ಶ್ರೀಮಂಗಲ, ಫೆ. ೨೬ : ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳಿಂದ ಮಾನವ ಹಾಗೂ ಜಾನುವಾರುಗಳ ಜೀವ ಹಾನಿ ಹೆಚ್ಚಾಗಿದ್ದು, ಹುಲಿಯಿಂದ ಎರಡು ಜೀವ ಹಾನಿಯಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಹಾಗೂ ಅರಣ್ಯ ಮಂತ್ರಿಗಳು ಎಲ್ಲಾ ಅಧಿಕಾರಿಗಳ ಸಭೆ ಕರೆದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಜನರೊಂದಿಗೆ ಕೂಲಂಕುಷವಾಗಿ ಚರ್ಚೆ ಮಾಡಿ ಏನು ಪರಿಹಾರ ತೆಗೆದುಕೊಳ್ಳಲಾಗಿದೆ, ಮುಂದೆ ಏನು ಮಾಡಬೇಕು, ಅದರ ಬಗ್ಗೆ ನಮಗೆ ವರದಿ ನೀಡಿ ಎಂದು ನಿರ್ದೇಶನ ನೀಡಿರುವುದರಿಂದ ಇಲ್ಲಿಗೆ ಭೇಟಿ ನೀಡಿರುವದಾಗಿ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಕುಮಾರ್ ಗೋಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳ ತಂಡ ಹಾಗೂ ಸಾರ್ವಜನಿಕರ ಸಭೆ ಇಂದು ಕೂಲಂಕುಷವಾಗಿ ಚರ್ಚೆ ಮಾಡಿ ಏನು ಪರಿಹಾರ ತೆಗೆದುಕೊಳ್ಳಲಾಗಿದೆ, ಮುಂದೆ ಏನು ಮಾಡಬೇಕು, ಅದರ ಬಗ್ಗೆ ನಮಗೆ ವರದಿ ನೀಡಿ ಎಂದು ನಿರ್ದೇಶನ ನೀಡಿರುವುದರಿಂದ ಇಲ್ಲಿಗೆ ಭೇಟಿ ನೀಡಿರುವದಾಗಿ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಕುಮಾರ್ ಗೋಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳ ತಂಡ ಹಾಗೂ ಸಾರ್ವಜನಿಕರ ಸಭೆ ಇಂದು ಸೆರೆ ಹಿಡಿಯಲಾಗಿದೆ, ಬಹುಶಃ ಅದೇ ನರ ಭಕ್ಷಕ ಹುಲಿ ಎಂದು ನಾವು ಅಂದುಕೊAಡಿದ್ದೇವೆ. ಈ ಬಗ್ಗೆ ಖಚಿತ ಪಡಿಸಲು ಹುಲಿ ದಾಳಿಯಿಂದ ಸಾವನ್ನಪ್ಪಿದ ಇಬ್ಬರ ಮೈಮೇಲೆ ಇದ್ದ ಹುಲಿಯ ಕೂದಲು, ಕಚ್ಚಿದ ಗಾಯದಲ್ಲಿ ಇದ್ದ ಎಂಜಲು ಇತ್ಯಾದಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಒಂದೆರಡು ದಿನದಲ್ಲಿ ದೊರೆಯಲಿದೆ. ಇದರೊಂದಿಗೆ ಇನ್ನೊಂದು ಹುಲಿಯ ಚಲನ ವಲನ ಈ ವ್ಯಾಪ್ತಿಯಲ್ಲಿದ್ದು ಜಾನುವಾರುಗಳ ಸಾವಿಗೆ ಕಾರಣವಾಗಿದೆ. ಆ ಹುಲಿಯನ್ನು ಸೆರೆಹಿಡಿಯಲು ಈಗಾಗಲೇ ಆದೇಶವನ್ನು ನೀಡಿದ್ದೇವೆ. ನಿರಂತರವಾಗಿ ಹುಲಿ ಸೆರೆಗೆ ಪ್ರಯತ್ನ ನಡೆಯುತ್ತಿದೆ. ಎಲ್ಲಾ ಸಮಸ್ಯೆಗಳಿಗೆ ಏನು ಪರಿಹಾರ ಕಂಡು ಕೊಳ್ಳಬೇಕೆಂದು
(ಮೊದಲ ಪುಟದಿಂದ) ಈ ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಮುಖಂಡರ ಅಭಿಪ್ರಾಯವನ್ನು ಪರಿಗಣಿಸಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.
ಸ್ಥಳೀಯ ಅಧಿಕಾರಿಗೆ ಅಧಿಕಾರ
ನರಹಂತಕ ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸಿ ಕೊಲ್ಲಲು ಸಾರ್ವಜನಿಕರು ಆದೇಶ ನೀಡಬೇಕೆಂದು ಒತ್ತಾಯಿಸಿದಾಗ ಯಾವುದೇ ಸಮಸ್ಯೆಯನ್ನು ಪರಿಹರಿಸಲಿಲು ರಾಷ್ಟಮಟ್ಟದ ಒಂದು ಮಾರ್ಗಸೂಚಿಗಳಿರುತ್ತದೆ. ಹುಲಿಯಿಂದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ವಿವಿಧ ಹಂತಗಳಲ್ಲಿ ಯಾವ ರೀತಿಯಲ್ಲಿ ಕಾರ್ಯಾಚರಣೆ ನಡೆಸಬೇಕೆಂಬ ನಿರ್ದೇಶನ ನೀಡಿದೆಯೋ ಅದರ ಪ್ರಕಾರ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ವಿಶೇಷವಾದ ಸನ್ನಿವೇಶಗಳನ್ನು ಎದುರಿಸಲು ಹಾಗೂ ಸ್ಥಳೀಯವಾಗಿ ನಿರ್ಧಾರವನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಸ್ಥಳೀಯ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ವನ್ಯ ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಸಭೆಯಲ್ಲಿ ಸಾರ್ವಜನಿಕರು ಪ್ರಸ್ತಾಪಿಸಿದಾಗ ಶಾಶ್ವತ ಪರಿಹಾರ ಏಕಾಏಕಿ ಮಾಡಲು ಸಾಧ್ಯವಿಲ್ಲ. ಇಡೀ ರಾಜ್ಯದಲ್ಲಿ ಸುಮಾರು ೬೨೪ ಕಿ.ಮೀ ನಷ್ಟು ಉಪಯೋಗಿಸಿ ಬಿಟ್ಟಂತಹ ರೈಲ್ವೆ ಹಳಿಗಳಿಂದ ಬ್ಯಾರಿಕೇಡ್ ನಿರ್ಮಾಣ ಮಾಡಿದರೆ ಅದರಿಂದ ಶೇ. ೯೦-೯೫ ರಷ್ಟು ಶಾಶ್ವತ ಪರಿಹಾರ ಸಿಗಬಹುದೆಂದು ತಜ್ಞರು ಹೇಳಿದ್ದಾರೆ. ಆ ದಿಸೆಯಲ್ಲಿ ಈಗಾಗಲೇ ೧೬೫ ಕಿ.ಮೀ ರೈಲ್ವೆ ಹಳಿ ಬ್ಯಾರಿಕೇಡನ್ನು ಮಾಡಲಾಗಿದೆ. ಉಳಿದಂತೆ ಬಾಕಿ ಇರುವ ೫೫೦ ಕಿ.ಮೀ ವ್ಯಾಪ್ತಿಗೆ ರೈಲ್ವೆ ಹಳಿಯ ಬ್ಯಾರಿಕೇಡನ್ನು ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ರಾಜ್ಯ ಸರಕಾರದ ನಿಯೋಗ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ ರೂ. ೫೫೦ ಕೋಟಿ ಮಂಜೂರಾತಿ ಮಾಡಿಸಿಕೊಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಈ ಮಂಜೂರಾತಿ ಆದರೆ ಕ್ಷಿಪ್ರವಾಗಿ ಶಾಶ್ವತ ಪರಿಹಾರ ಮಾಡಬಹುದಾಗಿದೆ. ವನ್ಯ ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿರುವ ಮಾನವ ಜೀವ ಹಾನಿಗೆ ಈಗ ಇರುವ ಪರಿಹಾರ ಮೊತ್ತ ರೂ. ೭.೫೦ ಲಕ್ಷವನ್ನು ೧೫ ಲಕ್ಷ ರೂ. ಗಳಿಗೆ, ಹಸುಗಳಿಗೆ ೧೦ ಸಾವಿರ ಇರುವುದನ್ನು ೩೦ ಸಾವಿರ ರೂ. ಗಳಿಗೆ ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅರಣ್ಯದ ನಡುವೆ ಹೆದ್ದಾರಿ, ರೈಲ್ವೆ ಮಾರ್ಗ ನಿರ್ಮಾಣ ಹಾಗೂ ಅರಣ್ಯ ಇಲಾಖೆಯಿಂದ ಭೂರಹಿತರಿಗೆ ಭೂ ಹಂಚಿಕೆಯಿAದ ಅರಣ್ಯ ಕಡಿಮೆಯಾಗಿದೆ. ಇದರಿಂದ ಪ್ರಾಣಿಗಳಿಗೆ ವಾಸ ಸ್ಥಾನ ಕಡಿಮೆಯಾಗಿದೆ. ಇದರೊಂದಿಗೆ ವನ್ಯ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ವನ್ಯ ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ ಎಂದರು.
ಪ್ರ‍್ರಾಸ್ತಾವಿಕವಾಗಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ ಅವರು ವನ್ಯ ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಪ್ರಸ್ತಾವನೆಗಳನ್ನು ಸರಕಾರಕ್ಕೆ ಕಳುಹಿಸಿದ್ದೇವೆ ಎಂದು ಇಲಾಖಾಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪ್ರಸ್ತಾವನೆ ಕಳುಹಿಸಿದ ನಂತರ ಅದರ ಹಿಂದೆ ಬಿದ್ದು ಕಾರ್ಯಗತಗೊಳಿಸುತ್ತಿಲ್ಲ. ಕೆಲವು ಅರಣ್ಯ ಅಧಿಕಾರಿಗಳು ಜನರ ಜೊತೆ ತಾಳ್ಮೆಯಿಂದ ವರ್ತಿಸುತ್ತಿಲ್ಲ. ಸಿಸಿಎಫ್ ಮಡಿಕೇರಿಯಲ್ಲೇ ಇರಬೇಕು. ಅರಣ್ಯ ದಂಚಿನಲ್ಲಿರುವ ಮನೆಗಳಿಗೆ ಸೋಲಾರ್ ದೀಪ ಉಚಿತವಾಗಿ ಅಳವಡಿಸಿಕೊಡಬೇಕು. ಫಸಲು ನಷ್ಟ ಆದ ರೈಹಾನಿ ಮಾಡಬಾರದೆಂಬ ಕಾನೂನು ಇದ್ದರೂ ಜನರಿಗೆ ಜನರಿಗೆ ಬದುಕಲು ಸೌಕರ್ಯ ಕೊಡಬಾರದೆಂಬ ಕಾನೂನು ಇಲ್ಲ. ಮೂಲಭೂತ ಸಮಸ್ಯೆ ಪರಿಹಾರಕ್ಕೆ ಇಲಾಖೆ ಕ್ರಮಕೈಗೊಳ್ಳಬೇಕು, ಅರಣ್ಯ ಮಂತ್ರಿ ಆನಂದ್‌ಸಿAಗ್ ಜೊತೆ ಚರ್ಚೆ ಮಾಡಿದಾಗ ವನ್ಯ ಜೀವಿಗಳಿಂದ ಆಗುವ ಸಮಸ್ಯೆಯ ಅವಲೋಕನಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಇಲಾಖಾಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದ್ದು ಸಾರ್ವಜನಿಕರು ಸೇರಿದಂತೆ ಎಲ್ಲರೂ ಪೂರ್ಣ ಮನಸ್ಸಿನಿಂದ ಒಟ್ಟಾಗಿ ಪ್ರಯತ್ನಿಸಿದರೆ ಪರಿಹಾರ ಸಾಧ್ಯವಿದೆ ಎಂದರು.
ಈ ಸಂದರ್ಭ ಜಿ.ಪಂ ಸದಸ್ಯ ಮುಕ್ಕಾಟೀರ ಶಿವುಮಾದಪ್ಪ, ರೈತ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಾರ್ಯಪ್ಪ, ಬಿಜೆಪಿ ತಾಲ್ಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ, ಕೊಡಗು ಬೆಳೆಗಾರ ಒಕ್ಕೂಟದ ಖಜಾಂಚಿ ಮಾಣೀರ ವಿಜಯನಂಜಪ್ಪ, ಬೆಳೆಗಾರರಾದ ಮಾಚಿಮಾಡ ತಿಮ್ಮಯ್ಯ, ಪುಚ್ಚಿಮಾಡ ಅಶೋಕ್, ಲಾಲಪೂಣಚ್ಚ, ಬಾಚಿರಣಿಯಂಡ ಪ್ರಕಾಶ್, ಅಲೇಮಾಡ ಮಂಜುನಾಥ್, ಪೆಮ್ಮಣಮಾಡ ರಮೇಶ್, ಮಿದೇರಿರ ಕವಿತಾ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್ ವಿವಿಧ ಸಮಸ್ಯೆಗಳನ್ನು ಪಿಸಿಸಿಎಫ್ ಮುಂದಿಟ್ಟರು.
ಈ ಸಂದರ್ಭ ರೈತ ಸಂಘದಿAದ ಸರಕಾರಕ್ಕೆ ವನ್ಯ ಪ್ರಾಣಿಗಳಿಂದ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಮನವಿ ಪತ್ರವನ್ನು ಪಿಸಿಸಿಎಫ್ ಮುಖಾಂತರ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಸಿಸಿಎಫ್ ಹೀರಾಲಾಲ್, ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಕುಟ್ಟ ಗ್ರಾ.ಪಂ ಅಧ್ಯಕ್ಷ ತೀತಿರ ಪ್ರತೀಶ್‌ಗಣಪತಿ, ಶ್ರೀಮಂಗಲ ಗ್ರಾ.ಪಂ ಅಧ್ಯಕ್ಷ ಅಜ್ಜಮಾಡ ಜಯ, ಟಿ.ಶೆಟ್ಟಿಗೇರಿ ಗ್ರಾ.ಪಂ ಅಧ್ಯಕ್ಷೆ ಕಟ್ಟೇರ ಗ್ರೇಶಿಉದಯ, ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್‌ಬೋಪಯ್ಯ ಉಪಸ್ಥಿತರಿದ್ದರು.
ಸಭೆಯಲ್ಲಿ ಮಡಿಕೇರಿ ವೈಲ್ಡ್ ಲೈಫ್ ಡಿಎಫ್‌ಓ ಶಿವರಾಮ್‌ಬಾಬು, ಮಡಿಕೇರಿ ಡಿಎಫ್‌ಓ ಪ್ರಭಾಕರನ್, ವೀರಾಜಪೇಟೆ ಡಿಎಫ್‌ಓ ಚಕ್ರಪಾಣಿ, ನಾಗರಹೊಳೆ ಹುಲಿ ಕಾರ್ಯಾಚರಣೆ ನಿರ್ದೇಶಕ ಮಹೇಶ್, ಎಸಿಎಫ್‌ಗಳಾದ ಗೋಪಾಲ್, ಪಂದ್ಯAಡ ಉತ್ತಪ್ಪ, ರೋಶಿಣಿ, ಕಾರ್ಯಪ್ಪ, ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು. ತರ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಶೀಘ್ರವಾಗಿ ಪಾವತಿಸಬೇಕು ಎಂಬುದು ಸೇರಿದಂತೆ ಹಲವು ಮನವಿಯನ್ನು ಸಲ್ಲಿಸಿದರು.
ಅರಣ್ಯ ಇಲಾಖಾಧಿಕಾರಿಗಳು ಸಾವನ್ನಪ್ಪಿದರೆ ೫೦ ಲಕ್ಷ ಮತ್ತು ಕುಟುಂಬದವರಿಗೆ ಸರಕಾರಿ ಉದ್ಯೋಗ ಕೊಡಲಾಗುತ್ತದೆ. ಆದರೆ, ರೈತ ಹಾಗೂ ಕಾರ್ಮಿಕರಂತಹ ಸಾಮಾನ್ಯ ಜನ ಬಲಿಯಾದಾಗ ಕೇವಲ ೭.೫೦ ಲಕ್ಷ ರೂ. ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಅಕ್ಷೇಪ ವ್ಯಕ್ತವಾಯಿತು.
ಸಮನ್ವಯದ ಕೊರತೆ : ರವಿಕುಶಾಲಪ್ಪ
ಪಶ್ಚಿಮ ಘಟ್ಟ ಅರಣ್ಯ ಸಂರಕ್ಷಣಾ ಪ್ರಾಧಿಕಾರದ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ ಅರಣ್ಯ ಇಲಾಖೆಯಲ್ಲಿ ಸಮನ್ವಯದ ಕೊರತೆ ಇದೆ. ಪರಿಸರಕ್ಕೆ