ಕೊಡ್ಲಿಪೇಟೆ, ಏ. ೧: ಸಮೀಪದ ಹ್ಯಾಂಡ್ಪೋಸ್ಟ್ನಲ್ಲಿರುವ ಮಸ್ಜಿದು ನ್ನೂರ್ ಅಧೀನದ ತಜಲ್ಲಿಯಾತ್ ಅರಬಿಕ್ ಮದ್ರಸದ ಎಸ್.ಕೆ.ಎಸ್. ಬಿ.ವಿ. ವತಿಯಿಂದ ಜಲ ಸಂರಕ್ಷಣೆ ಅಭಿಯಾನ ಜರುಗಿತು. ಅರಬಿಕ್ ಮದ್ರಸದ ಆವರಣದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಸ್ಜಿದುನ್ನೂರ್ ಖತೀಬರಾದ ಹಾರೀಸ್ ಬಾಖವಿ ಅವರು ಚಾಲನೆ ನೀಡಿದರು. ನಂತರ ಮದ್ರಸ ಸಭಾಂಗಣದಲ್ಲಿ ಜಲ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಸ್ಜಿದುನ್ನೂರ್ ಅಧ್ಯಕ್ಷ ಡಿ.ಎ. ಸುಲೈಮಾನ್ ವಹಿಸಿದ್ದರು.
ತಜಲ್ಲಿಯಾತ್ ಮದ್ರಸದ ಮುಖ್ಯ ಪ್ರಾಧ್ಯಾಪಕ ರಜಾಕ್ ಫೈಝಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕ ಝಹೀರ್ ನಿಜಾಮಿ ಮಾತನಾಡಿ, ಜೀವ ಜಲದ ಮಹತ್ವದ ಕುರಿತು ವಿವರಿಸಿದರು. ಮಸ್ಜಿದುನ್ನೂರ್ ಕಾರ್ಯದರ್ಶಿ ಹನೀಫ್, ಬ್ಯಾಡಗೊಟ್ಟ ಮದ್ರಸದ ಅಧ್ಯಾಪಕರಾದ ಸಮೀರ್ ಸಖಾಫಿ, ಮುಸ್ತಫ ಮುಸ್ಲಿಯಾರ್, ನೂರ್ ಯೂತ್ ಸಮಿತಿಯ ಅಧ್ಯಕ್ಷ ಬಾಸಿತ್ ಹಾಜಿ, ಮಸ್ಜಿದುನ್ನೂರ್ ಕೋಶಾಧಿಕಾರಿ ಇಬ್ರಾಹಿಂ ಮಲ್ಲಳ್ಳಿ, ಸಹ ಕಾರ್ಯದರ್ಶಿ ಮಹಮ್ಮದ್ ಎಂ.ಎA., ಸದಸ್ಯರಾದ ಸುಲೇಮಾನ್ ಕಿರಿಕೊಡ್ಲಿ, ಅಬ್ದುಲ್ ರಜಾಕ್, ರಫೀಕ್ ಜಿ.ಎಂ., ಬ್ಯಾಡಗೊಟ್ಟ ಮದ್ರಸ ಅಧ್ಯಕ್ಷ ಹಮೀದ್ ಮಲ್ಲಳ್ಳಿ ಹಾಗೂ ಜಮಾಅತ್ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.