ನಾಪೋಕ್ಲು, ಜೂ. ೧೭: ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ಎಮ್ಮೆಮಾಡಿನ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ೫೦ಕ್ಕೂ ಅಧಿಕ ಬಿ.ಪಿ.ಎಲ್. ಕಾರ್ಡ್ಗಳು ಎ.ಪಿ.ಎಲ್. ಆಗಿ ಮಾರ್ಪಾಡು ಹೊಂದಿದ್ದು, ಅರ್ಹ ಫಲಾನುಭಾವಿಗಳು ಪಡಿತರದಿಂದ ವಂಚಿತರಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಇಸ್ಮಾಯಿಲ್ ಮತ್ತು ಚಂಬಾರAಡ ಮೊಯಿದು ಆರೋಪಿಸಿದ್ದಾರೆ.

ಎಮ್ಮೆಮಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಒಳಪಟ್ಟ ಸುಮಾರು ೫೦ಕ್ಕೂ ಅಧಿಕ ಬಿ.ಪಿ.ಎಲ್. ಕಾರ್ಡನ್ನು ಏಕಾಏಕಿ ಗಮನಕ್ಕೆ ತಾರದೆ ಎ.ಪಿ.ಎಲ್.ಗೆ ವರ್ಗಾಯಿಸಿ ಅರ್ಹ ಫಲಾನುಭವಿಗಳು ಪಡಿತರದಿಂದ ವಂಚಿತರಾಗುವAತೆ ಮಾಡಿರುವುದು ಖಂಡನೀಯ ಎಂದ ಅವರು, ೫೦ ಕಾರ್ಡ್ದಾರರು ಕಡು ಬಡವರಾಗಿದ್ದಾರೆ. ಇವರಲ್ಲಿ ಈಗಾಗಲೇ ಕೊರೊನಾದಿಂದ ಮೃತರಾದ ಒಬ್ಬರು ಇದ್ದು, ಇವರ ಕಾರ್ಡ್ ಸಹ ಎ.ಪಿ.ಎಲ್. ಆಗಿದೆ. ಇವರು ಕೂಲಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದರು. ಕೂಡಲೇ ರದ್ದಾದ ಬಿ.ಪಿ.ಎಲ್. ಕಾರ್ಡನ್ನು ಪುನರ್ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕೂಡಲೇ ಬಿ.ಪಿ.ಎಲ್. ಕಾರ್ಡನ್ನು ವಿತರಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ನ್ಯಾಯಬೆಲೆ ಅಂಗಡಿ ಮಾಲೀಕ ಕಾಳೇರ ಖಾದರ್ ಮಾತನಾಡಿ, ನಮ್ಮ ಅಂಗಡಿಯಲ್ಲಿ ಬಿ.ಪಿ.ಎಲ್. ಕಾರ್ಡ್ ಎ.ಪಿ.ಎಲ್. ಆದ ಬಗ್ಗೆ ನಮಗೆ ತ್ತಿಳಿದಿಲ್ಲ. ಬದಲಾಗಿ ಜನರು ಈ ಬಗ್ಗೆ ತಿಳಿಸಿದಾಗ ನಮಗೆ ತಿಳಿದಿದೆ. ಇದನ್ನು ಸರಕಾರ ಮತ್ತು ಆಹಾರ ಇಲಾಖೆಯವರು ಪರಿಶೀಲಿಸಿ ಕ್ರಮಕೈಗೊಳ್ಳಬೇಕಿದೆ ಎಂದರು.

ಗೋಷ್ಠಿಯಲ್ಲಿ, ಮಹಮ್ಮದ್, ಉಮ್ಮರ್ ಕಾಳೇರ, ಮಾಯಾಂಬಿ, ಮೂಸೆ ಹಾಜಿ, ಅಬುಬಕ್ಕರ್, ಉಮ್ಮರ್ ಮಂಜೇರಿ, ಆಲಿ, ಜಮಾಲ್, ಚಕ್ಕೇರ ಅಬ್ದುಲ್ಲ ಉಮ್ಮುಣಿ ಪರಂಬು, ಮಹಮ್ಮದ್ ಕುರುಳಿ, ಸಭಾನ ಚಂಬಾರAಡ ಮತ್ತಿತರರು ಇದ್ದರು.