*ಗೋಣಿಕೊಪ್ಪ, ಫೆ. ೨೮: ತಿತಿಮತಿ ಗ್ರಾಮ ಪಂಚಾಯಿತಿಯ ಗ್ರಾಮಸಭೆ ತಾ. ೮ ರಂದು ಗ್ರಾ.ಪಂ. ಅಧ್ಯಕ್ಷೆ ಹೆಚ್.ಕೆ. ಅಶಾ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯ ಭವನದಲ್ಲಿ ನೋಡಲ್ ಅಧಿಕಾರಿ ಚೆಲುವರಾಜು ಇವರ ಉಪಸ್ಥಿತಿಯಲ್ಲಿ ಗ್ರಾಮಸಭೆ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ಮಾಹಿತಿ ನೀಡಿದ್ದಾರೆ.
ಮೊದಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ವಾರ್ಡ್ಗಳ ಸಭೆ ನಡೆಯಲಿದ್ದು, ತಾ. ೧ ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಮೂರನೇ ವಿಭಾಗದ ಸಭೆ ಮರೂರು ಆಶ್ರಮ ಶಾಲೆಯಲ್ಲಿ, ನಾಲ್ಕನೇ ವಿಭಾಗದ ಸಭೆ ಮಧ್ಯಾಹ್ನ ೨ ಗಂಟೆಗೆ ಚೇಣಿಹಡ್ಲು ಅಂಗನವಾಡಿಯಲ್ಲಿ ಮತ್ತು ೫ನೇ ವಾರ್ಡ್ ಸಭೆ ಮಧ್ಯಾಹ್ನ ೧೨ ಗಂಟೆಗೆ ರೇಷ್ಮೆ ಹಡ್ಲು ಸಮುದಾಯ ಭವನದಲ್ಲಿ, ತಾ. ೨ ರಂದು ೧ನೇ ವಿಭಾಗದ ವಾರ್ಡ್ ಸಭೆ ಕೊಪ್ಪ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬೆಳಗ್ಗೆ ೧೦.೩೦ಕ್ಕೆ, ಎರಡನೇ ವಿಭಾಗದ ಸಭೆ ಮಧ್ಯಾಹ್ನ ೨ ಗಂಟೆಗೆ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.