ಸುಂಟಿಕೊಪ್ಪ, ಜೂ. ೧೭: ಪ್ರಸ್ತುತದ ಮಳೆಯಿಂದ ಕೃಷಿಕರು ಗದ್ದೆಯನ್ನು ಉಳುಮೆಗೊಳಿಸಿ ಹದಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃಷಿಕರು ಕೆಲವರು ಮಳೆಯನ್ನೇ ಅವಲಂಭಿತರಾಗಿದ್ದು ಮಳೆ ಜೋರಾಗಿ ಸುರಿದರೆ ಮಾತ್ರ ಗದ್ದೆಯನ್ನು ಉಳುಮೆ ಮಾಡಲು ಸಾಧ್ಯವಾಗುತ್ತದೆ. ಇನ್ನಿತರರು ತೋಡು ಕಾಲುವೆ ನಾಲೆ ಅವಲಂಭಿಸಿದ್ದು, ಉಳುಮೆ ಮಾಡಿ ಕೃಷಿ ಮಾಡುತ್ತಾರೆ. ಭತ್ತದ ಬೀಜವನ್ನು ಕೃಷಿ ಇಲಾಖೆಯಿಂದ ಖರೀದಿಸಿ ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದಾರೆ.

ಈ ವರ್ಷ ಮುಂಗಾರು ಜಿಲ್ಲೆಯನ್ನು ಪ್ರವೇಶಿಸಿ ತನ್ನ ಆರ್ಭಟ ಮುಂದುವರೆಸಿರುವುರಿAದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇತ್ತೀಚೆಗೆ ಗದ್ದೆಯನ್ನು ತೋಟವಾಗಿ ಪರಿವರ್ತಿಸುತ್ತಿದ್ದು, ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖಗೊಂಡಿದೆ. ಆದರೂ ಕೊಡಗರಹಳ್ಳಿ, ಕಂಬಿಬಾಣೆ, ೭ನೇ ಹೊಸಕೋಟೆ, ಗದ್ದೆಹಳ್ಳ, ಕೆದಕಲ್, ಸೂರ್ಲಬ್ಬಿ, ಗರಗಂದೂರು, ಮಾದಾಪುರ, ಗರ್ವಾಲೆ, ಹೊಸತೋಟ, ಕುಂಬೂರು ಮತ್ತಿತರೆಡೆಗಳಲ್ಲಿ ರೈತಾಪಿ ವರ್ಗದವರು ಪ್ರತಿ ವರ್ಷ ಭತ್ತವನ್ನು ಬೆಳೆಯುವುದನ್ನು ರೂಢಿಸಿಕೊಂಡಿದ್ದಾರೆ.