ಮಡಿಕೇರಿ, ಏ. ೧: ಕೊಡಗು ಜಿಲ್ಲೆಯಲ್ಲಿ ಈತನಕ ಇದ್ದ ಮೂರು ತಾಲೂಕುಗಳಾದ ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಯೊಂದಿಗೆ ನೂತನವಾಗಿ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕುಗಳು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇದೀಗ ಐದು ತಾಲೂಕುಗಳು ಅಸ್ತಿತ್ವಕ್ಕೆ ಬಂದಿವೆ. ಇದೀಗ ಜಿ.ಪಂ. ಅವಧಿ ಮುಕ್ತಾಯವಾಗಿದ್ದು, ಜಿಲ್ಲಾ ಪಂಚಾಯಿತಿಗೆ ಹೊಸದಾಗಿ ಚುನಾವಣೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಹೆಸರು ಹಾಗೂ ವ್ಯಾಪ್ತಿಯ ಗ್ರಾಮಗಳು ಬದಲಾವಣೆಯಾಗಬೇಕಾಗಿವೆ. ಆಯೋಗದ ನಿರ್ದೇಶನದ ಪ್ರಕಾರ ಜಿ.ಪಂ. ಕ್ಷೇತ್ರಗಳು ಆಯಾ ತಾಲೂಕು ವ್ಯಾಪ್ತಿಗೆ ಬರಬೇಕಾಗಿದ್ದು, ಈ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು ಕೂಡ ಅದೇ ತಾಲೂಕಿಗೆ ಒಳಪಡಬೇಕಾಗಿದೆ. ಇದರಂತೆ ಜಿಲ್ಲಾಡಳಿತ ಆಯೋಗಕ್ಕೆ ಈಗಾಗಲೇ ವರದಿ ಸಲ್ಲಿಸಿದ್ದು, ಜಿ.ಪಂ. ಕ್ಷೇತ್ರಗಳು ಹಾಗೂ ವ್ಯಾಪ್ತಿಯ ಕುರಿತಾಗಿ ರಾಜ್ಯ ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ. ಇದರಂತೆ ಪ್ರಸ್ತುತ ಮಡಿಕೇರಿ ತಾಲೂಕಿನಲ್ಲಿ ೭ ಜಿ.ಪಂ. ಕ್ಷೇತ್ರ, ಸೋಮವಾರಪೇಟೆಯಲ್ಲಿ ೬, ಕುಶಾಲನಗರ ೫, ವೀರಾಜಪೇಟೆ ೫ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಒಟ್ಟು ೬ ಕ್ಷೇತ್ರಗಳನ್ನು ನಿಗದಿಪಡಿಸ ಲಾಗಿದೆ. ಈ ಹಿಂದೆಯೂ ಜಿಲ್ಲೆಯಲ್ಲಿ ಒಟ್ಟು ೨೯ ಸ್ಥಾನಗಳಿದ್ದು, ಈ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ. ಆದರೆ, ಕ್ಷೇತ್ರದ ಹೆಸರು ಹಾಗೂ ವ್ಯಾಪ್ತಿಯ ಗ್ರಾಮಗಳನ್ನು ಆಯಾ ತಾಲೂಕಿಗೆ ಒಳಪಟ್ಟಂತೆ ಮಾರ್ಪಾಡು ಮಾಡಲಾಗಿದೆ.
ಹೊಸ ಕ್ಷೇತ್ರಗಳು
ನೂತನ ಅಧಿಸೂಚನೆಯಂತೆ ಹೊಸದಾಗಿ ಬರಲಿರುವ ಕ್ಷೇತ್ರಗಳ ಹೆಸರು ಇಂತಿವೆ:
ಮಡಿಕೇರಿ ತಾಲೂಕು
ಕ್ಷೇತ್ರದ ಹೆಸರು : ೧. ಕಡಗದಾಳು (ಮಕ್ಕಂದೂರು) : ಒಳಪಡುವ ಗ್ರಾ.ಪಂ.ಗಳು - ಕಡಗದಾಳು, ಮಕ್ಕಂದೂರು, ಗಾಳಿಬೀಡು, ಕಳಕೇರಿ ನಿಡುಗಣೆ.
೨. ಮೇಕೇರಿ (ಹಾಕತ್ತೂರು) : ವ್ಯಾಪ್ತಿಯ ಗ್ರಾ.ಪಂ.ಗಳು - ಮೇಕೇರಿ, ಹಾಕತ್ತೂರು, ಬೆಟ್ಟಗೇರಿ.
೩. ಕಾಂತೂರು ಮೂರ್ನಾಡು : ವ್ಯಾಪ್ತಿಯ ಗ್ರಾ.ಪಂ.ಗಳು - ಕಾಂತೂರು ಮೂರ್ನಾಡು, ಮರಗೋಡು, ಹೊಸ್ಕೇರಿ.
೪. ಎಮ್ಮೆಮಾಡು (ನಾಪೋಕ್ಲು) : ಗ್ರಾ.ಪಂ.ಗಳು -ಎಮ್ಮೆಮಾಡು, ನಾಪೋಕ್ಲು, ಹೊದ್ದೂರು.
೫. ಎಂ.ಚೆAಬು (ಸಂಪಾಜೆ) : ಚೆಂಬು, ಮದೆ
೬. ಕರಿಕೆ (ಭಾಗಮಂಡಲ) : ಭಾಗಮಂಡಲ, ಕರಿಕೆ, ಅಯ್ಯಂಗೇರಿ, ಕುಂದಚೇರಿ, ಬೇಂಗೂರು ಚೇರಂಬಾಣೆ.
೭. ಕುಂಜಿಲ (ಕಕ್ಕಬೆ) : ಕುಂಜಿಲ (ಕಕ್ಕಬೆ), ಬಲ್ಲಮಾವಟಿ, ಕೊಣಂಜಗೇರಿ (ಪಾರಾಣೆ), ನರಿಯಂದಡ.
ಸೋಮವಾರಪೇಟೆ ತಾಲೂಕು ಕ್ಷೇತ್ರ
೧. ದೊಡ್ಡಕೊಡ್ಲಿ (ಕೊಡ್ಲಿಪೇಟೆ) : ಕೊಡ್ಲಿಪೇಟೆ, ಬೆಸ್ಸೂರು, ಬ್ಯಾಡಗೊಟ್ಟ, ಹಂಡ್ಲಿ
೨. ಶನಿವಾರಸಂತೆ : ಶನಿವಾರಸಂತೆ, ದುಂಡಳ್ಳಿ, ನಿಡ್ತ, ಗೌಡಳ್ಳಿ.
೩. ಗೋಣಿಮರೂರು : ಆಲೂರು, ಗಣಗೂರು, ದೊಡ್ಡಮಳ್ತೆ, ನೇರುಗಳಲೆ.
೪. ಬಳಗುಂದ (ಬೇಳೂರು ಬಸವನಹಳ್ಳಿ) : ಬೇಳೂರು, ಬೆಟ್ಟದಳ್ಳಿ, ಕಿರಗಂದೂರು, ಶಾಂತಳ್ಳಿ.
೫. ಗರಗಂದೂರು (ಮಾದಾಪುರ) : ಮಾದಾಪುರ, ಐಗೂರು, ಗರ್ವಾಲೆ, ಹರದೂರು.
೬. ಚೌಡ್ಲು : ಚೌಡ್ಲು, ಹಾನಗಲ್ಲು, ತೋಳೂರು ಶೆಟ್ಟಳ್ಳಿ.
ಕುಶಾಲನಗರ ತಾಲೂಕು ಕ್ಷೇತ್ರ
೧. ನೆಲ್ಲಿಹುದಿಕೇರಿ : ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು, ನಂಜರಾಯಪಟ್ಟಣ.
೨. ಅಂದಗೋವೆ (ಗುಡ್ಡೆಹೊಸೂರು) : ಗುಡ್ಡೆಹೊಸೂರು, ೭ನೇ ಹೊಸಕೋಟೆ, ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು, ಶಿರಂಗಾಲ.
೩. ಕೂಡುಮಂಗಳೂರು : ಕೂಡುಮಂಗಳೂರು, ಮುಳ್ಳುಸೋಗೆ.
೪. ಕೂಡಿಗೆ : ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ.
೫. ಉಲುಗುಲಿ (ಸುಂಟಿಕೊಪ್ಪ) : ಸುಂಟಿಕೊಪ್ಪ, ಚೆಟ್ಟಳ್ಳಿ, ಕೆದಕಲ್.
ವೀರಾಜಪೇಟೆ ತಾಲೂಕು ಕ್ಷೇತ್ರ
೧. ಆರ್ಜಿ : ಆರ್ಜಿ, ಚೆಂಬೆಬೆಳ್ಳೂರು, ಬಿಟ್ಟಂಗಾಲ.
೨. ಕೆದಮುಳ್ಳೂರು : ಕೆದಮುಳ್ಳೂರು, ಬೇಟೋಳಿ, ಕದನೂರು, ಕಾಕೋಟುಪರಂಬು.
೩. ಕಾರ್ಮಾಡು : ಕಾರ್ಮಾಡು, ಅಮ್ಮತ್ತಿ, ಬಿಳುಗುಂದ, ಹೊಸೂರು.
೪. ಕರಡಿಗೋಡು : ಹಾಲುಗುಂದ, ಕಣ್ಣಂಗಾಲ, ಸಿದ್ದಾಪುರ.
೫. ಚೆನ್ನಯ್ಯನಕೋಟೆ : ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಮಾಲ್ದಾರೆ.
ಪೊನ್ನಂಪೇಟೆ ತಾಲೂಕು ಕ್ಷೇತ್ರ
೧. ಹೆಬ್ಬಾಲೆ : ತಿತಿಮತಿ, ಮಾಯಮುಡಿ, ದೇವರಪುರ.
೨. ಬಾಳೆಲೆ : ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ಕಾನೂರು.
೩. ಗೋಣಿಕೊಪ್ಪಲು : ಗೋಣಿಕೊಪ್ಪಲು, ಹಾತೂರು.
೪. ಹಳ್ಳಿಗಟ್ಟು (ಪೊನ್ನಂಪೇಟೆ) : ಪೊನ್ನಂಪೇಟೆ, ಕಿರುಗೂರು, ಬಲ್ಯಮಂಡೂರು, ಅರುವತೋಕ್ಲು.
೫. ಕುಟ್ಟ : ಕುಟ್ಟ, ನಾಲ್ಕೇರಿ, ಕೆ. ಬಾಡಗ, ಶ್ರೀಮಂಗಲ.
೬. ಟಿ.ಶೆಟ್ಟಿಗೇರಿ : ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ.