತ್ತಿದ್ದ. ಇದನ್ನು ಸಹಿಸದ ಶಿಂಟೊ ಕಂಠಪೂರ್ತಿ ಕುಡಿದು ಬಂದು ಬೇಬಿ ಹಾಗೂ ಫಜಲುದ್ದಿನ್ ನೊಂದಿಗೆ ಜಗಳ ಮಾಡುತ್ತಿದ್ದ. ಕಳೆದ ತಾ. ೨೩ರ ರಾತ್ರಿ ಮೂವರ ಮಧ್ಯೆ ಮಿನಿ ಕದನ ಏರ್ಪಟ್ಟಿದೆ. ಬೇಬಿ ಕೂಡ ದಿನ ನಿತ್ಯ ಸಂಜೆ ವೇಳೆಗೆ ಮದ್ಯಪಾನ ಮಾಡುತ್ತಿದ್ದುದರಿಂದ ಕದನವು ತಾರಕಕ್ಕೇರಿದೆ. ಅಜಾನುಭಾಹು ಹೊಂದಿದ್ದ ಶಿಂಟೊನನ್ನು ಮುಗಿಸಲು ಇಬ್ಬರು ತೀರ್ಮಾನ ಮಾಡಿದ್ದಾರೆ. ಮೊದಲೇ ನಿರ್ಧರಿಸಿದಂತೆ ಮಲಗಿದ್ದ ಶಿಂಟೊ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ ಮಾಡಿ ಏನೂ ಅರಿಯದಂತೆ ಬೇಬಿ ನಿದ್ರೆಗೆ ಜಾರುತ್ತಾಳೆ. ಇತ್ತ ಫಜಲು ಅಲಿಯಾಸ್ ಫಜಲುದ್ದೀನ್ ಸಂಶಯ ಭಾರದ ರೀತಿಯಲ್ಲಿ ಮನೆಗೆ ಹಿಂದಿರುಗುತ್ತಾನೆ. ಮರುದಿನ ಬೆಳಿಗ್ಗೆ ಅಂದರೆ ತಾ. ೨೪ ರಂದು ಬಾಡಿಗೆ ಮನೆಯಲ್ಲಿ ಯುವಕ ಮರಣ ಹೊಂದಿರುವ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂದಿದೆ. ಕರೆಯ ಆಧಾರದ ಮೇಲೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ ಮೃತ ಶರೀರವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುತ್ತದೆ. ಮನೆಯ ಮಾಲೀಕರಾದ ಶಾಹೀದಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೇಲ್ನೋಟಕ್ಕೆ ಆಕಸ್ಮಿಕ ಸಾವು ತಿಳಿದು ಬಂದರೂ ಮೃತ ಶರೀರದ ಮೇಲಿರುವ ಗಾಯಗಳಿಂದ ಶಂಕೆ ವ್ಯಕ್ತಪಡಿಸಿದ್ದಾರೆ. ಶವ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ವರದಿಯ ಅನ್ವಯ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ವಿಚಾರಣೆ ವೇಳೆ ಬಯಲು : ವೃತ್ತ ನಿರೀಕ್ಷಕ ಶ್ರೀಧರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಬೇಬಿ ಮತ್ತು ಫಜಲುದ್ದೀನ್‌ರನ್ನು ತನಿಖೆಗೆ ಒಳಪಡಿಸುತ್ತಾರೆ. ತನಿಖೆಯ ವೇಳೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ ಆರೋಪಿಗಳ ಹೇಳಿಕೆಯನ್ನು ಪಡೆಯುತ್ತಾರೆ. ತಾ. ೨೫ರಂದುವರದಿಸಿದ್ಧಪಡಿಸಿ ವೀರಾಜಪೇಟೆ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗುತ್ತದೆ. ಆರೋಪಿ ಗಳಾದ ಬೇಬಿ ಮತ್ತು ಫಜಲುದ್ದೀನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರ ಆದೇಶದ ಮೇರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರಾ ಅವರ ಮಾರ್ಗದÀರ್ಶನದಲ್ಲಿ ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಅವರ ನಿರ್ದೇಶನದ ಮೇರೆಗೆ ವೃತ್ತ ನಿರೀಕ್ಷಕÀ ಶ್ರೀಧರ್, ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಧೂಳ ಶೆಟ್ಟಿ, ಎ.ಎಸ್.ಐ. ನಾಣಿಯಪ್ಪ, ಸಿಬ್ಬಂದಿಗಳಾದ ರವಿ, ಮುಸ್ತಫಾ, ಗಿರೀಶ್, ಮಹಿಳಾ ಸಿಬ್ಬಂದಿ ಗೀತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

-ಕಿಶೋರ್ ಶೆಟ್ಟಿ