ಮಡಿಕೇರಿ, ಜೂ. ೧೮: ಮರಂದೋಡ ಗ್ರಾಮದಲ್ಲಿ ಸುಮಾರು ಒಂದೂವರೆ ತಿಂಗಳಿನಿAದ ೧೨ ಕಾಡಾನೆಗಳಿರುವ ಹಿಂಡು ಬೀಡು ಬಿಟ್ಟಿವೆ. ಗ್ರಾಮದ ನಿವಾಸಿಗಳ ತೋಟಗಳಿಗೆ ನುಗ್ಗಿ ತೆಂಗು, ಅಡಿಕೆ, ಬಾಳೆ, ಕಾಫಿ ಇತ್ಯಾದಿ ಬೆಳೆಗಳನ್ನು ನಾಶಮಾಡುತ್ತಿವೆ. ಈ ಸಂಬAಧ ಪಂಚಾಯಿತಿ ಸದಸ್ಯ ಹರೀಶ್ ಅವರು, ಕುಂಜಿಲ-ಕಕ್ಕಬ್ಬೆ ಪಂಚಾಯಿತಿ ಅಧ್ಯಕ್ಷ ಹಾಗೂ ಪಿ.ಡಿ.ಒ. ಮೂಲಕ ವೀರಾಜಪೇಟೆ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದ್ದು, ಒಂದು ಬಾರಿ ಭೇಟಿ ನೀಡಿ ಹೋಗಿದ್ದಾರೆ ಹೊರತು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮಡಿಕೇರಿ, ಜೂ. ೧೮: ಮರಂದೋಡ ಗ್ರಾಮದಲ್ಲಿ ಸುಮಾರು ಒಂದೂವರೆ ತಿಂಗಳಿನಿAದ ೧೨ ಕಾಡಾನೆಗಳಿರುವ ಹಿಂಡು ಬೀಡು ಬಿಟ್ಟಿವೆ. ಗ್ರಾಮದ ನಿವಾಸಿಗಳ ತೋಟಗಳಿಗೆ ನುಗ್ಗಿ ತೆಂಗು, ಅಡಿಕೆ, ಬಾಳೆ, ಕಾಫಿ ಇತ್ಯಾದಿ ಬೆಳೆಗಳನ್ನು ನಾಶಮಾಡುತ್ತಿವೆ. ಈ ಸಂಬAಧ ಪಂಚಾಯಿತಿ ಸದಸ್ಯ ಹರೀಶ್ ಅವರು, ಕುಂಜಿಲ-ಕಕ್ಕಬ್ಬೆ ಪಂಚಾಯಿತಿ ಅಧ್ಯಕ್ಷ ಹಾಗೂ ಪಿ.ಡಿ.ಒ. ಮೂಲಕ ವೀರಾಜಪೇಟೆ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದ್ದು, ಒಂದು ಬಾರಿ ಭೇಟಿ ನೀಡಿ ಹೋಗಿದ್ದಾರೆ ಹೊರತು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪಂಚಾಯಿತಿ ಸದಸ್ಯ ಹರೀಶ್ ಅವರ ಮುಂದಾಳತ್ವದಲ್ಲಿ ಆನೆಗಳ ಹಿಂಡನ್ನು ಓಡಿಸಲು ಊರಿನವರಾದ ಟಿಂಕಲ್, ಮೊಣ್ಣಪ್ಪ, ರಾಬಿನ್, ಪೂವಣ್ಣ, ದೇವ್, ನಿಕಿಲ್, ರಾಯಲ್ ಅವರುಗಳೇ ಮುಂದಾಗಿದ್ದು, ಕೋಲು, ದೊಣ್ಣೆಗಳನ್ನು ಹಿಡಿದುಕೊಂಡು ಆನೆ ಹಿಂಡನ್ನು ಕೆರೆತಟ್ಟುವರೆಗೆ ಓಡಿಸಿದ್ದಾರೆ. ಆದರೆ ಮತ್ತೊಂದು ಆನೆ ಹಿಂಡು ಮರಂದೋಡಕ್ಕೆ ಆಗಮಸಿ ರೈತರ ಫಸಲನ್ನು ನಾಶಪಡಿಸಿ ನಿರಂತರ ಉಪಟಳ ನೀಡುತ್ತಿವೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.