ಚೆಯ್ಯAಡಾಣೆ, ಜೂ. ೧೭: ಕೊರೊನಾ ಸಂಕಷ್ಟಮಯ ವಾತಾವರಣದಲ್ಲಿ ಸಾರ್ವಜನಿಕರ ಹಿತದೃಷ್ಟಿಗಾಗಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗಳಿಗೆ ಒಳಪಡುವ ವಿವಿಧ ಪ್ರದೇಶಗಳಾದ ನಲ್ವತೋಕ್ಲು, ಬಿಳುಗುಂದ, ಎಮ್ಮೆಮಾಡು, ಪಡಿಯಾನಿ, ಅರಪಟ್ಟು ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ, ಕನ್ನಂಗಾಳ, ಕೊಂಡAಗೇರಿ, ಅಮ್ಮತ್ತಿ, ಕಬಡಕೇರಿ ಗ್ರಾಮಗಳ ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಸ್ಥಳೀಯ ಪಂಚಾಯಿತಿ ಅಧ್ಯಕ್ಷರಿಗೆ, ವೀರಾಜಪೇಟೆಯ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟಿಗೆ, ಕೊಟ್ಟಮುಡಿ, ಕಡಂಗ, ಎಡಪಾಲದ ಹಳೇ ಜುಮಾ ಮಸೀದಿಯ ಅದೀನದ ಕೋವಿಡ್ ಹೋಂಕೇರ್ ಸೆಂಟರ್, ಕೆಡಿಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎನ್.ಹೆಚ್.ವೈ.ಎ. ಸಂಘಟನೆಗಳಿಗೆ ಪಲ್ಸ್ ಆಕ್ಸಿಮೀಟರನ್ನು ದಾನ ಮಾಡಲಾಯಿತು.

ಸೀಲ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಕಡಗದಾಳುವಿನ ತುರ್ಕರಟ್ಟಿ ಹಾಗೂ ವೀರಾಜಪೇಟೆಯ ಮೊಗರಗಲ್ಲಿಯಲ್ಲಿ ಕೋವಿಡ್ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್, ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಕೇರಿ ಗಿರಿಜನರ ಹಾಡಿ, ನಲ್ವತೋಕ್ಲುಗಳಿಗೆ ೮೦ ರಷ್ಟು ಕುಟುಂಬಗಳಿಗೆ ತರಕಾರಿಗಳ ಕಿಟ್, ಪವಿತ್ರ ರಂಜಾನ್ ತಿಂಗಳಲ್ಲಿ ವ್ರತ ಅನುಷ್ಠಾನ ಮಾಡುವ ಬಡವರಿಗೆ ನೆರವಾಗಲು ೪೦ ರಷ್ಟು ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು. ಅಲ್ಲದೆ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಶಾಲನಗರದ ಬಡ ರೋಗಿಯ ಚಿಕಿತ್ಸಾ ನೆರವನ್ನು ಕೂಡ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಸಂಘಟನೆಯ ರಾಷ್ಟಿçÃಯ ಅಧ್ಯಕ್ಷ ಜನಾಬ್ ನಸೀರ್ ಅಹಮ್ಮದ್ ಹಾಗೂ ಕಾರ್ಯಾಧ್ಯಕ್ಷ ಅಬೂಬಕ್ಕರ್ ಸಜೀಪ ಅವರ ಸಲಹೆ ಮೇರೆಗೆ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಪತಾಯಿ ಕಡಂಗ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಚೋಕಂಡಹಳ್ಳಿ, ಅಶ್ರಫ್ ಕಡಂಗ, ಮೊಹಮ್ಮದ್ ಕೊಟ್ಟಮುಡಿ, ನಜೀರ್ ಚಾಮಿಯಾಲ್, ಸಿ.ಎ. ರಜಾಕ್ ಚೆಯ್ಯಂಡಾಣೆ, ಸೈಫುದ್ದೀನ್ ಚಾಮಿಯಾಲ್, ಹ್ಯಾರಿಸ್ ಕೊಂಡAಗೇರಿ ಸಮಾಜ ಸೇವೆಯ ಹಾದಿಯಲ್ಲಿ ಕಾರ್ಯೋನ್ಮುಖರಾದರು.

- ಸಿ.ಎ. ಅಶ್ರಫ್, ಚೆಯ್ಯಂಡಾಣೆ.