ಮಡಿಕೇರಿ, ಜೂ. ೧೮: ಮಡಿಕೇರಿ ಅಂಚೆ ಕಚೇರಿ ಸಮೀಪ ಇರುವ ಹಾಪ್ ಕಾಮ್ಸ್ ಕಟ್ಟಡದ ಸಮೀಪ ಭೂಕುಸಿತ ಉಂಟಾಗಿದೆ. ಖಾಸಗಿ ಕಟ್ಟಡ ನಿರ್ಮಾಣದ ಸಂದರ್ಭ ಸುಮಾರು ೩೦ರಿಂದ ೪೦ ಅಡಿ ಅಷ್ಟು ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆಯುವ ಸಂದರ್ಭ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ತಡೆಗೋಡೆ ನಿರ್ಮಿಸಿದ ನಂತರವೇ ಕಟ್ಟಡದ ಕಾಮಗಾರಿಯನ್ನು ಮುಂದುವರಿಸುವAತೆ ಸೂಚಿಸಿ ಅನುಮತಿಯನ್ನು ನೀಡಲಾಗಿತ್ತು. ನಗರಸಭೆ ನೋಟೀಸ್ ನೀಡಿ ಮೌನಕ್ಕೆ ಶರಣಾಗಿತ್ತು. ಈಗ ಸಾಕಷ್ಟು ಪ್ರಮಾಣದಲ್ಲಿ ಬರೆ ಕುಸಿಯುತ್ತಿದೆ.

-ಗಣೇಶ್ ಕಡಗದಾಳು