ನಾಪೋಕ್ಲು, ಏ. ೧: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿಯಲ್ಲಿ ತಾ. ೩೧ರ ಮುಂಜಾನೆ ಪುದಿಯೋದಿ ದೇವರ ವಾರ್ಷಿಕ ಕೋಲ ಶ್ರದ್ಧಾಭಕ್ತಿಯಿಂದ ನಡೆಯಿತು.
ಮುಂಜಾನೆ ಸೂರ್ಯೋದಯದ ಮಂಜು ಮುಸುಕಿದ ವಾತಾವರಣದÀ ನಡುವೆ ಬರುವ ಕೋಲ, ತನ್ನ ನಾಲ್ಕು ಕಡೆಗಳಲ್ಲಿ ಉರಿಯುತ್ತಿರುವ ಪಂಜು, ಅದಕ್ಕೆ ಭಕ್ತರ ಹರಕೆಯ ತುಪ್ಪ ಮತ್ತು ಎಣ್ಣೆ ಸುರಿಯುವಿಕೆಯಿಂದ ಮೇಲೇಳುವ ಅಗ್ನಿ ಜ್ವಾಲೆ, ಕೋಲದ ಎರಡು ಕೈಯಲ್ಲಿರುವ ಕಾದ ಬಳೆಗಳಿಗೆ ನೀರು ತಾಗಿಸುವಾಗಿನ ಶಬ್ಧ ಇದನ್ನೆಲ್ಲ ನೋಡಿ ಭಕ್ತರು ಪುನೀತರಾದರು.
ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ನಂಬಿದವರಿಗೆ ಒಳಿತು ಮಾಡುವ ದೇವರೆಂದು ಪ್ರಸಿದ್ಧಿ ಪಡೆದಿದೆ. ಊರಿಗೆ ಬರುವ ಮಹಾಮಾರಿ ರೋಗಗಳನ್ನು ತಡೆದು ಊರನ್ನು ಕಾಪಾಡುವ ದೇವರೆಂದು ಹಿಂದಿನಿAದಲೂ ನಂಬಿಕೆ ಇದೆ.
ಇದರ ಅಂಗವಾಗಿ ತಾ. ೩೦ರ ರಾತ್ರಿ ಭೀರ, ಭೀರಾಳಿ, ಭದ್ರಕಾಳಿ ದೇವರ ಕೋಲಗಳು ನಡೆದವು.