ಮಡಿಕೇರಿ, ಫೆ. ೨೭: ಮಾರ್ಚ್ ೭ ರಂದು ದೇಶದಲ್ಲಿ ಜನೌಷಧಿ ದಿನಾಚರಣೆ ಆಚರಿಸಲಿದ್ದು ಆ ಪ್ರಯುಕ್ತ ಮಾ. ೧ ರಿಂದ ೭ ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಜನೌಷಧಿ ಕೇಂದ್ರದ ಮಾಲೀಕರ ಸಂಘ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಜನೌಷಧಿ ಕೇಂದ್ರದ ಮಾಲೀಕ ದಿನೇಶ್ ಕುಮಾರ್, ಜನೌಷಧಿ ದಿನಾಚರಣೆ ಅಂಗವಾಗಿ ಮಾ. ೧ ರಂದು ಆಯಾ ಜನೌಷಧಿ ಕೇಂದ್ರದ ಸುತ್ತಮುತ್ತಲಿನ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಾ.೨ ರಂದು ಜನೌಷಧಿ ಪರಿಯೋಜನೆಯ ಬಗ್ಗೆ ಚರ್ಚಾ ಕೂಟ ಏರ್ಪಡಿಸಲಾಗಿದ್ದು ಈ ಚರ್ಚೆಯಲ್ಲಿ ತಜ್ಞ ವೈದ್ಯರು, ತಜ್ಞ ಔಷಧ ಜ್ಞಾನಿಗಳು ಹಾಗೂ ಎನ್‌ಜಿಒ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಾ. ೩ ರಂದು ಶಾಲಾ-ಕಾಲೇಜುಗಳಲ್ಲಿ ‘ಯುವಕರಿಗೆ ತಿಳಿಸೋಣ’ ಎಂಬ ಕಾರ್ಯಕ್ರಮ, ಮಾ.೪ ರಂದು ರಾಷ್ಟç, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ರಾಷ್ಟçಮಟ್ಟದಲ್ಲಿ ವಿಜೇತರಾದವರು ಮಾ.೭ ರ ಜನೌಷಧಿ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲಿದ್ದಾರೆ. ಈ ಸ್ಪರ್ಧೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಫಾರ್ಮಸಿ ಕಾಲೇಜುಗಳಲ್ಲಿ ‘ಯುವಕರಿಗೆ ತಿಳಿಸೋಣ’ ಎಂಬ ಕಾರ್ಯಕ್ರಮ, ಮಾ.೪ ರಂದು ರಾಷ್ಟç, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ರಾಷ್ಟçಮಟ್ಟದಲ್ಲಿ ವಿಜೇತರಾದವರು ಮಾ.೭ ರ ಜನೌಷಧಿ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲಿದ್ದಾರೆ. ಈ ಸ್ಪರ್ಧೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಫಾರ್ಮಸಿ ಕಾಲೇಜುಗಳಲ್ಲಿ ‘ಯುವಕರಿಗೆ ತಿಳಿಸೋಣ’ ಎಂಬ ಕಾರ್ಯಕ್ರಮ, ಮಾ.೪ ರಂದು ರಾಷ್ಟç, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ರಾಷ್ಟçಮಟ್ಟದಲ್ಲಿ ವಿಜೇತರಾದವರು ಮಾ.೭ ರ ಜನೌಷಧಿ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲಿದ್ದಾರೆ. ಈ ಸ್ಪರ್ಧೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಫಾರ್ಮಸಿ ಪಾದಯಾತ್ರೆ ನಡೆಸಿ ಜನರಿಗೆ ಜನೌಷಧಿ ಯೋಜನೆಯ ಬಗ್ಗೆ ಅರಿವು ಮೂಡಿಸಿ ಆ ನಂತರ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಾ.೭ ರಂದು ಜನೌಷಧಿ ದಿನವನ್ನು ಆಯಾ ಜನೌಷಧಿ ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ವೀರಾಜಪೇಟೆ ಜನೌಷಧಿ ಕೇಂದ್ರದ ಮಾಲೀಕರಾದ ಕೆ.ಜಿ.ಕೀರ್ತನ್, ಗೋಣಿಕೊಪ್ಪ ಜನೌಷಧಿ ಕೇಂದ್ರದ ಮಾಲೀಕರಾದ ಸಿ.ಸಿ. ಗಣಪತಿ, ಸುನೀಲ್ ಚಂಗಪ್ಪ ಇದ್ದರು.