ಮಡಿಕೇರಿ, ಫೆ. ೨೭: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮೇ ೮ ರಿಂದ ೧೬ರ ವರೆಗೆ ೫ನೇ ವರ್ಷದ ಗೌಡ ಫುಟ್ಬಾಲ್ ಕಪ್-೨೦೨೧ ಆಯೋಜಿಸಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಇಟ್ಟಣಿಕೆ ನವನೀತ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಗೋಡಿನ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಮೊದಲು ಬಂದ ೬೪ ತಂಡಕ್ಕೆ ಅವಕಾಶ ಕಲ್ಪಿಸಲಾಗುವುದು. ವಿಜೇತ ತಂಡಕ್ಕೆ ರೂ. ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರೂ ೨೦ ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ಪಡೆದ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದರು.

ಮಾ.೧ ರಿಂದ ತಂಡದ ನೋಂದಣಿ ಪ್ರಕ್ರಿಯೆ ಪ್ರಾರಂಭ ವಾಗಲಿದ್ದು, ಹೆಚ್ಚಿನ ತಂಡಗಳು ಆಗಮಿಸಿದ್ದಲ್ಲಿ ದಿನಾಂಕವನ್ನು ವಿಸ್ತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಪರಿಚನ ವಿಘ್ನೇಶ್-೯೪೮೦೪೦೪೯೪೭, ಬಡುವಂಡ್ರ ಸುಜಯ್ - ೯೪೮೨೬೩೧೪೭೪ ಸಂಪರ್ಕಿಸಬಹು ದಾಗಿದೆ ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್, ಉಪಾಧ್ಯಕ್ಷ ಬೊಳ್ಳೂರು ಶಿವ, ಉಪ ಕಾರ್ಯದರ್ಶಿ ಜೈನಿರ ರೋಶನ್, ಖಜಾಂಚಿ ಬಡುವಂಡ್ರ ಸುಜಯ್, ನಿರ್ದೇಶಕ ಚೆರಿಯಮನೆ ಚೇತನ್ ಇದ್ದರು.