ಮಡಿಕೇರಿ, ಜೂ. ೧೭: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋ ರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಈ ಸಂಸ್ಥೆಯು ದೇಶದ ಪಾಲಿಮರ್/ ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ. ೨೦೨೧-೨೨ನೇ ಸಾಲಿನ ೨ ನೇ ವರ್ಷದ (ಲ್ಯಾಟರಲ್ ಎಂಟ್ರಿ) ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ.

ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಆPಖಿ) –೨ ವರ್ಷ, ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಆPಒಖಿ)-೨ ವರ್ಷ, ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಆರ್.ಟಿ. ನಾಗರಳ್ಳಿ ಅವರು ತಿಳಿಸಿದ್ದಾರೆ. ಪಿಯುಸಿ (ವಿಜ್ಞಾನ) ಅಥವಾ ಐಟಿಐ (ಈiಣಣeಡಿ/ಖಿuಡಿಟಿeಡಿ/ಒಚಿಛಿhiಟಿisಣ/ಆಡಿಚಿಜಿಣsmಚಿಟಿ) ಪರೀಕ್ಷೆಯಲ್ಲಿ ಹಾಜರಾದವರು/ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ:೦೮೨೧-೨೫೧೦೬೧೮/ ೯೪೮೦೨೫೩೦೨೪/ ೯೧೪೧೦೭೫೯೬೮ ಸಂಪರ್ಕಿಸಬಹುದಾಗಿದೆ ಎಂದು ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.