ಟಿ ವಿಎಸ್‌ಎಸ್‌ಎನ್ ಅಧ್ಯಕ್ಷ ಸುಜು ತಿಮ್ಮಯ್ಯ ಟಿ ಮಕ್ಕಂದೂರಿನಲ್ಲಿ ಕಾಂಗ್ರೆಸ್ ಅಭಿನಂದನಾ ಸಭೆ

ಮಡಿಕೇರಿ, ಏ.೧: ಭಾರತದ ಸಂವಿಧಾನದಲ್ಲಿ ಉಲ್ಲೇಖಿಸುರುವಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕು ತಲಪಬೇಕಿದೆ. ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದು ಮಕ್ಕಂದೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಹೇಳಿದರು.

ಮಕ್ಕಂದೂರು ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಂದೂರು ಗ್ರಾ. ಪಂ.ಗೆ ಆಯ್ಕೆ ಯಾಗಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಗ್ರಾಮಸ್ಥರು ಗ್ರಾಮ ಸಭೆಗಳಿಗೆ ಹಾಜರಾಗಬೇಕು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಬೇಕು; ಅದು ಬಿಟ್ಟು ಸಭೆಗಳಿಗೆ ಬಂದು ದೊಂಬಿ ಮಾಡುವದಲ್ಲ ವೆಂದು ಹೇಳಿದರು. ಪಂಚಾಯ್ತಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ನಂತರದಲ್ಲಿ ರಾಜಕೀಯ ಮರೆತು ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು. ಮಕ್ಕಂದೂರು ಗ್ರಾಮ ಹಲವಾರು ಕಾರಣಗಳಿಂದಾಗಿ ಅಭಿವೃದ್ಧಿ ಆಗಿಲ್ಲ. ಇದೀಗ ಗೆದ್ದು ಬಂದಿರುವ ಅಭ್ಯರ್ಥಿಗಳು ಸ್ವಾರ್ಥ ಬಿಟ್ಟು ನಿಸ್ವಾರ್ಥದಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಗ್ರಾ.ಪಂ. ನೂತನ ಅಧ್ಯಕ್ಷ ಕನ್ನಿಕಂಡ ಶಾಮ್ ಸುಬ್ಬಯ್ಯ ಮಾತನಾಡಿ ಯಾವದೇ ರಾಜಕೀಯ ಬೆರೆಸದೆ, ಆಮಿಷಗಳಿಗೆ ಒಳಗಾಗದೆ ಪಂಚಾಯ್ತಿಗೆ ಬರುವ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ಹೇಳಿದರು. ಉಪಾಧ್ಯಕ್ಷೆ ಪಡೇಟಿರ ಕವಿತಾ ಮಾತನಾಡಿ ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗಿರುವದು ಹೊಸ ಅನುಭವವಾಗಿದ್ದು, ಎಲ್ಲರ ಸಹಕಾರ, ಸಲಹೆ ಪಡೆದು ಕಾರ್ಯ ನಿರ್ವಹಿಸುವದಾಗಿ ಹೇಳಿದರು. ಪಂಚಾಯ್ತಿ ಮಾಜಿ ಅಧ್ಯಕ್ಷ ಹೊಟ್ಟೆಯಂಡ ಬೆಳ್ಯಪ್ಪ ಅವರು ಚುನಾವಣಾ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರುಗಳಿಂದ ಆದಂತಹ ಅಸಹಕಾರ, ಕಹಿಘಟನೆಗಳನ್ನು ತೆರೆದಿಟ್ಟರಲ್ಲದೆ, ಇನ್ನಾದರೂ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದರು. ಗ್ರಾ.ಪಂ. ಮಾಜಿ ಸದಸ್ಯ