ಕಣಿವೆ, ಫೆ. ೨೬ : ಕೊಡಗು ಜಿಲ್ಲೆಯ ನೂರಾರು ಕೃಷಿಕರ ೪೭೧೭ ಎಕರೆ ಕೃಷಿ ಭೂಮಿಯನ್ನು ಮುಳುಗಡೆ ಮಾಡಿರುವ ಹಾರಂಗಿ ಜಲಾಶಯದ ಮುಖ್ಯ ಕಾಲುವೆ ಅವಸಾನದಂಚಿಗೆ ತಲುಪಿದ್ದರೂ ಕೂಡ ಸಂಬAಧಿಸಿದ ನೀರಾವರಿ ನಿಗಮ ಹಾಗೂ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷö್ಯ ವಹಿಸಿದ್ದಾರೆ. ಜಲಾಶಯದ ೧ ರಿಂದ ೯ ನೇ ಕಿಮೀ ವರೆಗೂ ಇರುವ ಮುಖ್ಯ ಕಾಲುವೆಗೆ ದಶಕಗಳ ಹಿಂದೆ ನಿರ್ಮಿಸಿದ್ದ ಕಾಂಕ್ರಿಟ್ ಸ್ಲ್ಯಾಬ್‌ಗಳು ಹಾಗೂ ಕಾಂಕ್ರಿಟ್ ವಾಲ್ ಸಂಪೂರ್ಣ ಕಿತ್ತು ಕುಸಿದು ಬಿದ್ದಿದ್ದರೂ ಕೂಡ ನಾಲೆಯ ಸುವ್ಯವಸ್ಥೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ಕೃಷಿಕರ ಆರೋಪವಾಗಿದೆ. ಸರಿಸುಮಾರು ೧.೩೪ ಲಕ್ಷ ಎಕರೆ ಕೃಷಿ ಭೂಮಿಗೆ ನೀರನ್ನು ಹರಿಸುತ್ತಿರುವ ಜಲಾಶಯದ ಪ್ರಮುಖ ನಾಲೆ ದುಸ್ಥಿತಿಯಿಂದ ಕೂಡಿದೆ.

ಜಲಾಶಯದ ಎಡಬದಿಯಿಂದ ಆರಂಭವಾಗುವ ಮುಖ್ಯ ಕಾಲುವೆಯ ಎರಡೂ ದಂಡೆಗಳ ಮೇಲೆ ಮತ್ತು ಕಾಲುವೆಯ ಒಳಗೆ ಕಾಡು ಜಾತಿಯ ಗಿಡ ಮರಗಳು ಬೆಳೆದು ನಿಂತಿದ್ದು, ಆ ಮರಗಳ ಬೇರುಗಳು ಆಳ ಮತ್ತು ಅಗಲವಾಗಿ ಹರಡಿಕೊಂಡಿರುವುದರಿAದ ಕಾಲುವೆಗೆ ಈ ಹಿಂದೆ ಅಳವಡಿಸಿರುವ ಕಾಂಕ್ರಿಟ್ ವಾಲ್‌ಗಳು ಕುಸಿದು ಬಿದ್ದಿವೆ. ಅಲ್ಲದೇ ನಾಲೆಯ ಇಕ್ಕೆಲಗಳ ಬದಿಯಲ್ಲಿ ಕಟ್ಟಿದ ಸೈಜು ಕಲ್ಲುಗಳು ನೀರಿನ ಹರಿವಿಗೆ ಸಿಕ್ಕಿ ಚೆಲ್ಲಾ ಪಿಲ್ಲಿಯಾಗಿವೆ.

ಇನ್ನೂ ಕೆಲವೆಡೆ ನಾಲೆಗಳ ಒಳಗೆ ಹಾಗೂ ಇಬ್ಬದಿಗಳಲ್ಲಿ ಗಿಡಗಳು ಬೆಳೆದು ಮರಗಳಾಗಿವೆ. ಹಾಗಿದ್ದರೂ ಕೂಡ ನೀರಾವರಿ ನಿಗಮದ ಅಧಿಕಾರಿಗಳು ಪ್ರತಿ ವರ್ಷದ ಮಳೆಗಾಲದ ಮುಂಗಾರು

(ಮೊದಲ ಪುಟದಿಂದ) ಬೆಳೆಗೆ ಕಾಲುವೆಗಳಲ್ಲಿ ಬೆಳೆಗೆ ನೀರು ಹರಿಸುವ ಮುನ್ನ ಮುಖ್ಯ ಕಾಲುವೆಗಳು ಹಾಗೂ ಉಪಕಾಲುವೆಗಳಲ್ಲಿನ ಹೂಳು ಹಾಗೂ ಕಾಡು ಗಿಡ ಕಟಾವು ಮಾಡಿ ನೀರಿನ ಸರಾಗ ಹರಿವಿಗೆ ಟೆಂಡರ್ ಕರೆದು ಕಾಮಗಾರಿ ಮಾಡುತ್ತಾರೆ. ಆದರೆ ಇಲ್ಲಿ ಕಾಲುವೆಗಳ ಒಳಗೆ ಬೆಳೆದಿರುವ ಮರಗಳ ಬುಡಗಳನ್ನು ನೋಡಿದರೆ ಜಲಾಶಯದ ಆರಂಭದ ಅಂದರೆ ೧೯೮೨ ರಿಂದ ಈತನಕವೂ ಇಲ್ಲಿ ಕಾಲುವೆಯಲ್ಲಿ ತುಂಬಿರುವ ಹೂಳಾಗಲೀ, ಬೆಳೆದಿರುವ ಕಾಡಾಗಲೀ ತೆರವು ಮಾಡದೇ ಇರುವುದು ಗೋಚರಿಸುತ್ತದೆ. ಕಾಲುವೆಯ ಇಂದಿನ ಈ ಸ್ಥಿತಿಯನ್ನು ಸರಿಪಡಿಸದೇ ಹಾಗೆಯೇ ಬಿಟ್ಟರೆ ಮುಂದಿನ ಮುಂಗಾರಿನಲ್ಲಿ ನಾಲೆ ಒಡೆಯುವ ಅಪಾಯವೇ ಹೆಚ್ಚಿದೆ.

ನೀರಾವರಿ ನಿಗಮದ ಅಧಿಕಾರಿಗಳು ಈಗಲೇ ಎಚ್ಚೆತ್ತು ಈ ನಾಲೆಗೆ ಒದಗಿರುವ ಅಪಾಯವನ್ನು ಪರಿಹರಿಸಬೇಕಾಗಿದೆ.

ಏಕೆಂದರೆ ಈಗಾಗಲೇ ಅಪಾಯದ ಸ್ಥಿತಿಯಲ್ಲಿರುವ ಮುಖ್ಯ ಕಾಲುವೆ ಒಂದು ವೇಳೆ ಒಡೆದು ಹೋದಲ್ಲಿ ಅದರಲ್ಲಿ ಹರಿವ ಎರಡು ಸಾವಿರ ಕ್ಯೂಸೆಕ್ಸ್ ನೀರು ರೈತಾಪಿಗಳ ಕೃಷಿ ಭೂಮಿಯಲ್ಲಿ ಹರಿದಲ್ಲಿ ಆಗಬಹುದಾದ ನಷ್ಟದ ಹೊಣೆಯನ್ನು ನೀರಾವರಿ ನಿಗಮವೆ ಹೊರಬೇಕಾಗುತ್ತದೆ.

ಆದ್ದರಿಂದ ಕೂಡಲೇ ಅಧಿಕಾರಿಗಳು ನಾಲೆಯ ದುಸ್ಥಿತಿಯನ್ನು ಪರಿಶೀಲಿಸಿ ಆಧುನಿಕ ಪದ್ಧತಿಯಲ್ಲಿ ನಾಲೆಯನ್ನು ನಿರ್ಮಿಸಬೇಕು ಹಾಗೂ ಅಗತ್ಯ ಇರುವ ಕಡೆಗಳಲ್ಲಿ ಸಮರ್ಪಕವಾದ ತೂಬುಗಳನ್ನು ನಿರ್ಮಿಸಿ ನೀರು ಪೋಲಾಗದಂತೆ ಜಾಗೃತೆ ವಹಿಸಬೇಕೆಂದು ಹುದುಗೂರಿನ ರೈತ ಐಮುಡಿಯಂಡ ಗಣೇಶ್ ಒತ್ತಾಯಿಸಿದ್ದಾರೆ.

ಕೂಡಲೇ ಶಾಸಕರು ಈ ನೀರಾವರಿ ನಿಗಮದ ಅಚ್ಚು ಕಟ್ಟು ಪ್ರದೇಶದಲ್ಲಿ ಸುತ್ತಾಡಿ ಅಲ್ಲಿನ ಸಮಸ್ಯೆಗಳನ್ನು ಶಾಸಕರು ಖುದ್ದು ಅರಿತು ಬಗೆಹರಿಸಿದರೆ ಕೃಷಿಕರ ಹತ್ತಾರು ವರ್ಷಗಳ ಅಳಲು ನೋವು ಹಾಗೂ ಸಂಕಟ ಶಮನವಾಗುತ್ತದೆ.