ಸೋಮವಾರಪೇಟೆ, ಏ. ೧: ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕಾರ್ಮಿಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ಕುಂಬೂರು ಗ್ರಾಮದ ಲಕ್ಷಿö್ಮÃಜಾಲ ಎಸ್ಟೇಟ್‌ನಲ್ಲಿ ಇಂದು ಸಂಭವಿಸಿದೆ.
ಕೊAಡAಗೇರಿ ಗ್ರಾಮದ ಯೂಸುಫ್ ಅವರ ಪುತ್ರ, ಅವಿವಾಹಿತ ರಾಶಿದ್(೨೭) ಎಂಬಾತನೇ ಮೃತಪಟ್ಟ ದುರ್ದೈವಿ. ತೋಟದಲ್ಲಿ ಕಾಳು ಮೆಣಸು ಕೊಯ್ಲು ಮಾಡುತ್ತಿದ್ದ ಸಂದರ್ಭ ದುರಂತ ಸಂಭವಿಸಿದ್ದು, ವಿದ್ಯುತ್ ಸ್ಪರ್ಶದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಎಸ್ಟೇಟ್‌ನಲ್ಲಿರುವ ಕರಿಮೆಣಸನ್ನು ಕೇರಳ ಮೂಲದ ವ್ಯಕ್ತಿ ಖರೀದಿಸಿದ್ದು, ಕಳೆದ ೧೦ ದಿನಗಳ ಹಿಂದೆ ತೋಟಕ್ಕೆ ಕೆಲಸಕ್ಕೆಂದು ಆಗಮಿಸಿದ ರಾಶಿದ್, ಕಾಳು ಮೆಣಸು ಕೊಯ್ಲು, ಮೆಣಸನ್ನು ಒಣಗಿಸುವ ಕೆಲಸ ಮಾಡಿಕೊಂಡಿದ್ದ.
ಇAದು ಅಪರಾಹ್ನ ೧೨ ಗಂಟೆ ಸುಮಾರಿಗೆ ಕಣದ ಪಕ್ಕದಲ್ಲಿಯೇ ಇದ್ದ ಕರಿಮೆಣಸನ್ನು ಅಲ್ಯೂಮಿನಿಯಂ ಏಣಿ ಬಳಸಿ ಕೊಯ್ಲು ಮಾಡುತ್ತಿದ್ದ. ಈ ಸಂದರ್ಭ ತೋಟದೊಳಗೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಅಲ್ಯೂಮಿನಿಯಂ ಎಣಿ ತಾಗಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ರಾಶಿದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ವಿದ್ಯುತ್ ಇಲಾಖಾ ಅಭಿಯಂತರರು, ಮಾದಾಪುರ ಪೊಲೀಸ್ ಉಪ ಠಾಣೆಯ ಎಎಸ್‌ಐ ಪೊನ್ನಪ್ಪ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಸೋಮವಾರಪೇಟೆಯ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
(ಮೊದಲ ಪುಟದಿಂದ)
ಎಚ್ಚರಿಕೆ ನೀಡಿದರೂ ನಿರ್ಲಕ್ಷö್ಯ: ವಿದ್ಯುತ್ ಮಾರ್ಗಗಳು ಹಾದು ಹೋಗಿರುವ ಕಾಫಿ ತೋಟ ಗಳಲ್ಲಿ ಕೆಲಸ ಮಾಡುವ ಸಂದರ್ಭ ಹೆಚ್ಚಿನ ಜಾಗ್ರತೆ ವಹಿಸಬೇಕು. ಮರ ಕಟಾವು, ಕರಿಮೆಣಸು ಕೊಯ್ಲು ಸಮಯದಲ್ಲಿ ಅಲ್ಯೂಮಿನಿಯಂ ಏಣಿಗಳನ್ನು ಬಳಸಬಾರದು ಎಂದು ವಿದ್ಯುತ್ ಇಲಾಖೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ, ತೋಟ ಮಾಲೀಕರು ಮತ್ತು ಕಾರ್ಮಿಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಅಲ್ಯೂಮಿನಿಯಂ ಏಣಿಯಿಂದಾಗಿ ವಿದ್ಯುತ್ ಅವಘಡದಂತಹ ಪ್ರಕರಣಗಳು ನಡೆಯುತ್ತಿದ್ದರೂ ಸಹ ಮಾಲೀಕರು ಮತ್ತು ಕಾರ್ಮಿಕರು ನಿರ್ಲಕ್ಷö್ಯ ವಹಿಸುತ್ತಿರುವದು ಕಂಡುಬರುತ್ತಿದೆ. ಅಲ್ಯೂಮಿನಿಯಂ ಏಣಿಯ ಬದಲಿಗೆ ಬಿದಿರಿನ ಏಣಿಗಳನ್ನು ಬಳಸಿ ಎಂದು ಸೆಸ್ಕ್ ಮನವಿ ಮಾಡಿದರೂ ಕೆಲವರು ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಪರಿಣಾಮ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿದ್ದು, ಇನ್ನಾದರೂ ಈ ಬಗ್ಗೆ ಜಾಗ್ರತೆ ವಹಿಸಬೇಕಿದೆ.