ಮೂರ್ನಾಡು, ಫೆ. ೨೭: ಭಾರತೀಯ ಅಂಚೆ ಇಲಾಖೆ ವತಿಯಿಂದ ಆಪ್‌ಕೆ ಸಾಥ್ ಯೋಜನೆ ಆಂದೋಲನದಡಿಯಲ್ಲಿ ಅಂಚೆ ಇಲಾಖೆ ಗ್ರಾಮೀಣ ಭಾಗದ ಅಂಚೆ ಇಲಾಖೆ ಸಿಬ್ಬಂದಿಗಳು ಕೊಡಗು ಜಿಲ್ಲೆಯಾದ್ಯಂತ ಮನೆ ಬಾಗಿಲಿಗೆ ತೆರಳಿ ಅಂಚೆ ಉಳಿತಾಯ ಖಾತೆಯ ಬಗ್ಗೆ ಅಭಿಯಾನ ಮಾಡಲಾಗುತ್ತಿದೆ.

ಮಡಿಕೇರಿ ತಾಲೂಕು, ಮೂರ್ನಾಡು ವ್ಯಾಪ್ತಿಯ ಹಾಕತ್ತೂರು, ಬಲಮುರಿ, ಬೇತರಿ, ಕೊಂಡಗೇರಿ ಹಾಗೂ ಹೊದ್ದೂರುವಿನ ಸಿಬ್ಬಂದಿಗಳು ಹಾಕತ್ತೂರು ಅಂಚೆ ಇಲಾಖೆ ಸಿಬ್ಬಂದಿ ಪಿ.ಈ. ದಿವಾಕರ್ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ನೀಡಿದರು.