ಸೋಮವಾರಪೇಟೆ, ಜೂ.೧೭: ತಮ್ಮ ಜೊತೆಗಿದ್ದ ಸ್ನೇಹಿತ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭ ಇತರ ರೋಗಿಗಳು, ಅವರ ಸಂಬAಧಿಕರ ತೊಳಲಾಟ, ಆಸ್ಪತ್ರೆಯಲ್ಲಾಗುತ್ತಿದ್ದ ಸಾವು ನೋವನ್ನು ಕಂಡು ಸಮಾಜದ ಅಶಕ್ತರಿಗೆ ನೆರವಾಗುವ ರೋಗಿಗಳು, ಅವರ ಸಂಬAಧಿಕರ ತೊಳಲಾಟ, ಆಸ್ಪತ್ರೆಯಲ್ಲಾಗುತ್ತಿದ್ದ ಸಾವು ನೋವನ್ನು ಕಂಡು ಸಮಾಜದ ಅಶಕ್ತರಿಗೆ ನೆರವಾಗುವ ನಿಶ್ಚಯಿಸಿತು.

ದುರದೃಷ್ಟವಶಾತ್ ಆಸ್ಪತ್ರೆಯಲ್ಲಿದ್ದ ಸ್ನೇಹಿತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ. ಈ ನೋವನ್ನು ಅನುಭವಿಸಿದ ಸಮಾನ ಮನಸ್ಕರ ತಂಡ ವಾಟ್ಸಾಪ್‌ನಲ್ಲಿ ಸ್ಪಂದನ ಎಂಬ ಗುಂಪು ರಚಿಸಿಕೊಂಡು, ಸಮಾಜದ ಅಶಕ್ತರಿಗೆ ನೆರವು ನೀಡಲು ತೀರ್ಮಾನಿಸಿತು.

ಅದರಂತೆ ಸ್ಪಂದನ ಗ್ರೂಪ್‌ನ ಅಧ್ಯಕ್ಷರನ್ನಾಗಿ ಅಕ್ಬರ್ ಅವರನ್ನು ನೇಮಿಸಿಕೊಂಡು ಸಮಾಜ ಸೇವಾ ಕಾರ್ಯಕ್ಕೆ ಇಳಿಯಿತು. ಸಂಘದ ಪದಾಧಿಕಾರಿಗಳು ಕೊರೊನಾ ಲಾಕ್‌ಡೌನ್ ಸಂದರ್ಭ ಸಂಕಷ್ಟಕ್ಕೆ ಸಿಲುಕಿದವರಿಗೆ, ಕೊರೊನಾ ಸಂಬAಧಿತ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡುವ ಮೂಲಕ ನೊಂದವರಿಗೆ ಸ್ಪಂದನೆ ನೀಡಿದರು.

ಸ್ಪಂದನ ತಂಡದಲ್ಲಿರುವ ಬಹುತೇಕ ಎಲ್ಲರೂ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರು ವವರು. ಸಣ್ಣಪುಟ್ಟ ವ್ಯಾಪಾರ, ಕೂಲಿ ಕೆಲಸ, ಚಾಲಕ ವೃತ್ತಿ ಮಾಡಿಕೊಂಡಿರುವ ೨೫ ಜನರ ತಂಡ ಸಮಾಜದ ಅಶಕ್ತರಿಗೆ ನೆರವು ಒದಗಿಸುತ್ತಿದೆ.

ಕೊರೊನಾ ಲಾಕ್‌ಡೌನ್ ಸಂದರ್ಭ ಅತೀ ಸಂಕಷ್ಟಕ್ಕೆ ಒಳಗಾದ ೭೫ ಕುಟುಂಬಗಳಿಗೆ ೨೦ ದಿನಗಳಿಗೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಒದಗಿಸಿದ್ದಾರೆ. ಇದರೊಂದಿಗೆ ಕೂಡಿಗೆಯ ಓರ್ವ ಕಿಡ್ನಿ ಸಂಬAಧಿತ ರೋಗಿಗೆ ೨೫ ಸಾವಿರ, ಮತ್ತೋರ್ವ ಕ್ಯಾನ್ಸರ್ ರೋಗಿಗೆ ೧೦ ಸಾವಿರ, ಪಟ್ಟಣದ ಕ್ಯಾನ್ಸರ್ ರೋಗಿಗೆ ೧೦ ಸಾವಿರ, ಐಗೂರಿನ ರೋಗಿಯೋರ್ವರಿಗೆ ೧೦ ಸಾವಿರ ಧನ ಸಹಾಯ ನೀಡಿದ್ದಾರೆ. ಎಲ್ಲರೂ ತಮ್ಮ ಸ್ವಂತ ದುಡಿಮೆಯ ಹಣದಿಂದ ಈ ಸೇವಾಕಾರ್ಯ ಕೈಗೊಂಡಿರುವುದು ಮಾದರಿ ಕಾರ್ಯವಾಗಿದೆ.

ಕೆಲಸ, ಚಾಲಕ ವೃತ್ತಿ ಮಾಡಿಕೊಂಡಿರುವ ೨೫ ಜನರ ತಂಡ ಸಮಾಜದ ಅಶಕ್ತರಿಗೆ ನೆರವು ಒದಗಿಸುತ್ತಿದೆ.