ಮಡಿಕೇರಿ, ಏ. ೨: ಜಾನಪದ ಇತಿಹಾಸವನ್ನು ಪುಸ್ತಕರೂಪದಲ್ಲಿಯೂ ದಾಖಲಿಸಿ ಇಡಬಹುದೆಂದು ಸಾಬೀತು ಪಡಿಸಿದ, ಕೊಡವ ಜಾನಪದವನ್ನು ಆದಿ ಪುರಾಣ ಕಾಲದಿಂದ ದಾಖಲಿಸಿದ ದಿವಂಗತ ನಡಿಕೇರಿಯಂಡ ಚಿಣ್ಣಪ್ಪ ಅವರ ಹುಟ್ಟು ಹಬ್ಬ ತಾ. ೩ರಂದು (ಇಂದು) ಆಚರಿಸಲ್ಪಡುತ್ತಿದ್ದು, ಈ ಪ್ರಯುಕ್ತ ಕೊಡವಾಮೆರ ಕೊಂಡಾಟ ಸಂಘಟನೆಯು ಕೊಡವ ಭಾಷೆಯಲ್ಲಿ ‘ನಾನರ್‌ಂಜ ಚಿಣ್ಣಪ್ಪಜ್ಜ’ ಎಂಬ ವಿಷಯದಲ್ಲಿ ಅಂತರ್ಜಾಲ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ಯಾವುದೇ ಜಾತಿ, ಧರ್ಮ, ಲಿಂಗ, ವಯಸ್ಸಿನ ಅಂತರವಿಲ್ಲದೆ ಮುಕ್ತವಾಗಿ ಭಾಗವಹಿಸಬಹುದಾದ ಸ್ಪರ್ಧೆಯಲ್ಲಿ, ವಿಷಯಕ್ಕನುಸಾರವಾಗಿ, ೧೫೦ಗೆರೆಗಳಿಗೆ (ಫುಲ್ ಸ್ಟಾಪ್'ವರೆಗೆ ಒಂದು ಗೆರೆ) ಮೀರದಂತೆ, ಟೈಪಿಸಿದ ಇಲ್ಲವೇ ಸ್ಪಷ್ಟವಾಗಿ ಬರೆದು, ಫೋಟೋ ತೆಗೆದು ತಾ. ೩ ರಂದು (ಇಂದು) ರಾತ್ರಿ ೧೧ ಗಂಟೆಯ ಒಳಗೆ ಸ್ಪರ್ಧಾ ಸಂಚಾಲಕಿ ಕುಲ್ಲಚಂಡ ವಿನುತಾ ಕೇಸರಿ ಅವರ ಮೊ. ೮೬೯೪೮೮೫೬೭೬ ಸಂಖ್ಯೆಗೆ ವಾಟ್ಸಾಪ್ ಮಾಡಬೇಕು. ಫಲಿತಾಂಶವು ಸೋಮವಾರ ಪ್ರಕಟಗೊಳ್ಳಲಿದೆ. ವಿಜೇತರಿಗೆ ಪ್ರಥಮ ರೂ. ೩೦೦೦ ದ್ವಿತೀಯ, ರೂ. ೨೦೦೦ ಹಾಗೂ ತೃತೀಯ ರೂ. ೧೦೦೦ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಮೊದಲೆರಡು ನಗದು ಬಹುಮಾನವನ್ನು ಬೊಳ್ಳಜೀರ ಸುಶಿ ಅಶೋಕ್ ಹಾಗೂ ಮೂರನೇ ಬಹುಮಾನವನ್ನು ಮಾಳೇಟಿರ ಅಜಿತ್ ಪೂವಣ್ಣ ಅವರು ಪ್ರಾಯೋಜಿಸಿದ್ದಾರೆ.