ಕೋವಿಡ್ ಲಸಿಕೆ ಪಡೆಯುವುದರಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ

ನವದೆಹಲಿ, ಜೂ. ೧೮: ವ್ಯಾಕ್ಸಿನೇಷನ್ ನಂತರ ಕೋವಿಡ್ ಸೋಂಕು ತಗುಲಿ, ಆಮ್ಲಜನಕದ ಅವಶ್ಯಕತೆ ಶೇ. ೮ಕ್ಕೆ ಇಳಿದ ನಂತರವೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಶೇ. ೭೫-೮೦ ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೇ ೭ ರಂದು ಗರಿಷ್ಠ ಪ್ರಕರಣಗಳು ವರದಿಯಾದಾಗಿನಿಂದ ದೈನಂದಿನ ಹೊಸ ಪ್ರಕರಣಗಳಲ್ಲಿ ಬಹುತೇಕ ಶೇ. ೮೫ ರಷ್ಟು ಕುಸಿತ ಕಂಡುಬAದಿದೆ. ಮೇ ೧೦ ರಂದು ಗರಿಷ್ಠ ವರದಿ ನಂತರ ಒಟ್ಟು ಸಕ್ರಿಯ ಕೋವಿಡ್-೧೯ ಪ್ರಕರಣಗಳಲ್ಲಿ ಶೇ. ೭೮.೬ ರಷ್ಟು ಕುಸಿತ ದಾಖಲಾಗಿದೆ ಎಂದು ಹೇಳಿದೆ. ಸಾಪ್ತಾಹಿಕ ಪ್ರಕರಣದ ಪಾಸಿಟಿವಿಟಿ ದರದಲ್ಲಿ ಶೇ. ೮೧ ರಷ್ಟು ತೀವ್ರ ಕುಸಿತ ಕಂಡುಬAದಿದೆ. ಇದು ಏಪ್ರಿಲ್ ೩೦- ಮೇ ೬ ನಡುವೆ ಶೇ. ೨೧.೬ ರಷ್ಟಿತ್ತು ಎಂದು ಸರ್ಕಾರ ತಿಳಿಸಿದೆ. ೫೧೩ ಜಿಲ್ಲೆಗಳಲ್ಲಿ ಕೋವಿಡ್-೧೯ ಪಾಸಿಟಿವಿಟಿ ದರ ಶೇ. ೫ಕ್ಕಿಂತಲೂ ಕಡಿಮೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಮರೋಪಾದಿಯಲ್ಲಿ ೧,೫೦೦ ಆಮ್ಲಜನಕ ಘಟಕ ನಿರ್ಮಾಣ

ನವದೆಹಲಿ, ಜೂ. ೧೮: ಕೋವಿಡ್-೧೯ ಸಾಂಕ್ರಾಮಿಕ ಎದುರಿಸಲು ದೇಶಾದ್ಯಂತ ಸಮರೋಪಾದಿ ಕಾರ್ಯಗಳು ನಡೆಯುತ್ತಿದ್ದು, ದೇಶದ ಪ್ರತಿ ಜಿಲ್ಲೆಗೂ ಆಮ್ಲಜನಕ ತಲುಪುವಂತೆ ದೇಶಾದ್ಯಂತ ೧೫೦೦ ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶುಕ್ರವಾರ ಕೋವಿಡ್ ಹೋರಾಟದಲ್ಲಿನ ಮುಂಚೂಣಿ ಹೋರಾಟಗಾರರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (ಕ್ರ‍್ಯಾಶ್ ಕೋರ್ಸ್)ಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕೋವಿಡ್ ಸಾಂಕ್ರಾಮಿಕ ಇನ್ನೂ ಮುಕ್ತಾಯ ವಾಗಿಲ್ಲ. ಜನರು ಅತ್ಯಂತ ಜಾಗರೂಕರಾಗಿರಬೇಕು, ವೈರಸ್ ನಮ್ಮ ನಡುವೆ ಇನ್ನೂ ಇದೆ. ಅದು ರೂಪಾಂತರಗೊಳ್ಳುವ ಸಾಧ್ಯತೆಯೂ ಇದೆ. ಕೊರೊನಾ ವೈರಸ್ ಎರಡನೇ ತರಂಗದಲ್ಲಿ, ಈ ವೈರಸ್‌ನ ಬದಲಾಗುತ್ತಿರುವ ರೂಪವು ನಮ್ಮ ಮುಂದೆ ಯಾವ ರೀತಿಯ ಸವಾಲುಗಳನ್ನು ತರಬಹುದು ಎಂಬುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು. ಮುಂದಿನ ಸವಾಲುಗಳನ್ನು ಎದುರಿಸಲು ನಾವು ದೇಶದ ಸನ್ನದ್ಧತೆಯನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಜೂನ್ ೨೧ ರಿಂದ ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಸುಮಾರು ೧ ಲಕ್ಷ ಮುಂಚೂಣಿ ಕೊರೊನಾ ಯೋಧರನ್ನು ತಯಾರಿಸುವ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

ಕೋವಿಡ್ ವೈರಸ್‌ನ ಮತ್ತೊಂದು ರೂಪಾಂತರ ಅಪಾಯಕಾರಿ

ಜಿನೀವಾ, ಜೂ. ೧೮: ಜಗತ್ತಿನಾದ್ಯಂತ ಮಾರಣಾಂತಿಕ ವೈರಸ್ ಕೋವಿಡ್-೧೯ ಅಟ್ಟಹಾಸ ಮುಂದುವರೆದಿರುವAತೆಯೇ ಇದೀಗ ಇದೇ ಡೆಡ್ಲಿ ವೈರಸ್‌ನ ಮತ್ತೊಂದು ರೂಪಾಂತರ ಕೂಡ ತನ್ನ ಆರ್ಭಟ ಆರಂಭಿಸಿದೆ. ಪೆರು ದೇಶದಲ್ಲಿ ಮೊದಲು ಪತ್ತೆಯಾದ ಈ ಕೋವಿಡ್-೧೯ ವೈರಸ್ ನೂತನ ರೂಪಾಂತರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಲಾಂಬ್ಡಾ ಎಂದು ಹೆಸರಿಸಿದ್ದು, ಈ ಲಾಂಬ್ಡಾ ರೂಪಾಂತರಿ ವೈರಸ್ ಪ್ರಸ್ತುತ ಜಗತ್ತಿನ ಬರೋಬ್ಬರಿ ೨೯ ದೇಶಗಳಲ್ಲಿ ತನ್ನ ಆರ್ಭಟ ನಡೆಸುತ್ತಿದೆ. ಮೊದಲ ಬಾರಿಗೆ ಪೆರು ದೇಶದಲ್ಲಿ ಕಾಣಿಸಿಕೊಂಡ ಈ ರೂಪಾಂತರಿ ತಳಿ ಬಳಿಕ ಬ್ರೆಜಿಲ್, ಅರ್ಜೆಂಟೀನಾ ಮತ್ತು ಈಕ್ವೆಡಾರ್‌ನಲ್ಲಿ ಕಾಣಿಸಿಕೊಂಡಿತು. ಕ್ರಮೇಣ ಈ ಲಾಂಬ್ಡಾ ವೈರಸ್ ಆರ್ಭಟ ಜೋರಾಗಿದ್ದು, ಲಕ್ಷಾಂತರ ಮಂದಿಗೆ ಸೋಂಕು ವ್ಯಾಪಕವಾಗಿ ಪಸರಿಸುವಂತೆ ಮಾಡುತ್ತಿದೆ. ಲಾಂಬ್ಡಾ ರೂಪಾಂತರಿಯ ಸಂತತಿಯನ್ನು ಜಾಗತಿಕ ವೇರಿಯಂಟ್ ಆಫ್ ಇಂಟರೆಸ್ಟ್ ಎಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ. ಮೊಟ್ಟ ಮೊದಲ ಬಾರಿಗೆ ಪೆರುವಿನಲ್ಲಿ ಈ ಲಾಂಬ್ಡಾ ರೂಪಾಂತರಿ ವೈರಸ್‌ನ್ನು ಗುರುತಿಸಲಾಗಿದೆ ಎಂದು ಸಾಪ್ತಾಹಿಕ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿತ್ತು. ಪೆರುವಿನಲ್ಲಿ ಲಾಂಬ್ಡಾ ಪ್ರಕರಣ ಮಿತಿಮೀರಿದ್ದು, ಏಪ್ರಿಲ್ ತಿಂಗಳಿನಿAದ ವರದಿಯಾದ ಪ್ರಕರಣಗಳಲ್ಲಿ ೮೧ ಪ್ರತಿಶತ ಪ್ರಕರಣಗಳು ಈ ಹೊಸ ರೂಪಾಂತರದೊAದಿಗೆ ಸಂಬAಧ ಹೊಂದಿದೆ ಎನ್ನಲಾಗಿದೆ. ಚಿಲಿ ದೇಶದಲ್ಲಿ ಕಳೆದ ೬೦ ದಿನಗಳಲ್ಲಿ ಶೇ. ೩೨ ರಷ್ಟು ಲಾಂಬ್ಡಾ ರೂಪಾಂತರಿ ಪ್ರಕರಣಗಳು ವರದಿಯಾಗಿವೆ. ಚಿಲಿಯಲ್ಲಿ, ಕಳೆದ ೬೦ ದಿನಗಳಲ್ಲಿ ಸಲ್ಲಿಸಿದ ಎಲ್ಲಾ ಅನುಕ್ರಮಗಳಲ್ಲಿ ಇದು ಶೇ. ೩೨ ರಷ್ಟು ಲಾಂಬ್ಡಾ ರೂಪಾಂತರಿ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಮತ್ತು ಬ್ರೆಜಿಲ್‌ನಲ್ಲಿ ಮೊದಲು ಗುರುತಿಸಲ್ಪಟ್ಟ ಗಾಮಾ ರೂಪಾಂತರದಿAದ ಮಾತ್ರ ಅದನ್ನು ಮೀರಿಸಲಾಗಿದೆ. ಇನ್ನು ಅರ್ಜೆಂಟೀನಾ ಮತ್ತು ಈಕ್ವೆಡಾರ್‌ನಂತಹ ಇತರ ದೇಶಗಳು ಸಹ ಹೊಸ ರೂಪಾಂತರದ ಹರಡುವಿಕೆಯನ್ನು ಹೆಚ್ಚಿಸಿವೆ ಎಂದು ವರದಿ ಮಾಡಿದೆ. ಈ ಲಾಂಬ್ಡಾ ವೈರಸ್ ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ ಗಾಮಾ ರೂಪಾಂತರಿಯ ವರ್ಗೀಕರಣವಾಗಿದೆ.

ಭಾರತದಲ್ಲಿ ಕೊರೊನಾ ಇಳಿಮುಖ

ನವದೆಹಲಿ, ಜೂ. ೧೮: ಭಾರತದಲ್ಲಿ ಕೊರೊನಾ ೨ನೇ ಅಲೆಯ ಇಳಿಮುಖದ ಹಾದಿ ಎಂದಿನAತೆ ಮುಂದುವರೆದಿದ್ದು. ಶುಕ್ರವಾರ ೬೨,೪೮೦ ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ ದೇಶದಲ್ಲಿ ೧,೫೮೭ ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಶುಕ್ರವಾರದ ಅಂಕಿ ಸಂಖ್ಯೆಯೊAದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨,೯೭,೬೨,೭೯೩ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ ೩,೮೩,೪೯೦ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಸಕ್ರಿಯ ಸೋಂಕಿತರ ಸಂಖ್ಯೆ ೭,೯೮,೬೫೬ಕ್ಕೆ ಕುಸಿದ್ದು, ೭೩ ದಿನಗಳ ಬಳಿಕ ದೇಶದಲ್ಲಿ ದಾಖಲಾಗಿರುವ ಅತಿ ಕನಿಷ್ಟ ಸಕ್ರಿಯ ಸೋಂಕಿತರ ಸಂಖ್ಯೆ ಇದಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಈ ನಡುವೆ ಕಳೆದ ೨೪ ಗಂಟೆಗಳಲ್ಲಿ ೮೮,೯೭೭ ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ ೨,೮೫,೮೦,೬೪೭ಕ್ಕೆ ತಲುಪಿದೆ. ಇನ್ನು ಭಾರತದಲ್ಲಿ ಒಂದೇ ದಿನ ೧೯,೨೯,೪೭೬ ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ೩೮,೭೧,೬೭,೬೯೬ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ ೨೬,೮೯,೬೦,೩೯೯ ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

ಮೇಕೆದಾಟು ವಿವಾದ: ಚೆನ್ನೆöÊ ಪೀಠದ ಆದೇಶಕ್ಕೆ ತಡೆ

ಬೆಂಗಳೂರು, ಜೂ. ೧೮: ಮೇಕೆದಾಟು ಸ್ಥಳ ಪರಿಶೀಲನೆಗೆ ಸಮಿತಿ ರಚನೆ ಮಾಡಿ ದಕ್ಷಿಣ ಪೀಠ ನೀಡಿದ್ದ ಆದೇಶಕ್ಕೆ ಎನ್‌ಜಿಟಿ ಪ್ರಧಾನ ಪೀಠ ತಡೆ ನೀಡಿದೆ. ಕರ್ನಾಟಕ ಸರ್ಕಾರ ಚೆನ್ನೆöÊನಲ್ಲಿರುವ ದಕ್ಷಿಣ ಪೀಠ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಕ್ರಮವಾಗಿ ನಿರ್ಮಾಣ ಚಟುವಟಿಕೆ ನಡೆಸುತ್ತಿದೆ ಎಂಬ ಪತ್ರಿಕಾ ವರದಿ ಆಧರಿಸಿ ರಾಷ್ಟಿçÃಯ ಹಸಿರು ನ್ಯಾಯಾಧೀಕರಣದ ಚೆನ್ನೆöÊ ಪೀಠ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಎನ್‌ಜಿಟಿ ಆದೇಶದ ವಿರುದ್ಧ ಕರ್ನಾಟಕದ ಕಾನೂನು ಸಮರ ಅರ್ಜಿಯ ವಿಚಾರಣೆ ವೇಳೆ ನಿರ್ಮಾಣ ಚಟುವಟಿಕೆ ಬಗ್ಗೆ ಪರಿಶೀಲನೆ ನಡೆಸಲು ಜಂಟಿ ಸಮಿತಿಯನ್ನು ರಚನೆ ಮಾಡಿ ಮೇ ೨೧ ರಂದು ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರ ಎನ್‌ಜಿಟಿ ಪ್ರಧಾನ ಪೀಠದಲ್ಲಿ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಎನ್‌ಜಿಟಿಯ ಚೆನ್ನೆöÊ ಪೀಠ ಪತ್ರಿಕೆಗಳಲ್ಲಿ ಬಂದ ವರದಿ ಅನ್ವಯ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿತ್ತು. ಅರ್ಜಿ ವಿಚಾರಣೆ ನಡೆಸುವಾಗ ಜಂಟಿ ಸಮಿತಿಯನ್ನು ರಚನೆ ಮಾಡಿ, ವರದಿ ನೀಡುವಂತೆ ಆದೇಶ ನೀಡಿತ್ತು. ಸಮಿತಿ ರಚಿಸಿದ ಎನ್‌ಜಿಟಿ ಕರ್ನಾಟಕ ಸರ್ಕಾರ ಪ್ರಧಾನ ಪೀಠಕ್ಕೆ ಈ ಕುರಿತು ಮೇಲ್ಮನವಿ ಸಲ್ಲಿಕೆ ಮಾಡಿತ್ತು. ರಾಜ್ಯದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಎನ್‌ಜಿಟಿ ದಕ್ಷಿಣ ಪೀಠ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ವಾದಿಸಿದ್ದರು. ಮೇಕೆದಾಟು ಯೋಜನೆ ವಿರೋಧಿಸಿ ಈಗಾಗಲೇ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದೆ. ಈ ಕುರಿತು ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಹ ಪತ್ರ ಬರೆದಿದೆ ಎಂದು ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಡೆದು ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಿದೆ. ಯೋಜನೆ ಸ್ಥಳದಲ್ಲಿ ಕಾಮಗಾರಿ ಆರಂಭಿಸಿಲ್ಲ. ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕದ ಪರವಾಗಿ ವಾದ ಮಂಡಿಸಲಾಯಿತು. ವಾದ ಅಲಿಸಿದ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠ ಚೆನ್ನೆöÊ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.