ಶ್ರೀಮಂಗಲ, ಏ. ೧ : ಕೊಡಗು ಪ್ರತ್ಯೇಕ ದೇಶ ಹಾಗೂ ರಾಜ್ಯ ಆಗಿದ್ದ ಸಂದರ್ಭದಲ್ಲೇ ಬಹಳ ದೊಡ್ಡ ಸ್ಥಾನ ಹಾಗೂ ಹೆಸರು ಪಡೆದಿದ್ದ ಅಂಜಿಕೇರಿ ನಾಡ್‌ನಲ್ಲಿ ಹಲವು ಕ್ರೀಡಾ ಪ್ರತಿಭೆಗಳು ಹೊರಹೊಮ್ಮಿದ್ದು, ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಇಂತಹ ಕೊಡವ ಕೌಟುಂಬಿಕ ಹಾಕಿ ಹಬ್ಬ ಇಲ್ಲಿ ನಡೆಯುತ್ತಿರುವುದರಿಂದ ಇನ್ನಷ್ಟು ಗ್ರಾಮೀಣ ಪ್ರತಿಭೆಗಳು ತಮ್ಮ ಸಾಧನೆ ಮೆರೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಕ್ರೀಡಾಸಕ್ತರನ್ನು ಒಂದೆಡೆ ಸೇರಿಸಲು ಇಂತಹ ಕ್ರೀಡಾಕೂಟ ಅಗತ್ಯ ಎಂದು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಕೆ.ಬಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಹುದಿಕೇರಿಯಲ್ಲಿ ಅಂಜಿಕೇರಿ ನಾಡ್‌ಕೂಟ ಆಯೋಜಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮರ ಸುಳ್ಯ ದಂಗೆ ಸೇರಿದಂತೆ
ನಡೆಯುತ್ತಿರುವುದರಿಂದ ಇನ್ನಷ್ಟು ಗ್ರಾಮೀಣ ಪ್ರತಿಭೆಗಳು ತಮ್ಮ ಸಾಧನೆ ಮೆರೆಯಲು ಸಾಧ್ಯವಾಗುತ್ತದೆ. ಗ್ರಾಮೀಣ ಕ್ರೀಡಾಸಕ್ತರನ್ನು ಒಂದೆಡೆ ಸೇರಿಸಲು ಇಂತಹ ಕ್ರೀಡಾಕೂಟ ಅಗತ್ಯ ಎಂದು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಕೆ.ಬಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಹುದಿಕೇರಿಯಲ್ಲಿ ಅಂಜಿಕೇರಿ ನಾಡ್‌ಕೂಟ ಆಯೋಜಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮರ ಸುಳ್ಯ ದಂಗೆ ಸೇರಿದಂತೆ
(ಮೊದಲ ಪುಟದಿಂದ) ಹಲವು ಯುದ್ಧದ ಸಂದರ್ಭದಲ್ಲಿ ಅಂಜಿಕೇರಿ ನಾಡ್‌ನ ತಕ್ಕಮುಖ್ಯಸ್ಥರು ಬಂದಿದ್ದಾರೆಯೇ ಎಂದು ಕೇಳಿ ಯುದ್ಧ ಪ್ರಾರಂಭಿಸುತ್ತಿದ್ದರು. ಅಂತಹ ಶಿಸ್ತು, ಧೈರ್ಯ, ಸಾಹಸ, ತ್ಯಾಗ-ಬಲಿದಾನ ಹಾಗೂ ಬದ್ಧತೆಗೆ ಹೆಸರುವಾಸಿಯಾದ ಈ ಅಂಜಿಕೇರಿ ನಾಡ್‌ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ ಎಲ್ಲರೂ ಶಿಸ್ತಿನಿಂದ ಆಡಿ ತಮ್ಮ ಪ್ರತಿಭೆ ಪ್ರದರ್ಶನ ಮಾಡುವುದರೊಂದಿಗೆ ಉತ್ತಮ ಸೌಹಾರ್ದತೆ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಮೈದಾನದಲ್ಲಿ ಚೆಂಡನ್ನು ಹಾಕಿ ಸ್ಟಿಕ್‌ನಿಂದ ತಳ್ಳುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಕರ್ನಾಟಕ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಾನು ಆಡಿದ ಮೈದಾನದಲ್ಲಿ ಇಷ್ಟು ದೊಡ್ಡ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿರುವುದು ಹೆಮ್ಮೆ ಎನಿಸುತ್ತಿದೆ. ಮೊದಲು ಕ್ರೀಡೆಗೆ ದೇಶದಲ್ಲಿ ಹೆಚ್ಚು ಅವಕಾಶಗಳಿರಲಿಲ್ಲ. ಇತ್ತೀಚೆಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಕ್ರೀಡೆಗೆ ಹಾಗೂ ಕ್ರೀಡೆಯ ಮುಖಾಂತರ ಹಲವು ಉದ್ಯೋಗಗಳಿಗೆ ಅವಕಾಶ ಕಲ್ಪಿಸಿದ್ದು ಯುವ ಜನರು ಇದರ ಸದುಪಯೋಗ ಪಡಿಸಿಕೊಂಡು ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ ೧೯೫೦ ರವರೆಗೆ ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅತೀ ದೊಡ್ಡ ಸ್ಥಾನ ಪಡೆದ ಹಾಗೂ ಸ್ವಾತಂತ್ರö್ಯ ಹೋರಾಟದಲ್ಲಿ ಅಂಜಿಕೇರಿ ನಾಡ್ ಸಂಗೊಳ್ಳಿರಾಯಣ್ಣನ ಜನ್ಮ ಸ್ಥಳ ಬೈಲಹೊಂಗಲದಷ್ಟೇ ಖ್ಯಾತಿ ಪಡೆದಿತ್ತು. ಅರಸೊತ್ತಿಗೆಯ ಸಂದರ್ಭದಲ್ಲೇ ಮಹಾವೀರ ಅಚ್ಚುನಾಯಕ ತನ್ನ ಸ್ವಾತಂತ್ರö್ಯವನ್ನು ಕಾಯ್ದುಕೊಂಡು ರಾಜ್ಯಾಡಳಿತ ನಡೆಸುತಿದ್ದ ಖ್ಯಾತಿ ಹೊಂದಿದ್ದ ಸ್ಥಳ ಈ ಅಂಜಿಕೇರಿ ನಾಡ್. ಇಂತಹ ಸ್ಥಳದಲ್ಲಿ ಕ್ರೀಡಾಕೂಟ ನಡೆಯುತ್ತಿರುವುದು ಯುವ ಜನಾಂಗಕ್ಕೆ ಉತ್ತಮ ಪ್ರೇರಣೆ ನೀಡಿದಂತಾಗಿದೆ ಎಂದರು.
ವೇದಿಕೆಯಲ್ಲಿ ಹುದಿಕೇರಿ ಗ್ರಾ.ಪಂ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್, ಅಂಜಿಕೇರಿ ನಾಡ್ ಕೂಟದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಖ್ಯಾತ್‌ಪೂಣಚ್ಚ, ವೀರಾಜಪೇಟೆ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಹಾಕಿ ಹಬ್ಬದ ಮುಖ್ಯ ಪ್ರಾಯೋಜಕ ಸಂಸ್ಥೆ ಮೈಸೂರಿನ ಟ್ರಿನಿಟಿ ಕಾಲೇಜಿನ ಮುಖ್ಯಸ್ಥ ಎಲಿಜûರ್ ಮಿಲ್ಟನ್, ಕೋಣಗೇರಿಯ ತಕ್ಕಮುಖ್ಯಸ್ಥರಾದ ಚೆಕ್ಕೇರ ರಾಜೇಶ್, ಅಜ್ಜಿಕುಟ್ಟೀರ ಗಿರೀಶ್, ಹುದಿಕೇರಿ ತಕ್ಕರಾದ ಬೊಳ್ಳಜೀರ ಮಣಿನಂಜಪ್ಪ, ಹೈಸೊಡ್ಲೂರು ತಕ್ಕರಾದ ಬಾನಂಗಡ ರಾಜಶೇಖರ್, ಬೇಗೂರ್ ತಕ್ಕರಾದ ಬೈರಂಡ ಪೂಣಚ್ಚ, ನಡಿಕೇರಿ ತಕ್ಕರಾದ ಕೋಳೇರ ನರೇಂದ್ರ, ಮುಗುಟಗೇರಿ ತಕ್ಕರಾದ ಮಲ್ಚೀರ ಬೋಜಪ್ಪ, ಚಿಕ್ಕಮುಂಡೂರು ತಕ್ಕರಾದ ಕಳ್ಳಿಚಂಡ ಅಪ್ಪುಣುಪೊನ್ನಪ್ಪ, ತೂಚಮಕೇರಿ ತಕ್ಕರಾದ ಪೆಮ್ಮಂಡ ನಾಣಯ್ಯ, ಬಲ್ಯಮುಂಡೂರು ತಕ್ಕರಾದ ಕೊಟ್ಟಂಗಡ ಪೆಮ್ಮಯ್ಯ ಅವರುಗಳು ಹಾಜರಿದ್ದರು.