ಕೂಡಿಗೆ, ಏ. ೧: ವಿವಾದವಾಗಿ ಮಾರ್ಪಟ್ಟಿರುವ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಸರ್ವೆ ನಂಬರ್ ೮/೧೯ರ ೪ ಎಕರೆ ಕೃಷಿ ಭೂಮಿ ಪ್ರದೇಶಕ್ಕೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಾಗವು ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅವರ ಹೆಸರಿನಲ್ಲಿ ಖಾತೆಯಾಗಿದ್ದು, ಈ ಪ್ರದೇಶದ ಸಮೀಪದಲ್ಲಿರುವ ಬುಡಕಟ್ಟು ಕುಟುಂಬಸ್ಥರಿಗೆ ಸೇರಿದ ಜಾಗವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಸಂಬAಧ ಕಳೆದ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚೆಯಾಗಿತ್ತು.

ಜಾಗದ ಆರ್.ಟಿ.ಸಿ. ಕಾರ್ಯನಿರ್ವಹಣಾಧಿಕಾರಿ ಹೆಸರಿನಲ್ಲಿ ಇದ್ದರೂ ಕೂಡ ೨.೫೦ ಎಕರೆಗಳಷ್ಟು ಪ್ರದೇಶದಲ್ಲಿ ಕಳೆದ ಅನೇಕ ವರ್ಷ ಗಳಿಂದ ಕೃಷಿ ಭೂಮಿಯಾಗಿ ಬಳಸಿ ಕೊಂಡು ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಪ್ರದೇಶ ಹಾರಂಗಿ ನದಿಗೆ ಹೊಂದಿಕೊAಡಿದ್ದು, ನೀರು ಹೆಚ್ಚಾದರೆ ಮುಳುಗಡೆ ಆಗುತ್ತದೆ. ಇಂತಹ ಜಾಗವನ್ನು ಕೂಡಿಗೆ ಗ್ರಾಮ ಪಂಚಾಯಿತಿ ವಸತಿ ರಹಿತರಿಗೆ ಹಂಚಿಕೆ ಮಾಡಲು ಮುಂದಾಗಿ ರುವುದು ತಿಳಿದುಬಂದಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಹೆಸರಿನಲ್ಲಿ ಇದ್ದರೂ ಕೂಡ ೨.೫೦ ಎಕರೆಗಳಷ್ಟು ಪ್ರದೇಶದಲ್ಲಿ ಕಳೆದ ಅನೇಕ ವರ್ಷ ಗಳಿಂದ ಕೃಷಿ ಭೂಮಿಯಾಗಿ ಬಳಸಿ ಕೊಂಡು ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಪ್ರದೇಶ ಹಾರಂಗಿ ನದಿಗೆ ಹೊಂದಿಕೊAಡಿದ್ದು, ನೀರು ಹೆಚ್ಚಾದರೆ ಮುಳುಗಡೆ ಆಗುತ್ತದೆ. ಇಂತಹ ಜಾಗವನ್ನು ಕೂಡಿಗೆ ಗ್ರಾಮ ಪಂಚಾಯಿತಿ ವಸತಿ ರಹಿತರಿಗೆ ಹಂಚಿಕೆ ಮಾಡಲು ಮುಂದಾಗಿ ರುವುದು ತಿಳಿದುಬಂದಿದೆ ಎಂದು ಸ್ಥಳೀಯರು ಮನವಿ ಮಾಡಿದರು.

ತಾಲೂಕು ಕಾರ್ಯನಿರ್ವಹ ಣಾಧಿಕಾರಿ ಜಯಣ್ಣ ಮಾತನಾಡಿ, ಸರಕಾರ ಸೂಚನೆಯಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಮನೆ ನಿರ್ಮಾಣಕ್ಕೆ ಜಾಗವನ್ನು ನೀಡುವ ಉದ್ದೇಶದಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ಖಾತೆ ಬದಲಾವಣೆ ಮತ್ತು ಜಾಗದ ವಿಷಯ ತಿಳಿದು ಬಂದಿದ್ದು, ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಕಾರ್ಯದರ್ಶಿ ಶಿಲ್ಪಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

-ಕೆ.ಕೆ. ನಾಗರಾಜಶೆಟ್ಟಿ