ಸುಂಟಿಕೊಪ್ಪ, ಫೆ. ೨೮: ಸ್ಥಳೀಯ ವಾಹನ ಚಾಲಕರ ಮಾಲೀಕರ ಸಂಘದ ಮುಂಭಾಗದಲ್ಲಿ ಖಾಸಗಿ ಬಸ್ ನಿಲ್ದಾಣವಿದ್ದು ಇಲ್ಲಿ ಖಾಸಗಿ ವಾಹನಗಳಾದ ಕಾರು ಬೈಕುಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ಇದರಿಂದ ಬೇರೆ ಖಾಸಗಿ ಬಸ್‌ಗಳನ್ನು ರಾಷ್ಟಿçÃಯ ಹೆದ್ದಾರಿಯಲ್ಲಿ ನಿಲ್ಲಿಸುತ್ತಿದ್ದು, ಹೊರ ಜಿಲ್ಲೆಯಿಂದ ಬರುವ ವಾಹನಗಳಿಗೆ, ಪ್ರಯಾಣಿಕರಿಗೆ, ಶಾಲಾ-ಕಾಲೇಜು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಖಾಸಗಿ ಬಸ್‌ಗಳನ್ನು ಸÀಂಬAಧಿಸಿದ ಜಾಗದಲ್ಲಿ ನಿಲ್ಲಸಲು ಅನುವು ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಕಾರ್ಯದರ್ಶಿ ಸಂತೋಷ್ (ದಿನು), ಉಪಾಧ್ಯಕ್ಷ ವಿಶ್ವನಾಥ ಪೂಜಾರಿ, ಮನು, ಅಶೋಕ, ಸಹ ಕಾರ್ಯದರ್ಶಿ ಸಿಕಂದರ್ ಶರೀಫ್, ಸಲಹೆಗಾರರಾದ ಮಂಜು, ನಾರಾಯಣ ಹಾಜರಿದ್ದರು.