ಮಡಿಕೇರಿ, ಫೆ. ೨೭: ಜಿಲ್ಲೆಯ ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್ ನಡೆಸಲು ಈಗಾಗಲೇ ೩೬ ಅರ್ಜಿದಾರರಿಗೆ ಪರವಾನಿಗೆ ನೀಡಿದ್ದು, ೬೪ ರ‍್ಯಾಫ್ಟ್ಗಳು ಕಾರ್ಯನಿರ್ವಹಿಸುತ್ತಿತ್ತು, ಈ ಪರವಾನಿಗೆಯನ್ನು ಕೇವಲ ೧೬ ರ‍್ಯಾಫ್ಟ್ ಮಾಲೀಕರು ನವೀಕರಿಸಿಕೊಂಡು ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್ ನಡೆಸುತ್ತಿದ್ದು, ೨೦೨೦ರ ನವೆಂಬರ್, ೨೭ ರಂದು ನಡೆದ ‘ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ’ ಸಭೆಯಲ್ಲಿ ತಿಳಿಸಿರುವಂತೆ ರ‍್ಯಾಫ್ಟಿಂಗ್ ಪರವಾನಿಗೆಯನ್ನು ನವೀಕರಿಸಲು ದಾಖಲಾತಿಗಳನ್ನು ಸಲ್ಲಿಸಲು ತಿಳಿಸಿದೆ.ರ‍್ಯಾಫ್ಟ್ (ಉಪಕರಣಗಳಿಗೆ) ಕರ್ನಾಟಕ ಸರ್ಕಾರದ ಒಳನಾಡು ಜಲಸಾರಿಗೆ ಹಾಗೂ ಬಂದರು ಇಲಾಖೆ ನೀಡುವ ಚಾಲ್ತಿಯಲ್ಲಿರುವ ಫಿಟ್‌ನೆಸ್ ಪ್ರಮಾಣಪತ್ರ, ಪೊಲೀಸ್ ಇಲಾಖೆಯಿಂದ ರ‍್ಯಾಫ್ಟ್ ಮಾಲೀಕರು ಮತ್ತು ರ‍್ಯಾಫ್ಟ್ ಗೈಡ್‌ಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ, ಅಗ್ನಿಶಾಮಕ ಇಲಾಖೆಯಿಂದ ಪಡೆದಿರುವ ನಿರಾಕ್ಷೇಪಣಾ ಪತ್ರ, ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಸಂಸ್ಥೆ ಅಥವಾ ಕೇಂದ್ರ, ರಾಜ್ಯ ಸರ್ಕಾರಗಳಿಂದ ನೋಂದಾಯಿಸಲ್ಪಟ್ಟ ಸಂಸ್ಥೆಗಳಿAದ ಪಡೆದಿರುವ ರ‍್ಯಾಫ್ಟಿಂಗ್ ಗೈಡ್‌ಗಳ ಪ್ರಮಾಣ ಪತ್ರ, ಪ್ರತಿ ರ‍್ಯಾಫ್ಟ್ಗೆ, ಸವಾರರಿಗೆ ಅನ್ವಯವಾಗುವಂತೆ, ಕನಿಷ್ಟ ರೂ.೧೬ ಲಕ್ಷಗಳ ಅಪಘಾತ ವಿಮೆ ಮಾಡಿಸಿರುವ ವಿಮಾ ಪಾಲಿಸಿಗಳು ಒಳಗೊಂಡ ದಾಖಲಾತಿಗಳಿರಬೇಕು.
ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್ ಪರವಾನಿಗೆಯನ್ನು ನವೀಕರಿಸಲು ಬಾಕಿಯಿರುವ ರ‍್ಯಾಫ್ಟ್ ಮಾಲೀಕರು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್ ೪ ರೊಳಗೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್, ಮಡಿಕೇರಿ ಇವರಿಗೆ ಸಲ್ಲಿಸುವುದು. ಅಪೂರ್ಣ ದಾಖಲಾತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಕೊನೆಯ ದಿನಾಂಕದ ನಂತರ ಬಂದ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ರಿವರ್ ರ‍್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಉಪ ನಿರ್ದೇಶಕ ಈಶ್ವರ್ ಕುಮಾರ್ ಖಂಡು ಅವರು ತಿಳಿಸಿದ್ದಾರೆ.