ಚೆಯ್ಯಂಡಾಣೆ, ಜೂ. ೧೮: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಮಿಟ್ಟು ಅಪ್ಪಯ್ಯ, ಬಿದ್ದಪ್ಪ, ಕಾಳಯ್ಯ ಕಾಶಿ, ಸದಾ ಚಿನ್ನಪ್ಪ ಸೇರಿದಂತೆ ಹಲವಾರು ಮಂದಿಯ ತೋಟಗಳಿಗೆ ಕಾಡಾನೆಗಳ ಹಿಂಡು ಪದೇ ಪದೇ ದಾಳಿ ಮಾಡುತ್ತಿದ್ದು, ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಕೂಡ ಕಾಫಿ, ತೆಂಗಿನ ಮರ, ಅಡಿಕೆ, ಬಾಳೆ, ಕರಿಮೆಣಸು ಗಿಡಗಳನ್ನು ಹೇರಳ ಸಂಖ್ಯೆಯಲ್ಲಿ ನಾಶಮಾಡಿವೆ. ಇದರಿಂದ ತೋಟದ ಮಾಲೀಕರು ಅತಂತ್ರರಾಗಿದ್ದಾರೆ. ಕಾಡಾನೆ ಹಿಂಡನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿಗಳು ಪ್ರಯತ್ನಿಸುತ್ತಿದ್ದರೂ ಕೂಡ ಬಳಿಕ ಮರಳಿ ತೋಟಗಳನ್ನು ಆಕ್ರಮಿಸುತ್ತಿವೆ. ಕಾಡಾನೆಗಳ ದಾಳಿಗೆ ಖಾಯಂ ಪರಿಹಾರಕ್ಕೆ ಸರಕಾರ ಕಾರ್ಯೋನ್ಮುಖವಾಗಬೇಕೆಂದು ನೊಂದ ತೋಟದ ಮಾಲೀಕರುಗಳು ಆಗ್ರಹಿಸಿದ್ದಾರೆ. - ಸಿ.ಎ.ಆಶ್ರಫ್