ಗೋಣಿಕೊಪ್ಪಲು, ಏ. ೨: ತಮ್ಮ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ನಿವೃತ್ತಿ ಹೊಂದುತ್ತಿರುವುದು ಅತೀವ ಸಂತಸ ತಂದಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅಭಿಪ್ರಾಯ ಪಟ್ಟರು.ಗೋಣಿಕೊಪ್ಪ ಸಮೀಪದ ಅತ್ತೂರಿನ ಖಾಸಗಿ ರೆಸಾರ್ಟ್ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಅಧಿಕಾರಿಗೆ ಬೀಳ್ಕೊಡುಗೆ ನೀಡಿ ಮಾತನಾಡಿದ ಇವರು,ಪೊಲೀಸ್ ಇಲಾಖೆಯಲ್ಲಿ ಸದಾ ಒತ್ತಡದ ಕೆಲಸವಿರುತ್ತದೆ. ವೃತ್ತಿಯನ್ನು ಪ್ರೀತಿಯಿಂದ ನೋಡುವವರಿಗೆ ಕಷ್ಟ ಎನಿಸುವುದಿಲ್ಲ. ತಮ್ಮ ಕರ್ತವ್ಯದ ಅವಧಿಯಲ್ಲಿ ಶ್ರದ್ದೆ, ಶಿಸ್ತು ಇದ್ದಲ್ಲಿ ಸಾಧನೆ ಮಾಡಬಹುದು. ನಿವೃತ್ತಿ ಹೊಂದುತ್ತಿರುವ ರಾಮರೆಡ್ಡಿ ಸುದೀರ್ಘ ೨೮ ವರ್ಷದ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಉಳಿದ ಸಿಬ್ಬಂದಿಗೆ ಮಾದರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ನಿವೃತ್ತಿ ಹೊಂದುತ್ತಿರುವ ಗೋಣಿಕೊಪ್ಪಲುವಿನ ವೃತ್ತ ನಿರೀಕ್ಷಕ ರಾಮರೆಡ್ಡಿಯವರು ತಮ್ಮ ಸೇವಾವಧಿಯಲ್ಲಿ ಉತ್ತಮ ಕೆಲಸ ಪ್ರೀತಿಯಿಂದ ನೋಡುವವರಿಗೆ ಕಷ್ಟ ಎನಿಸುವುದಿಲ್ಲ. ತಮ್ಮ ಕರ್ತವ್ಯದ ಅವಧಿಯಲ್ಲಿ ಶ್ರದ್ದೆ, ಶಿಸ್ತು ಇದ್ದಲ್ಲಿ ಸಾಧನೆ ಮಾಡಬಹುದು. ನಿವೃತ್ತಿ ಹೊಂದುತ್ತಿರುವ ರಾಮರೆಡ್ಡಿ ಸುದೀರ್ಘ ೨೮ ವರ್ಷದ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಉಳಿದ ಸಿಬ್ಬಂದಿಗೆ ಮಾದರಿಯಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ನಿವೃತ್ತಿ ಹೊಂದುತ್ತಿರುವ ಗೋಣಿಕೊಪ್ಪಲುವಿನ ವೃತ್ತ ನಿರೀಕ್ಷಕ ರಾಮರೆಡ್ಡಿಯವರು ತಮ್ಮ ಸೇವಾವಧಿಯಲ್ಲಿ ಉತ್ತಮ ಕೆಲಸ ಮಾತನಾಡಿದ ರಾಮರೆಡ್ಡಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಸಮಾಜದಲ್ಲಿ ಉತ್ತಮ ಗೌರವ ಸ್ಥಾನ ಸಿಕ್ಕಿದೆ. ಸುದೀರ್ಘ ಸೇವೆ ಸಲ್ಲಿಸಲು ಅವಕಾಶವಾಗಿದೆ. ವೃತ್ತಿ ಜೀವನದಲ್ಲಿ ಅನೇಕ ಹಿರಿಯ ಅಧಿಕಾರಿಗಳೊಂದಿಗೆ ಸೇವೆ ಸಲ್ಲಿಸಿದ ಅನುಭವ ಮರೆಯುವಂತಿಲ್ಲ. ವೃತ್ತಿಯಲ್ಲಿ ಪಾರದರ್ಶಕತೆ ಕಾಪಾಡುವ ಮೂಲಕ ಬಡ ಜನರ ಕಷ್ಟಗಳಿಗೆ ಸ್ಪಂದಿಸಿದಲ್ಲಿ ಮನಸ್ಸಿಗೆ ನೆಮ್ಮದಿ ತರುತ್ತದೆ. ಇಲಾಖೆ ಸಿಬ್ಬಂದಿಗಳು ನೀಡಿರುವ ಗೌರವ ಅವಿಸ್ಮರಣೀಯ ಎಂದರು.

ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಶೋಭಾ ಪ್ರಾರ್ಥಿಸಿ, ಸಿಬ್ಬಂದಿ ಪೂವಣ್ಣ ನಿರೂಪಿಸಿ ವೀರಾಜಪೇಟೆ ವೃತ್ತ ನಿರೀಕ್ಷಕ ಶ್ರೀಧರ್, ಸ್ವಾಗತಿಸಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ವಂದಿಸಿದರು. ವಿವಿಧ ಭಾಗದಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು, ಉಪಸ್ಥಿತರಿದ್ದರು.