ಮಡಿಕೇರಿ, ಫೆ. ೨೮: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ೩೭ನೇ ರಾಷ್ಟಿçÃಯ ನೃತ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಆಚಾರ, ವಿಚಾರ, ಆಹಾರ ಶೈಲಿ, ಕಲೆಗಳಿಗೆ ತನ್ನದೇ ಆದ ಇತಿಹಾಸವಿದೆ. ಪ್ರತಿಯೊಬ್ಬರು ಕೂಡ ಒಂದು ವಿಚಾರದಲ್ಲಿ ಪ್ರತಿಭಾನ್ವಿತರಾಗಿರು ತ್ತಾರೆ. ಅದನ್ನು ಗುರುತಿಸುವ ಕೆಲಸವಾಗಬೇಕು. ಅಭಿರುಚಿ ಇರುವವರು ಶಾಸ್ತಿçÃಯ ಕಲೆಗಳ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು. ಶಾಸ್ತಿçÃಯ ಕಲೆಗಳ ಉಳಿವಿಗೆ ಸರಕಾರ ಅನುದಾನ ಮೀಸಲಿಟ್ಟರೆ ಕಾರ್ಯಕ್ರಮ ರೂಪಿಸುವವರಿಗೆ ಸಹಕಾರಿಯಾಗು ತ್ತದೆ. ಈ ರೀತಿಯ ಕಾರ್ಯ ಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವಂತಾಗಲಿ ಎಂದು ಹಾರೈಸಿದರು.
ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಯಾವ ದಿಕ್ಕಿನಲ್ಲಿ ತೆರಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಈ ಹಿನ್ನೆಲೆ ಪೋಷಕರು ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ಹೆಚ್ಚಿದೆ. ಕಲೆ, ಸಂಸ್ಕçತಿಯಿAದ ಮಕ್ಕಳು ಪ್ರಜ್ಞಾವಂತ ನಾಗರಿಕರಾಗುತ್ತಾರೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಬೇಕು. ಕಲಾ ರಂಗದಲ್ಲಿಯೂ ಜೀವನ ಕಂಡುಕೊಳ್ಳುವ ಅವಕಾಶ ವಿದೆ ಎಂದ ಅವರು, ದುಶ್ಚಟಗಳು ವ್ಯಕ್ತಿಯನ್ನು ನಾಶಮಾಡುತ್ತದೆ. ಉತ್ತಮ ಹವ್ಯಾಸ, ಕಲೆಗಳನ್ನು ಮೈಗೂಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಯುವ ಜನಾಂಗ ಆತ್ಮವಿಶ್ವಾಸ, ದೃಢತೆ, ಏಕಾಗ್ರತೆ ಬೆಳೆಸಿಕೊಂಡರೆ ಭವಿಷ್ಯವನ್ನು ಎದುರಿಸಬಹುದು. ಎಷ್ಟೆ ಸ್ವಾವಲಂಬಿಯಾದರು ಕೂಡ ಗುರು, ಹಿರಿಯರನ್ನು ಗೌರವಿಸಬೇಕು. ಎಂದರು.
ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಸೇನೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಕೊಡಗು ದೊಡ್ಡ ಕೊಡುಗೆ ನೀಡಿದೆ. ಲಲಿತ ಕಲೆಗಳಿಗೆ ಕೊಡಗಿನಲ್ಲಿ ಪ್ರೋತ್ಸಾಹ ಕಡಿಮೆ ಇದೆ. ಜಿಲ್ಲೆಯಲ್ಲಿ ಸುಸಜ್ಜಿತ ಸಭಾಂಗಣದ ಕೊರತೆ ಇದೆ. ಈ ಹಿನ್ನೆಲೆ ಸರ್ಕಾರ ಉತ್ತಮ ಸಭಾಂಗಣವನ್ನು ನಿರ್ಮಿಸಬೇಕೆಂದು ಮನವಿ ಮಾಡಿದ ಅವರು, ಸಾಹಿತ್ಯ, ಸಂಗೀತ, ಕಲೆ, ಶಿಲ್ಪಕಲೆ, ಲಲಿತಾ ಕಲೆಗಳಲ್ಲಿ ಮಕ್ಕಳು ತೊಡಗಿಸಿ ಕೊಳ್ಳಬೇಕು. ಇದರಿಂದ ಜಾತಿ, ಧರ್ಮ ಮೀರಿ ಮಾನವತವಾದಿ ಯಾಗಿ ಬದುಕಲು ಸಹಕಾರಿ ಯಾಗುತ್ತದೆ ಎಂದರು.
ಕಿಗ್ಗಟ್ಟುನಾಡು ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಜಿಮ್ಮಿ ಅಯ್ಯಣ್ಣ ಅಧ್ಯಕ್ಷತೆೆ ವಹಿಸಿ ಮಾತನಾಡಿದರು.. ಶಿಕ್ಷಕಿ ಜಯಲಕ್ಷಿö್ಮ, ಲಿಮ್ಕಾ ದಾಖಲೆ ಮಾಡಿರುವ ನೃತ್ಯ ಕಲಾವಿದ ರವೀಂದ್ರ, ಸಂಸ್ಥೆಯ ಸಲಹೆಗಾರರಾದ ಹಾಸನ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ವಿ. ಮಂಜುನಾಥ್ ಹಾಗೂ ವೃತ್ತಿ ಶಿಕ್ಷಕಿ ಪ್ರೀತಾ ಕೃಷ್ಣ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಾಡೆಲಿಂಗ್ ತರಬೇತುದಾರರಾದ ಐಶ್ವರ್ಯ ಗೌಡ ಉಪಸ್ಥಿತರಿದ್ದರು.
ಅಕಾಡೆಮಿ ಮುಖ್ಯಸ್ಥೆ ಹಾಗೂ ಕೊಡಗು ದೊಡ್ಡ ಕೊಡುಗೆ ನೀಡಿದೆ. ಲಲಿತ ಕಲೆಗಳಿಗೆ ಕೊಡಗಿನಲ್ಲಿ ಪ್ರೋತ್ಸಾಹ ಕಡಿಮೆ ಇದೆ. ಜಿಲ್ಲೆಯಲ್ಲಿ ಸುಸಜ್ಜಿತ ಸಭಾಂಗಣದ ಕೊರತೆ ಇದೆ. ಈ ಹಿನ್ನೆಲೆ ಸರ್ಕಾರ ಉತ್ತಮ ಸಭಾಂಗಣವನ್ನು ನಿರ್ಮಿಸಬೇಕೆಂದು ಮನವಿ ಮಾಡಿದ ಅವರು, ಸಾಹಿತ್ಯ, ಸಂಗೀತ, ಕಲೆ, ಶಿಲ್ಪಕಲೆ, ಲಲಿತಾ ಕಲೆಗಳಲ್ಲಿ ಮಕ್ಕಳು ತೊಡಗಿಸಿ ಕೊಳ್ಳಬೇಕು. ಇದರಿಂದ ಜಾತಿ, ಧರ್ಮ ಮೀರಿ ಮಾನವತವಾದಿ ಯಾಗಿ ಬದುಕಲು ಸಹಕಾರಿ ಯಾಗುತ್ತದೆ ಎಂದರು.
ಕಿಗ್ಗಟ್ಟುನಾಡು ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಜಿಮ್ಮಿ ಅಯ್ಯಣ್ಣ ಅಧ್ಯಕ್ಷತೆÉ ವಹಿಸಿ ಮಾತನಾಡಿದರು.. ಶಿಕ್ಷಕಿ ಜಯಲಕ್ಷಿö್ಮ, ಲಿಮ್ಕಾ ದಾಖಲೆ ಮಾಡಿರುವ ನೃತ್ಯ ಕಲಾವಿದ ರವೀಂದ್ರ, ಸಂಸ್ಥೆಯ ಸಲಹೆಗಾರರಾದ ಹಾಸನ ಜಿಲ್ಲಾ ಉಪವಿಭಾಗಾಧಿಕಾರಿ ಡಾ.ವಿ. ಮಂಜುನಾಥ್ ಹಾಗೂ ವೃತ್ತಿ ಶಿಕ್ಷಕಿ ಪ್ರೀತಾ ಕೃಷ್ಣ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಾಡೆಲಿಂಗ್ ತರಬೇತುದಾರರಾದ ಐಶ್ವರ್ಯ ಗೌಡ ಉಪಸ್ಥಿತರಿದ್ದರು.
ಅಕಾಡೆಮಿ ಮುಖ್ಯಸ್ಥೆ ಹಾಗೂ ತರಬೇತುದಾರರಾದ ಸ್ವಾತಿ ಪಿ ಬಾರದ್ವಾಜ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ವಿವಿಧ ಕಲಾ ತಂಡಗಳ ಕಲಾವಿದರು ಶಾಸ್ತಿçÃಯ ನೃತ್ಯ ಕಲಾ ಪ್ರಕಾರಗಳನ್ನು ಈ ಸಂದರ್ಭ ಪ್ರಸ್ತುತಪಡಿಸಿದರು. ಪ್ರಾರಂಭದಲ್ಲಿ ಕೊಡಗಿನ ಕಲಾವಿದೆಯರು ಕಾವೇರಿ ಮಾತೆ ಆರಾಧನೆಯ ಸ್ವಾಗತ ನೃತ್ಯ ಪ್ರದರ್ಶಿಸಿದರು. ಅಕಾಡೆಮಿಯ ಕೊಡಗು ವಿಭಾಗದ ಅಧ್ಯಕ್ಷೆ ಹಾಗೂ ನೃತ್ಯ ತರಬೇತುದಾರರಾದ ಬಿ.ಎ. ಪ್ರೇಕ್ಷ ವಂದಿಸಿದರು.