ಮಡಿಕೇರಿ, ಫೆ. ೨೭: ಮಡಿಕೇರಿ ನಗರಸಭೆಯಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂರ‍್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ೨೦೧೩ರನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದ್ದು, ಯಾವುದೇ ರೀತಿಯ ಮ್ಯಾನ್ಯುವೆಲ್ ಸ್ಕಾö್ಯವೆಂರ‍್ಸ್ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಪ್ರಯುಕ್ತ ಮಡಿಕೇರಿ ನಗರಸಭೆಯಲ್ಲಿ ಸಕ್ಕಿಂಗ್ ಯಂತ್ರ ಲಭ್ಯವಿದ್ದು, ವಾಣಿಜ್ಯ, ಸಾರ್ವಜನಿಕ, ಸ್ಥಳೀಯ ನಿವಾಸಿಗಳು ಕಚೇರಿಯಲ್ಲಿರುವ ಯಂತ್ರಗಳನ್ನು ಸ್ವಚ್ಛತೆಗಾಗಿ ಬಳಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತರಾದ ರಾಮದಾಸ್ ಅವರು ಕೋರಿದ್ದಾರೆ.

‘ಸಕ್ಕಿಂಗ್ ಯಂತ್ರ ಬಳಸಿ’

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮ್ಯಾನ್ಯುವೆಲ್ ಸ್ಕಾö್ಯವೆಂಜರ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ ೨೦೧೩ ರಂತೆ ಮ್ಯಾನ್ಯುವಲ್ ಸ್ಕಾö್ಯವೆಂಜಿAಗ್‌ನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಯಂತ್ರೋಪಕರಣಗಳ ಸಹಾಯವಿಲ್ಲದೆ ಶೌಚಾಲಯದ ಸೆಫ್ಟಿಕ್ ಟ್ಯಾಂಕ್‌ಗಳ ಒಳಗೆ ಇಳಿದು ಸ್ವಚ್ಛಗೊಳಿಸುವುದು ಕಾನೂನು ರೀತಿ ಅಪರಾಧವಾಗಿದೆ.

ಇಂತಹ ಪ್ರಕರಣಗಳು ಮಾಡಿಸುವುದು ಕಂಡುಬAದಲ್ಲಿ ಅಂತವರ ವಿರುದ್ಧ ಮ್ಯಾನ್ಯುವಲ್ ಸ್ಕಾö್ಯವೆಂಜಿAಗ್ ಕಾಯ್ದೆ ೨೦೧೩ ರಂತೆ ದೂರು ದಾಖಲು ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಶೌಚಾಲಯದ ಸೆಫ್ಟಿಕ್ ಟ್ಯಾಂಕ್‌ಗಳನ್ನು ಖಾಲಿ ಮಾಡಲು ಪಟ್ಟಣ ಪಂಚಾಯಿತಿಯಲ್ಲಿ ಸಕ್ಷನ್/ ಸಕ್ಕಿಂಗ್ ಯಂತ್ರಗಳು ಲಭ್ಯವಿದೆ.

ಆದ್ದರಿಂದ ಸಾರ್ವಜನಿಕರು ಸಕ್ಷನ್/ ಸಕ್ಕಿಂಗ್ ಯಂತ್ರಗಳ ಸೇವೆಗಳನ್ನು ಪಡೆಯಲು ಪಟ್ಟಣ ಪಂಚಾಯಿತಿ ಕಚೇರಿಯ ದೂ.ಸಂ: ೦೮೨೭೬-೨೮೨೦೩೭ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ಅವರು ತಿಳಿಸಿದ್ದಾರೆ.