ಪ.ಪA. ಅಧ್ಯಕ್ಷ
ಕುಶಾಲನಗರ, ಏ. ೨: ಪಟ್ಟಣ ಪಂಚಾಯಿತಿ ವಾಣಿಜ್ಯ ಸಂಕೀರ್ಣ ಕಾಮಗಾರಿ ಸದ್ಯದಲ್ಲೇ ಪುನರಾರಂಭ ಗೊಳ್ಳಲಿದೆ ಎಂದು ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ತಿಳಿಸಿದ್ದಾರೆ. ಪಂಚಾಯತಿ ವಿಶೇಷ ಸಭೆಯಲ್ಲಿ ಈ ಬಗ್ಗೆ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಜೈವರ್ಧನ್, ಹಳೆಯ ಮಳಿಗೆಗಳಲ್ಲಿ ಕೆಲವು ವ್ಯಾಜ್ಯ ಹಿನ್ನೆಲೆಯಲ್ಲಿ ಕಾಮಗಾರಿಗೆ ತೊಡಕುಂಟಾಗಿದೆ ಎಂದು ಮಾಹಿತಿ ನೀಡಿದರು. ವಾಣಿಜ್ಯ ಸಂಕೀರ್ಣ ತೆರವು ಮತ್ತು ಪಂಚಾಯಿತಿ ಕಟ್ಟಡದ ಕಾಮಗಾರಿಯು ವಿಳಂಬವಾಗಲು ಪಂಚಾಯಿತಿಯ ಕಿರಿಯ ಅಭಿಯಂತರರಾದ ಶ್ರೀದೇವಿ ಅವರ ನಿರ್ಲಕ್ಷö್ಯ ಕಾರಣ ಎಂದು ಸದಸ್ಯರಾದ ವಿಎಸ್ ಆನಂದ್ ಕುಮಾರ್, ಪ್ರಮೋದ್ ಮುತ್ತಪ್ಪ, ಡಿ.ಕೆ. ತಿಮ್ಮಪ್ಪ ಆರೋಪಿಸಿ ಅಧಿಕಾರಿಯನ್ನು ಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು, ಈ ಸಂದರ್ಭ ಮಧ್ಯ ಪ್ರವೇಶಿಸಿದ ಅಧ್ಯಕ್ಷರು ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ತಡವಾಗಿದ್ದು, ಮುಂದಿನ ದಿನಗಳಲ್ಲಿ ವಿವಾದಿತ ಸ್ಥಳವನ್ನು ಬಿಟ್ಟು ನಿರ್ಮಾಣ ಕಾರ್ಯ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಟ್ಟಡದ ಬಾಬ್ತು ಅಧಿಕ ಹಣವನ್ನು ಪಾವತಿಸಲಾಗಿರುವ ಬಗ್ಗೆ ತನಿಖೆ ನಡೆಸಲು ಸದಸ್ಯರು ಆಗ್ರಹಿಸಿದರು. ಜಿಲ್ಲಾಧಿಕಾರಿ ಗಮನಕ್ಕೆ ತರುವಂತೆ ಒತ್ತಾಯಿಸಿದರು. ಪಟ್ಟಣ ಪಂಚಾಯಿತಿಗೆ ಸೇರಿದ ಕುರಿ, ಕೋಳಿ ಮಾಂಸದ ೬ ಅಂಗಡಿಗಳ ಪೈಕಿ, ಮೂರು ಅಂಗಡಿಗಳು ಮಾತ್ರ ಹರಾಜಾಗಿದ್ದು, ಹಸಿ ಮೀನು ಮಾರಾಟದ ಅಂಗಡಿಗಳು ಹರಾಜು ಆಗದಿರುವ ಬಗ್ಗೆ ಸಭೆಯ ಗಮನಕ್ಕೆ ತಂದ ಸದಸ್ಯರು, ಕಳೆದ ಮೂರು ವರ್ಷಗಳ ಹರಾಜು ಪ್ರಕ್ರಿಯೆಗಿಂತ ಕಡಿಮೆ ದರದಲ್ಲಿ ಹರಾಜಾಗಿದ್ದು, ಎಪಿಎಂಸಿಗೆ ಸಂತೆಯನ್ನು ವರ್ಗಾವಣೆ ಮಾಡಿದ್ದು ಪ್ರಮುಖ ಕಾರಣ ಎಂದರು. ಈ ವಿಷಯವನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತರುವಂತೆ ಸದಸ್ಯರಾದ ಪ್ರಮೋದ್ ಮುತ್ತಪ್ಪ ಸೂಚಿಸಿದರು. ಉಪಾಧ್ಯಕ್ಷರಾದ ಸುರಯ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ ಬಿ ಸುರೇಶ್, ಸದಸ್ಯರಾದ ರೇಣುಕಾ ಜಗದೀಶ್, ರೂಪ ಉಮಾಶಂಕರ್, ಜಯಲಕ್ಷ್ಮಿ, ಕೆ.ಜಿ.ಮನು, ಜಗದೀಶ್, ಸುಂದರೇಶ್, ಶೇಕ್ ಖಲೀಮುಲ್ಲಾ, ಎಂ.ವಿ. ನಾರಾಯಣ, ಜಯಲಕ್ಷ್ಮಿ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಇದ್ದರು.