ಮಡಿಕೇರಿ, ಏ. ೧: ಕೊಡಗು ಫಾರ್ ಟುಮಾರೊ ಸಂಘಟನೆಯ ಮೂಲಕ ಸಂಸ್ಥೆಯ ಸಾಮಾಜಿಕ ಕಳಕಳಿಯಂತೆ ಗ್ರಾಮೀಣ ವಿಭಾಗದ ಹಲವು ಕುಟುಂಬಗಳಿಗೆ ಜೇನು ಸಾಕಾಣಿಕೆ ಅನುಕೂಲವಾಗುವಂತೆ ಪರಿಕರ ವಿತರಿಸಲಾಯಿತು. ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ವಿಭಾಗಗಳ ಜನರು ಆರ್ಥಿಕ ಸಂಕಷ್ಟದ ನಡುವೆ ಗ್ರಾಮೀಣ ಪ್ರದೇಶದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ಕುಟುಂಬದ ಆರ್ಥಿಕತೆಗೆ ಸಹಕಾರಿಯಾಗುವಂತೆ ಜೇನು ಪೆಟ್ಟಿಗೆಗಳನ್ನು ವಿತರಿಸಲು ಸಂಘಟನೆ ಮುಂದಾಗಿದೆ.

ಕೊಡಗು ಸೇವಾ ಕೇಂದ್ರದ ಮೂಲಕ ಅಗತ್ಯತೆ ಇರುವ ೧೧೫ ಕುಟುಂಬಗಳನ್ನು

(ಮೊದಲ ಪುಟದಿಂದ) ಗುರುತಿಸಲಾಗಿದ್ದು, ಈ ಕುಟುಂಬದೊAದಿಗೆ ತಲಾ ಎರಡು ಪೆÀಟ್ಟಿಗೆ ಹಾಗೂ ಸ್ಟಾö್ಯಂಡ್‌ಗಳನ್ನು ಕೊಡಗು ಫಾರ್ ಟುಮಾರೊ ಸಂಘಟನೆಯ ಸದಸ್ಯರು ಇಂದು ಸ್ಥಳಕ್ಕೆ ತೆರಳಿ ಹಸ್ತಾಂತರಿಸಿದರು. ಈ ಸೇವಾ ಕಾರ್ಯಕ್ಕೆ ನಬಾರ್ಡ್ ಸಂಸ್ಥೆಯು ಸಹಕಾರ ನೀಡುತ್ತಿದೆ. ಇಂದು ಈ ಕುಟುಂಬಗಳಿಗೆ ಪೆಟ್ಟಿಗೆಯನ್ನು ನೀಡಲಾಗಿದ್ದು, ಜೇನುಕುಡಿಯನ್ನು ತಾ. ೮ರಂದು ರಾತ್ರಿ ವಿತರಿಸಲಾಗುವುದು ಎಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ. ಇವರೊಂದಿಗೆ ಕೊಡಗು ಸೇವಾ ಕೇಂದ್ರದ ಸ್ವಯಂಸೇವಕರು ಪಾಲ್ಗೊಂಡಿದ್ದರು.