ಕಡಂಗ, ಫೆ. ೨೭: ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ಚೇಲಾವರ ಗ್ರಾಮದ ಪತ್ತೆಟ್ಟಿ ಸೇತುವೆ ಕಳೆದ ವರ್ಷ ಪ್ರಕೃತಿ ವಿಕೋಪ ಸಂದರ್ಭ ಹಾನಿಗೀಡಾಗಿದ್ದು ಗ್ರಾಮದ ಜನರ ಸಂಚಾರಕ್ಕೆ ತೊಂದರೆಯಾಗಿದ್ದು ಇದೀಗ ಸೇತುವೆ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನರಿಯಂದಡ ಗ್ರಾ.ಪಂ. ನೂತನ ಅಧ್ಯಕ್ಷ ಬಿದ್ದಂಡ ಅಚ್ಚಯ್ಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಿದರು. ಇದಕ್ಕೆ ಗ್ರಾಮಸ್ಥರ ಸಹಕಾರವನ್ನೂ ಕೋರಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ, ನೂತನ ಸದಸ್ಯರಾದ ಗ್ರಾ.ಪಂ. ನೂತನ ಅಧ್ಯಕ್ಷ ಬಿದ್ದಂಡ ಅಚ್ಚಯ್ಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಲು ಸೂಚಿಸಿದರು. ಇದಕ್ಕೆ ಗ್ರಾಮಸ್ಥರ ಸಹಕಾರವನ್ನೂ ಕೋರಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ, ನೂತನ ಸದಸ್ಯರಾದ ಕೋಡಿರ ವಿನೋದ್ ನಾಣಯ್ಯ, ಸುಬೀರ್ ಸಿ.ಹಿ., ರಾಣಿ ಗಣಪತಿ, ವಾಣಿ, ಕೌಶಿ, ವಿಲಿನ್ ಮಮ್ಮದ್, ಕಡಂಗ ಪ್ರಾಥಮಿಕ ಸಹಕಾರ ಪತ್ತಿನ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ರತೀಶ್, ಗ್ರಾಮಸ್ಥರಾದ ಪಿ. ಸೋಮಣ್ಣ, ರಾಜು, ಕರುಣ್, ಈರಪ್ಪ, ಲೋಕೇಶ್ ಉಪಸ್ಥಿತರಿದ್ದರು. - ನೌಫಲ್