ಮಡಿಕೇರಿ, ಏ. ೨: ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವುದ ರೊಂದಿಗೆ ಸಾಮಾಜಿಕ ಕಳಕಳಿಯತ್ತಲೂ ಗಮನ ಹರಿಸುತ್ತಿರುವ ಕೊಡಗಿನವರಾದ ಚಿತ್ರತಾರೆ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರಿಗೆ ‘ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ’ ಮೂಲಕ ನೀಡಲಾಗುವ ರಾಷ್ಟಿçÃಯ ಮಹಿಳಾ ಸಾಧಕಿ ೨೦೨೧ ಪ್ರಶಸ್ತಿ ಲಭ್ಯವಾಗಿದೆ.
ಒಟ್ಟು ೪೦ ಮಹಿಳಾ ಸಾಧಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, ಇವರಲ್ಲಿ ಒಬ್ಬರಾಗಿ ನಟಿ ಹರ್ಷಿಕಾ ಕೂಡ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಉತ್ತಮ ರೀತಿಯ ಸಾಮಾಜಿಕ ಚಟುವಟಿಕೆ - ಸೇವೆ - ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು ವಕೀಲರು, ಪೊಲೀಸ್ ಅಧಿಕಾರಿಗಳು, ಮಾಧ್ಯಮ, ಉದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಕಳೆದ ವರ್ಷ ಕಲಾಶ್ರೀ ರಾಷ್ಟಿçÃಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹರ್ಷಿಕಾಗೆ ಇದು ಎರಡನೇ ರಾಷ್ಟಿçÃಯ ಪ್ರಶಸ್ತಿಯಾಗಿದ್ದು, ಈ ಬಗ್ಗೆ ಆಕೆ ‘ಶಕ್ತಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದರು. ಈ ಸಾಧನೆಗೆ ಎಲ್ಲರ ಪ್ರೋತ್ಸಾಹ - ಅಭಿಮಾನ ಕಾರಣವಾಗಿದ್ದು, ಇನ್ನಷ್ಟು ಪ್ರೇರಣೆದೊರೆತಂತಾಗಿದೆ ಎಂದು ಆಕೆ ಹೇಳಿದರು.
ಈ ಬಾರಿಯ ಮಹಿಳಾ ಸಾಧಕಿಯರ ಸಾಲಿನಲ್ಲಿ ಶ್ರೀಮತಿ ರಾಘವೇಂದ್ರ ರಾಜ್ಕುಮಾರ್, ಪರಿಮಳಾ ಜಗ್ಗೇಶ್, ಕೀರ್ತಿ ಅನಿರುದ್ದ್, ಐ.ಪಿ.ಎಸ್. ಅಧಿಕಾರಿ ಡಿ. ರೂಪ, ತೇಜಸ್ವಿನಿ ಅನಂತಕುಮಾರ್, ಶೀಲಾ, ಸಿ.ಪಿ. ಯೋಗೇಶ್ವರ್ ಅವರಂತಹ ಸಾಧಕರಿದ್ದಾರೆ. ಇವರೊಂದಿಗೆ ತಾವೂ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆ ಎನಿಸಿದೆ ಎಂದು ಹರ್ಷಿಕಾ ಹೇಳಿದರು.