ಸಿದ್ದಾಪುರ, ಫೆ. ೨೭: ಎಸ್‌ಕೆಎಸ್ ಎಸ್‌ಎಫ್ ಸಂಘಟನೆಯ ಸಂಸ್ಥಾಪನಾ ದಿನದ ಅಂಗವಾಗಿ ನೆಲ್ಲಿ ಹುದಿಕೇರಿ ಶಾಖೆ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ನೆಲ್ಲಿಹುದಿಕೇರಿ ಬಸ್ ನಿಲ್ದಾಣದ ಸಮೀಪ ಸಂಘಟನೆಯ ಅಧ್ಯಕ್ಷ ಕೆ.ಎಂ. ಮೊಯಿನುದ್ದೀನ್ ಧ್ವಜಾರೋಹಣ ಮಾಡಿದ್ದು, ನೆಲ್ಲಿಹುದಿಕೇರಿ ಮಸೀದಿ ಖತೀಬರಾದ ಹಾರಿಸ್ ರಹ್ಮಾನಿ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಸಂಘಟನೆಯ ಕಾರ್ಯಕರ್ತರಾದ ಶಂಷುದ್ದೀನ್, ಶಮೀರ್, ಜಂಶೀರ್, ಅಕ್ಬರ್ ಸೇರಿದಂತೆ ಮತ್ತಿತರರು ಇದ್ದರು.