ಮಡಿಕೇರಿ, ಜೂ. ೧೮: ಅಕ್ರಮವಾಗಿ ಜೂಡಾಡುತ್ತಿದ್ದ ಅಡ್ಡೆಗೆ ದಾಳಿ ಮಾಡಿದ ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆದಳದವರು ಜೂಜಾಟದಲ್ಲಿ ತೊಡಗಿದ್ದ ೯ ಮಂದಿಯನ್ನು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಗ್ರಾಮದ ಬಿ.ಎಸ್. ಅನಂತ್‌ಕುಮಾರ್ ಅವರಿಗೆ ಸೇರಿದ ಗೋದಾಮಿನಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಅಪರಾಧ ಪತ್ತೆ ದಳದವರು ದಾಳಿ ಮಾಡಿದ್ದಾರೆ. ಈ ಸಂದರ್ಭ ಜೂಜಾಟದಲ್ಲಿ ತೊಡಗಿದ್ದ ಟಿ.ಕೆ. ಪುನಿತ್, ನಟೇಶ, ಕೋಮಲೇಶ್, ಶೇಷಗಿರಿ, ಪ್ರಮೋದ್, ಪಿ. ಲೋಕೇಶ್, ಕೆ.ಜೆ. ಅರುಣ್, ಹೆಚ್.ಎಸ್. ಪರಮೇಶ, ಎಂ.ಪಿ. ಕಿರಣ್ ಅವರುಗಳನ್ನು ಬಂಧಿಸಿದ್ದಾರೆ. ಬಂಧಿತರಿAದ ಜೂಜಾಟಕ್ಕೆ ಬಳಸಿದ್ದ ರೂ. ೧೭೯೧೦ ನಗದು, ಮೇಜು, ಕುರ್ಚಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ೯ ಮಂದಿ ಸೇರಿದಂತೆ ಗೋದಾಮು ಮಾಲೀಕ ಅನಂತ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ, ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಕುಮಾರ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಸುರೇಶ್, ಯು.ಎ. ಮಹೇಶ್, ಶಶಿಕುಮಾರ್ ಭಾಗವಹಿಸಿದ್ದರು.