ಮಡಿಕೇರಿ, ಜೂ. ೧೭; ಎಲ್ಲ ಪಟ್ಟಣ., ನಗರಗಳು ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಯತ್ತ ಸಾಗುತಲಿದ್ದರೆ, ಇತ್ತ ಮಂಜಿನಗರಿ ಎಂಬ ಖ್ಯಾತಿಯ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎಲ್ಲೆಲ್ಲೂ ಅವ್ಯವಸ್ಥೆಗಳೇ ಕಾಣಬರುತ್ತಿವೆ.., ಕಳೆದೆರಡು ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದೆ ಅಧಿಕಾರಿಗಳ ಆಡಳಿತದಲ್ಲಿದ್ದ ನಗರದಲ್ಲಿನ ಅವ್ಯವಸ್ಥೆಗಳು ಮಳೆ ಬೀಳುತ್ತಿರುವಂತೆಯೇ ಒಂದೊAದಾಗಿ ಕಳಚಿಕೊಳ್ಳುತ್ತಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಹೊಸ ‘ಹೈಟೆಕ್’ ಎಂಬ ಲೇಪನವನ್ನು ಹಚ್ಚಲಾಗಿರುವ ಬಸ್ ನಿಲ್ದಾಣವಿಂದು ಕತ್ತಲ ಕೂಪವಾಗಿದ್ದು, ಮಂಜಿನ ನಗರಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ವಿಶಾಲವಾದ ಪ್ರಾಂಗಣವನ್ನು ಹೊಂದಿರುವ ಈ ನಿಲ್ದಾಣದ ಆವರಣದಲ್ಲಿ ಒಂದೇ ಒಂದು ವಿದ್ಯುತ್ ದೀಪದ ವ್ಯವಸ್ಥೆಗಳಿಲ್ಲ., ಕತ್ತಲ ನಡುವೆ ಮುಳುಗಿರುವ ಈ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣವಾಗಿರುವದಕ್ಕೆ ಅಲ್ಲಿರುವ ಅವಶೇಷಗಳೇ ಸಾಕ್ಷಿಯಾಗಿವೆ. ನಗರ ಸಭೆಯ ನೋಟ ಇತ್ತ ಹರಿದಿಲ್ಲವೆಂಬದನ್ನು ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಇದೀಗ ನಾಶವಾಗಿರುವ ಸೌಲಭ್ಯಗಳ ಕುರುಹುಗಳು ಹೇಳುತ್ತವೆ..!

ಮಡಿಕೇರಿಯ ಈ ಹಿಂದಿನ ಖಾಸಗಿ ಬಸ್ ನಿಲ್ದಾಣ ಕಿಷ್ಕಿಂಧೆಯಿAದ ಕೂಡಿದ್ದರಿಂದ ಹೊಸದಾಗಿ ವೆಬ್ಸ್ ಬಳಿ ಕೋಟಿ

(ಮೊದಲ ಪುಟದಿಂದ) ವೆಚ್ಚದಲ್ಲಿ ‘ಹೈಟೆಕ್’ ಮಾದರಿಯ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ನಿರ್ಮಾಣವಾದಲ್ಲಿಂದಲೇ ವಿವಾದಕ್ಕೆ ಸಿಲುಕಿರುವ ಈ ತಾಣದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಸ್‌ಗಳು ಬಂದು ನಿಲುಗಡೆಗೊಳ್ಳುತ್ತವೆ. ಆದರೆ, ಈ ನಿಲ್ದಾಣದಲ್ಲಿ ಈ ಹಿಂದಿನಿAದಲೂ ಸೂಕ್ತವಾದ ಮೂಲಭೂತ ಸೌಲಭ್ಯಗಳಿಲ್ಲವೆಂಬ ಕೂಗು ಕೇಳುತ್ತಲೇ ಇದೆ. ಇದೀಗವಂತೂ ಕೊರೊನಾ ಬಂದ ಬಳಿಕ ಈ ನಿಲ್ದಾಣಕ್ಕೆ ದಿಕ್ಕು ದೆಸೆಯಿಲ್ಲದಂತಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂಚರಿಸಲಾಗದ ಹಲವಷ್ಟು ಖಾಸಗಿ ಬಸ್‌ಗಳು ಇಲ್ಲಿ ಅನೈತಿಕ ತಾಣ

ಕೋಟಿ ವೆಚ್ಚ ಮಾಡಿ ಕಟ್ಟಿರುವ ಈ ನಿಲ್ದಾಣ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ಅನುಕೂಲವಾಗದಿದ್ದರೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮಾತ್ರ ಪ್ರಶಸ್ತ ಸ್ಥಳವಾಗಿದೆ. ಈ ನಿಲ್ದಾಣದೊಳಗಡೆ ಎಲ್ಲಿ ನೋಡಿದರೂ ಮದ್ಯದ ಬಾಟಲಿ, ಪ್ಯಾಕೆಟ್‌ಗಳು, ಬೀಡಿ, ಸಗರೇಟಿನ ತುಂಡುಗಳೇ ಕಾಣುತ್ತವೆ. ಇದರೊಂದಿಗೆ ಇಲ್ಲಿ ನಿರ್ಮಿಸಲಾಗಿರುವ ಅಂಗಡಿ ಮಳಿಗೆಗಳು ತೆರೆದುಕೊಂಡಿದ್ದು, ಇದರೊಳಗಡೆ ‘ಎಲ್ಲವೂ’ ಇದೆ. ಲಾಡ್ಜ್ಗಳಿಗೆ ಹೋಗುವ ಬದಲಿಗೆ ಜೋಡಿಗಳು ಇದನ್ನೇ ‘ಬೆಡ್ ರೂಂ’ ಮಾಡಿಕೊಂಡAತಿದೆ..!

ಸಿಸಿ ಟಿವಿಯೇ ಇಲ್ಲ..!

ನಿಲ್ದಾಣದೊಳಗಿನ ಆಗು ಹೋಗುಗಳು ಹಾಗೂ ಇನ್ನಿತರ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೀಗ ಅವುಗಳು ಪಳೆಯುಳಿಕೆಯಂತೆ ಕಣ್ಣಿಗೆ ರಾಚುತ್ತವೆ. ಕ್ಯಾಮರಾಗಳು ಕೆಟ್ಟು ನಿಂತಿದ್ದರೆ, ಫೂಟೇಜ್ ಇರುವ ಕೊಠಡಿಯ ಬಾಗಿಲಿಗೆ ಬೀಗವೇ ಇಲ್ಲ. ಅಲ್ಲಿ ಇರಿಸಲಾಗಿರುವ ಇನ್ವರ್ಟರ್ ಹಾಗೂ ಬ್ಯಾಟರಿ ಮೂಲೆಯಲ್ಲಿ ಧೂಳು ಹಿಡಿದಿವೆ. ಕೋಣೆಯೊಳಗೆ ಹೊಕ್ಕರೆ ಯಾವದೋ ‘ಬಾರ್’ನ ಕಸ ಹಾಕುವ ಜಾಗಕ್ಕೆ ಹೋದಂತಾಗುತ್ತದೆ..!

ಅವ್ಯವಸ್ಥೆಯಿAದ ಕೂಡಿರುವ ಈ ಬಸ್ ನಿಲ್ದಾಣದತ್ತ ಇದುವರೆಗೆ ಯಾವದೇ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಗಮನ ಹರಿಸಿದಂತೆ ಕಾಣುತ್ತಿಲ್ಲ. ಆವರಣದೊಳಗಡೆ ಗುಡಿಸಲುಗಳು ತಲೆಯೆತ್ತಿವೆ. ಜೆಸಿಬಿಗಳು, ಖಾಸಗಿ ವಾಹನಗಳು ನಿಂತಿವೆ. ಕಟ್ಟಡದ ಮೇಲ್ಬಾಗದಲ್ಲಿ ಒಣಗಲು ಹಾಕಿರುವ ಬಟ್ಟೆಗಳು ಹಾರಾಡುತ್ತಿವೆ. ಇದರೊಂದಿಗೆ ಲಕ್ಷಾಂತರ ಮೌಲ್ಯದ ಬಸ್‌ಗಳನ್ನು ಮಾಲೀಕರು ನಿಲುಗಡೆಗೊಳಿಸಿದ್ದು, ಇವುಗಳಿಗೆ ಯಾವದೇ ರಕ್ಷಣೆ ಇಲ್ಲದಂತಾಗಿದೆ. ವ್ಯವಸ್ಥೆಗಳನ್ನು ಕಲ್ಪಿಸುವ ಬದಲಿಗೆ ಅವ್ಯವಸ್ಥೆಗಳ ಆಗರವನ್ನಾಗಿಸದೆ ಇತ್ತ ನಗರಸಭೆ ಗಮನ ಹರಿಸಬೇಕಿದೆ ಎಂಬದು ನಿಲ್ದಾಣ ಸುತ್ತ ಮುತ್ತಲಿನಲ್ಲಿ ಕತ್ತಲನ್ನೇ ನೋಡುತ್ತಿರುವವರ ಕೋರಿಕೆಯಾಗಿದೆ.

?ಕುಡೆಕಲ್ ಸಂತೋಷ್