*ಗೋಣಿಕೊಪ್ಪಲು, ಫೆ. ೨೭: ಮಹಿಳೆಯರು ಸ್ವಾವಲಂಬಿಗಳಾಗಿ ಬಿಡುವಿನ ವೇಳೆಯಲ್ಲಿ ಸ್ವ ಉದ್ಯೋಗ ಮಾಡಿ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಉದ್ದೇಶದಿಂದ ಕೂಡಿಗೆ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿAದ ಅಣಬೆ ಕೃಷಿ, ಜೇನು ಸಾಕಾಣಿಕೆ, ಉಪ್ಪಿನಕಾಯಿ, ಪೆನಾಯಿಲ್, ಸೋಪ್ ಆಯಿಲ್, ಸೋಪು ಪೌಡರ್ ಮತ್ತು ಮಸಾಲೆ ಪದಾರ್ಥಗಳ ತಯಾರಿಕೆಯ ತರಬೇತಿ ನೀಡಲಾಯಿತು. ಗೋಣಿ ಕೊಪ್ಪಲು, ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ೬ ದಿನಗಳ ಕಾಲ ಸುಮಾರು ೩೦ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಹೊಂದಿ ಆತ್ಮವಿಶ್ವಾಸ ಬೆಳೆಸಿಕೊಂಡರು. ಸಂಸ್ಥೆಯ ನಿರ್ದೇಶಕರು ಡಾ. ಜಿ. ಸುರೇಶ್, ಸಿಬ್ಬಂದಿಗಳಾದ ಸಿ.ಇ. ಹರೀಶ್, ಲೀಲಾವತಿ, ಸಲ್ಲಾವುದ್ದೀನ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ವಿವಿಧ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಿದರು. ಗ್ರಾ.ಪಂ. ಸದಸ್ಯರುಗಳಾದ ಕುಲ್ಲಚಂಡ ಪ್ರಮೋದ್ ಗಣಪತಿ, ಶಾಹಿನ್, ಅಂಗನವಾಡಿ ಶಿಕ್ಷಕಿ ಲತಾ ಹಾಜರಿದ್ದರು