ಮಡಿಕೇರಿ, ಏ. ೧: ಕಗ್ಗೋಡ್ಲಿನ ಶ್ರೀ ವೃಷಭಾರೂಢ ಭಗವತಿ ಕ್ಷೇತ್ರದ ವಾರ್ಷಿಕ ಉತ್ಸವ ತಾ. ೧೩ ರಿಂದ ೧೯ ರವರೆಗೆ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ತಾ. ೯ ರಂದು ಬೆಳಿಗ್ಗೆ ೯ ಗಂಟೆಯಿAದ ಗ್ರಾಮಸ್ಥರು ಶ್ರೀ ಭಗವತಿ ಸನ್ನಿಧಿಯಿಂದ ಹೊರಟು ಆದಿ ಸ್ಥಾನದಲ್ಲಿ ಭಗವತಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ನಂತರ ಶ್ರೀ ಬೊಟ್ಲಪ್ಪ, ಬೇಟೆ ಅಯ್ಯಪ್ಪ ಹಾಗೂ ಶ್ರೀ ಭಗವತಿ ದೇವರಿಗೆ ಮಹಾಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಕಟ್ಟು ಬೀಳಲಿದೆ.

ತಾ. ೧೩ ರಂದು ಬೆಳಿಗ್ಗೆ ೯.೩೦ಕ್ಕೆ ಭಗವತಿ ನಿತ್ಯ ಪೂಜೆ ಜರುಗಲಿದ್ದು, ೧೦.೩೦ಕ್ಕೆ ಪಂಚಗವ್ಯ ಯೋಜನೆ, ಪುಣ್ಯಾಹ ವಾದನ, ಋತ್ವಿಗ್ವರಣ, ಮಹಾಗಣಪತಿ ಹೋಮ, ಮಧ್ಯಾಹ್ನ ೧೨.೩೦ಕ್ಕೆ ಭಗವತಿ ಮಹಾಪೂಜೆ ನಡೆಯಲಿದೆ. ಸಂಜೆ ೬ ಗಂಟೆಯಿAದ ಸಾಮೂಹಿಕ ಪ್ರಾರ್ಥನೆ, ಉತ್ಸವಾರಂಭ, ಧ್ವಜಾರೋಹಣ, ಪರಿವಾರ ದೇವತಾ ಬಲಿ, ದೇವಿ ದರ್ಶನ ನಂತರ ಮಹಾಪೂಜೆ ನಡೆಯಲಿದೆ. ತಾ. ೧೪ ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ, ೧೦ ಗಂಟೆಗೆ ನವಗ್ರಹ ವೃಕ್ಷಪೂಜೆ ನಡೆಯಲಿದ್ದು, ಮಧ್ಯಾಹ್ನ ೧೨.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ ಜರುಗಲಿದೆ. ಸಂಜೆ ೫.೩೦ ರಿಂದ ಪರಿವಾರ ದೇವತಾ ಬಲಿ, ತೂಚಂಬಲಿ, ಶ್ರೀ ಭಗವತಿ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ತಾ. ೧೫ ರಂದು ಬೆಳಿಗ್ಗೆ ಇರುಬೊಳಕ್, ೯.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ, ಬೆಳಿಗ್ಗೆ ೧೦.೩೦ಕ್ಕೆ ಶ್ರೀ ಧರ್ಮಶಾಸ್ತಾದ ದೇವರಿಗೆ ಏಕಾದಶ ರುದ್ರಾಭಿಷೇಕ ಜರುಗಲಿದೆ. ಮಧ್ಯಾಹ್ನ ೧೨.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೫.೩೦ಕ್ಕೆ ಪರಿವಾರ ದೇವತಾ ಬಲಿ, ತೂಚಂಬಲಿ, ಶ್ರೀ ಮಹಾಪೂಜೆ ನಡೆಯಲಿದೆ. ತಾ. ೧೬ ರಂದು ಬೆಳಿಗ್ಗೆ ೫ ಗಂಟೆಗೆ ಇರುಬೊಳಕ್, ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಭಗವತಿ ಮಹಾಪೂಜೆ, ಬೆಳಗ್ಗೆ ೧೦.೩೦ಕ್ಕೆ ಲಕ್ಷಿö್ಮ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ ನಡೆಯಲಿದೆ. ಸಂಜೆ ೫.೩೦ಕ್ಕೆ ಪರಿವಾರ ದೇವತಾಬಲಿ, ನೆರುಪುಬಲಿ, ವಸಂತ ಪೂಜೆ, ಶ್ರೀ ಭಗವತಿ ಮಹಾಪೂಜೆ ಜರುಗಲಿದೆ. ತಾ. ೧೭ ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ, ೧೦.೩೦ಕ್ಕೆ ಆಶ್ಲೇಷಬಲಿ, ಮಧ್ಯಾಹ್ನ ೧೨.೩೦ಕ್ಕೆ ಶ್ರೀ ಭಗವತಿ ಮಹಾಪೂಜೆ ಜರುಗಲಿದೆ. ಸಂಜೆ ೫.೩೦ಕ್ಕೆ ಪರಿವಾರ ದೇವತಾ ಬಲಿ, ಶ್ರೀ ಭಗವತಿ ಅವಭ್ರತ ಸ್ನಾನ, ಶ್ರೀ ದೇವರ ನೃತ್ಯಬಲಿ, ಮಹಾಪೂಜೆ ನಡೆಯಲಿದೆ. ತಾ. ೧೮ ರಂದು ಬೆಳಿಗ್ಗೆ ೯ ಗಂಟೆಯಿAದ ನವಕ ಕಲಶ ಪೂಜೆ, ಧ್ವಜ ಅವರೋಹಣ, ಭಂಡಾರ ಎಣಿಕೆ, ಮಧ್ಯಾಹ್ನ ೧೨ ಗಂಟೆಗೆ ಕಲಶಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ತಾ. ೧೯ ರಂದು ಮಧ್ಯಾಹ್ನ ೨ ಗಂಟೆಯಿAದ ಬೇಟೆ ಅಯ್ಯಪ್ಪ ತೆರೆ ನಡೆಯಲಿದೆ. ಏಳು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಮಧ್ಯಾಹ್ನದ ಊಟ ಹಾಗೂ ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.