ಮಡಿಕೇರಿ, ಏ.೧; ಪೂರ್ಣ ಪ್ರಮಾಣದ ಕನ್ನಡ ಬಳಕೆ ಇಂದಿನ ಆಧುನಿಕ ಯುಗದಲ್ಲಿ ಕಷ್ಟಸಾಧ್ಯವಾಗಿದೆ. ಓದುಗರಿಗೂ ಸುಲಭದಲ್ಲಿ ಅರ್ಥವಾಗುವಂತೆ ಕೆಲವೊಂದು ಆಡುಭಾಷೆಯನ್ನು ಕೂಡ ಬಳಸುವ ಮೂಲಕ ಮಾಧ್ಯಮಗಳು ಸುದ್ದಿ, ವರದಿಗಳನ್ನು ಪ್ರಕಟಿಸುವ ಅನಿವಾರ್ಯತೆಯಿದೆ ಎಂದು ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.

ಮಾಧ್ಯಮಗಳಲ್ಲಿ ಸರಿಕನ್ನಡ ಬಳಕೆ ಕುರಿತಾಗಿ ಕನ್ನಡ ಜಾಗೃತಿ ಸಮಿತಿಯು ‘ಶಕ್ತಿ’ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡದ ಬಳಕೆ ಕುರಿತಾಗಿ ಜಾಗೃತಿ ಸಮಿತಿಯು ಆಗಿಂದಾಗ್ಗೆ ಸಂವಾದ ರೂಪದ ಕಾರ್ಯಕ್ರಮಗಳನ್ನು ನಡೆಸುವದರಿಂದ ಕನ್ನಡದ ಅಭಿವೃದ್ಧಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಅವರು ಸಲಹೆಯಿತ್ತರು.

‘ಶಕ್ತಿ’ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಿಕೆಗಳಲ್ಲಿ ಕನ್ನಡದ ಬಳಕೆ ಅಷ್ಟೊಂದು ಕೆಟ್ಟದಾಗಿಲ್ಲ, ಭಾಷೆಗೆ, ಪದಗಳಿಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆದರೆ ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಕನ್ನಡವನ್ನು ಕೆಟ್ಟದಾಗಿ ಬಳಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಈ ರೀತಿಯ ಆಂದೋಲನಗಳಾಗಬೇಕಿದೆ ಎಂದು ಹೇಳಿದರು. ವಾಣಿಜ್ಯೋದ್ಯಮಿಗಳ ಸಂಸ್ಥೆಯಿAದ ಈ ಹಿಂದೆ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಂದೋಲನ ಮಾಡಲಾಗಿತ್ತು, ಅದೇ ರೀತಿ ಜಾಗೃತಿ ಸಮಿತಿ ಕೂಡ ಸಂಸ್ಥೆಯ ಕನ್ನಡದ ಅಭಿವೃದ್ಧಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಅವರು ಸಲಹೆಯಿತ್ತರು.

‘ಶಕ್ತಿ’ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಿಕೆಗಳಲ್ಲಿ ಕನ್ನಡದ ಬಳಕೆ ಅಷ್ಟೊಂದು ಕೆಟ್ಟದಾಗಿಲ್ಲ, ಭಾಷೆಗೆ, ಪದಗಳಿಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆದರೆ ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಕನ್ನಡವನ್ನು ಕೆಟ್ಟದಾಗಿ ಬಳಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಈ ರೀತಿಯ ಆಂದೋಲನಗಳಾಗಬೇಕಿದೆ ಎಂದು ಹೇಳಿದರು. ವಾಣಿಜ್ಯೋದ್ಯಮಿಗಳ ಸಂಸ್ಥೆಯಿAದ ಈ ಹಿಂದೆ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವಂತೆ ಆಂದೋಲನ ಮಾಡಲಾಗಿತ್ತು, ಅದೇ ರೀತಿ ಜಾಗೃತಿ ಸಮಿತಿ ಕೂಡ ಸಂಸ್ಥೆಯ ನ್ಯೂಸ್’ ಎಂಬದೂ ಸೇರಿದಂತೆ ಕೆಟ್ಟದಾಗಿ ಭಾಷೆ ಬಳಕೆ ಮಾಡಲಾಗುತ್ತಿದೆ. ಇಂತಹ ವಿಚಾರಗಳತ್ತ ದೊಡ್ಡದಾದ ಆಂದೋಲನದ ಅಗತ್ಯವಿದೆ ಎಂದು ಹೇಳಿದರಲ್ಲದೆ, ಸಮಿತಿಯೊಂದಿಗೆ ಕಸಾಪ ಕೈಜೋಡಿಸಲಿದೆ ಎಂದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಅವರು, ಸರಕಾರೀ ಶಾಲೆಗಳಲ್ಲಿ ಕಲಿತ ಮಕ್ಕಳಲ್ಲಿ ಕನ್ನಡ ಬಳಕೆ ಸ್ಪಷ್ಟವಾಗಿರುತ್ತದೆ, ಕಾನ್ವೆಂಟ್ ಶಾಲೆಗಳಲ್ಲಿ ಕಲಿತವರಿಂದ ಇಂತಹ ತಪ್ಪುಗಳಾಗುತ್ತಿರಬಹುದು; ಮಾಧ್ಯಮಗಳಲ್ಲಿ ‘ಬ್ರೇಕಿಂಗ್ ನ್ಯೂಸ್’ ಎಂದು ಬಳಸುವ ಬದಲಿಗೆ ತಾಜಾ ಸುದ್ದಿ, ಈ ಕ್ಷಣದ ಸುದ್ದಿ ಎಂದು ಕನ್ನಡದಲ್ಲೇ ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಎಂದು ಸಲಹೆ ಮಾಡಿದರು. ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್.ಮಹೇಶ್ ಮಾಧ್ಯಮಗಳಲ್ಲಿ ಸರಿಕನ್ನಡ ಬಳಕೆ ಬಗ್ಗೆ ಸಮಿತಿ ಪ್ರಕಟಿಸಿರುವ ಹಕ್ಕೊತ್ತಾಯ ಗಳನ್ನು ಮಂಡಿಸಿ ಕನ್ನಡದ ಕಾಯಕಕ್ಕೆ ಎಲ್ಲರೂ ಕೈಜೋಡಿಸುವಂತೆ ಕೋರಿದರು. ಸಮಿತಿ ಸದಸ್ಯರುಗಳಾದ ಭಾರತಿ ರಮೇಶ್, ಈ. ರಾಜು, ಕಸಾಪ ಜಿಲ್ಲಾ ನಿರ್ದೇಶಕ ಕೋಡಿ ಚಂದ್ರಶೇಖರ್, ‘ಶಕ್ತಿ ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಜಿ.ಆರ್. ಪ್ರಜ್ವಲ್, ಉಪ ಸಂಪಾದಕರುಗಳಾದ ಕಾಯಪಂಡ ಶಶಿ ಸೋಮಯ್ಯ, ಎಂ.ಇ.ಮಹಮ್ಮದ್ ಇನ್ನಿತರರಿದ್ದರು. ಜಾಗೃತಿ ಸಮಿತಿ ಸದಸ್ಯ ಕಾಜೂರು ಸತೀಶ್ ವಂದಿಸಿದರು.