ಸೋಮವಾರಪೇಟೆ, ಜೂ.೧೭: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮನೆಯ ಮುಂಭಾಗ ಬೆಳೆದಿದ್ದ ೬ ಶ್ರೀಗಂಧದ ಮರಗಳನ್ನು ಕಳವು ಮಾಡಿದ ಪ್ರಕರಣ ಜನಮಾನಸದಿಂದ ಬಹುತೇಕ ಮರೆಯಾಗಿದ್ದರೂ, ಆರೋಪಿಗಳ ಪತ್ತೆ ಮಾತ್ರ ಇಂದಿಗೂ ಆಗಿಲ್ಲ. ಕಳೆದ ೨೦೧೯ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದ ಶ್ರೀಗಂಧದ ಕಳವು ಪ್ರಕರಣದಲ್ಲಿ ಈವರೆಗೆ ಯಾವದೇ ಆರೋಪಿಗಳು ಪತ್ತೆಯಾಗಿಲ್ಲ. ಶಾಸಕರು ಬೆಳೆಸಿದ್ದ ಶ್ರೀಗಂಧದ ಮರವೂ ಅವರಿಗೆ ಮರಳಿ ಲಭಿಸಿಲ್ಲ! ಕಳ್ಳರ ಸಣ್ಣ ಕುರುಹೂ ಸಿಕ್ಕಿಲ್ಲ

ಕಳೆದ ತಾ. ೧೦.೧೦.೨೦೧೯ರಂದು ರಾತ್ರಿ ಸೋಮವಾರಪೇಟೆಯ ಕುಂಬೂರು ಗ್ರಾಮದಲ್ಲಿರುವ ಅಪ್ಪಚ್ಚು ರಂಜನ್ ಅವರ ಮನೆಯ ಮುಂಭಾಗ ಬೆಳೆದಿದ್ದ ೬ ಶ್ರೀಗಂಧದ ಮರಗಳನ್ನು ಕಳ್ಳರು ಬಲು ನಾಜೂಕಾಗಿ ಕತ್ತರಿಸಿಕೊಂಡು ಹೋಗಿದ್ದರು.

ವಿಧಾನಸಭಾ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆ ಶಾಸಕರು ಪತ್ನಿ ಸಹಿತ ಬೆಂಗಳೂರಿಗೆ ತೆರಳಿದ್ದ ಸಂದರ್ಭವನ್ನು ಸಾಧಿಸಿದ ಖದೀಮರು ತಮ್ಮ ಕೈಚಳಕ ತೋರಿದ್ದರು.

ಸುಮಾರು ೧೦ ವರ್ಷಕ್ಕೂ ಹೆಚ್ಚು ಪ್ರಾಯದ ಶ್ರೀಗಂಧದ ಮರದ ಚೇಗು ಬಲಿಯಲಾರಂಭಿಸಿದ್ದವು. ಇಂತಹ ಸಂದರ್ಭದಲ್ಲೇ ಕಳ್ಳರು ತಮ್ಮ ಚಾಕಚಕ್ಯತೆ ತೋರಿದ್ದು, ವಾಚ್‌ಮೆನ್‌ನ ಅರಿವಿಗೂ ಬಾರದಂತೆ, ಗೇಟ್‌ನಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾಕ್ಕೂ ಸೆರೆ ಸಿಕ್ಕದಂತೆ ೬ ಕುಂಬೂರು ಗ್ರಾಮದಲ್ಲಿರುವ ಅಪ್ಪಚ್ಚು ರಂಜನ್ ಅವರ ಮನೆಯ ಮುಂಭಾಗ ಬೆಳೆದಿದ್ದ ೬ ಶ್ರೀಗಂಧದ ಮರಗಳನ್ನು ಕಳ್ಳರು ಬಲು ನಾಜೂಕಾಗಿ ಕತ್ತರಿಸಿಕೊಂಡು ಹೋಗಿದ್ದರು.

ವಿಧಾನಸಭಾ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆ ಶಾಸಕರು ಪತ್ನಿ ಸಹಿತ ಬೆಂಗಳೂರಿಗೆ ತೆರಳಿದ್ದ ಸಂದರ್ಭವನ್ನು ಸಾಧಿಸಿದ ಖದೀಮರು ತಮ್ಮ ಕೈಚಳಕ ತೋರಿದ್ದರು.

ಸುಮಾರು ೧೦ ವರ್ಷಕ್ಕೂ ಹೆಚ್ಚು ಪ್ರಾಯದ ಶ್ರೀಗಂಧದ ಮರದ ಚೇಗು ಬಲಿಯಲಾರಂಭಿಸಿದ್ದವು. ಇಂತಹ ಸಂದರ್ಭದಲ್ಲೇ ಕಳ್ಳರು ತಮ್ಮ ಚಾಕಚಕ್ಯತೆ ತೋರಿದ್ದು, ವಾಚ್‌ಮೆನ್‌ನ ಅರಿವಿಗೂ ಬಾರದಂತೆ, ಗೇಟ್‌ನಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾಕ್ಕೂ ಸೆರೆ ಸಿಕ್ಕದಂತೆ ೬ ಕಳ್ಳರ ಸುಳಿವು ಲಭಿಸಲಿಲ್ಲ. ತದನಂತರ ಪ್ರಕರಣವನ್ನು ಸೋಮವಾರಪೇಟೆಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಹಸ್ತಾಂತರಿಸಲಾಯಿತು.

ಹಲವಷ್ಟು ಪ್ರಕರಣಗಳಲ್ಲಿ ದಶಕಗಳ ನಂತರ ಆರೋಪಿಗಳು ಪತ್ತೆಯಾದ ದಾಖಲೆ ಇಲಾಖೆಯಲ್ಲಿದೆ. ಇನ್ನಾದರೂ ವಿಧಾನ ಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಅಪ್ಪಚ್ಚು ರಂಜನ್ ಅವರ ಮನೆಯಂಗಳದಲ್ಲಿದ್ದ ಶ್ರೀಗಂಧವನ್ನು ಎಗರಿಸಿದ ಖದೀಮರ ಪತ್ತೆ ಕಾರ್ಯ ನಡೆಯುತ್ತದೆಯೇ? ಅಥವಾ ಕಳ್ಳತನ ಪ್ರಕರಣ ಇಲಾಖೆಯ ಕಡತಗಳಲ್ಲಿ ದಾಖಲೆಯಾಗಿ ಉಳಿಯುತ್ತದೆಯೇ? ಎಂಬದನ್ನು ಕಾದು ನೋಡಬೇಕಿದೆ!

- ವಿಜಯ್ ಹಾನಗಲ್