ಬಾಳೆಲೆ: ವಿಶ್ವ ಪರಿಸರ ದಿನದ ಅಂಗವಾಗಿ ಬಾಳೆಲೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಅರಣ್ಯ ಇಲಾಖೆ ನೀಡಿದ ಸಸಿಗಳನ್ನು ನೆಡಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಚೆಕ್ಕೇರ ಅಯ್ಯಪ್ಪ, ಉಪಾಧ್ಯಕ್ಷ ಪಡಿಞರಂಡ ಕವಿತಾ ಪ್ರಭು, ಸದಸ್ಯರಾದ ಶರೀನ್ ಮುತ್ತಣ್ಣ, ಪವಿತಾ, ಪಿ.ಡಿ.ಓ. ಮನಮೋಹನ್ ಇದ್ದರು.ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು

ಚೆಟ್ಟಳ್ಳಿ: "ಬಿತ್ತಿದರೆ ಮಾತ್ರ ಬೆಳೆ" ಎಂಬ ಘೋಷಣೆಯೊಂದಿಗೆ ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಸಮಿತಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆನ್‌ಲೈನ್‌ನಲ್ಲಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಶನಿವಾರಸಂತೆ ಕಂದಾಯ ಶಾಖೆಯ ಹಿರಿಯ ಸಹಾಯಕ ದೀಪಕ್ ಸೋಮಪ್ಪ ಮಾತನಾಡಿ, ಪರಿಸರದ ರಕ್ಷಣೆ ಅಥವಾ ಗಿಡ ಮರಗಳನ್ನು ನೆಡುವುದು ಈ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತೀ ದಿನವೂ ಮಾಡಬೇಕಾದ ಕರ್ತವ್ಯ ಆಗಿದೆ. ಅದರ ಜೊತೆಗೆ ಪ್ರತೀ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜಲ ಶುದ್ಧೀಕರಣ ಘಟಕ ಸ್ಥಾಪಿಸಲು ಎಲ್ಲರೂ ಮನವಿ ಸಲ್ಲಿಸಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹಿಂ ಬಾತಿಷಾ ಶಂಸಿ ಕೊಡ್ಲಿಪೇಟೆ, ಈಗಾಗಲೇ ಎಲ್ಲವೂ ಕಾರ್ಪೊರೇಟ್ ಮಯವಾಗಿದ್ದು, ಪರಿಸರ ಕೂಡ ಅದರ ಹೊರತಾಗಿಲ್ಲ. ಕಾಣದ ಕೈಗಳಿಂದ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್. ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ವಹಿಸಿದ್ದರು. ಸೌದಿ ಅರೇಬಿಯಾ ಕೊಡಗು ಸಮಿತಿ ಅಧ್ಯಕ್ಷ ಝೈನುದ್ದೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತು ಜಿಸಿಸಿ ಸಮಿತಿಯ ಹಲವು ನಾಯಕರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಜಿಸಿಸಿ ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್ ಸ್ವಾಗತಿಸಿ, ರಝಾಕ್ ಬಜೆಗುಂಡಿ ವಂದಿಸಿದರು. ಯಹ್ಯಾ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು.ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ವಾಹನ ಮತ್ತು ಕಸ ವಿಲೇವಾರಿ ಘಟಕ ಉದ್ಘಾಟಿಸಲಾಯಿತು. ಈ ಸಂದರ್ಭ ವಿಶ್ವ ಪರಿಸರ ದಿನವನ್ನು ಗಿಡನೆಟ್ಟು ಆಚರಿಸಲಾಯಿತು.ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ವಾಹನ ಮತ್ತು ಕಸ ವಿಲೇವಾರಿ ಘಟಕ ಉದ್ಘಾಟಿಸಲಾಯಿತು. ಈ ಸಂದರ್ಭ ವಿಶ್ವ ಪರಿಸರ ದಿನವನ್ನು ಗಿಡನೆಟ್ಟು ಆಚರಿಸಲಾಯಿತು.ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ವಾಹನ ಮತ್ತು ಕಸ ವಿಲೇವಾರಿ ಘಟಕ ಉದ್ಘಾಟಿಸಲಾಯಿತು. ಈ ಸಂದರ್ಭ ವಿಶ್ವ ಪರಿಸರ ದಿನವನ್ನು ಗಿಡನೆಟ್ಟು ಆಚರಿಸಲಾಯಿತು.ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ವಾಹನ ಮತ್ತು ಕಸ ವಿಲೇವಾರಿ ಘಟಕ ಉದ್ಘಾಟಿಸಲಾಯಿತು. ಈ ಸಂದರ್ಭ ವಿಶ್ವ ಪರಿಸರ ದಿನವನ್ನು ಗಿಡನೆಟ್ಟು ಆಚರಿಸಲಾಯಿತು.ಪೊನ್ನಂಪೇಟೆ: ಸಮೃದ್ಧ ಹಸಿರು ಪರಿಸರ ನಿರ್ಮಾಣ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಬೇಕು ಎಂದು ಕೊಡಗು ಜಿ.ಪಂ. ಮಾಜಿ ಉಪಾಧ್ಯಕ್ಷೆ, ವಕೀಲೆ ಕಂಜಿತAಡ ಅನಿತಾ ಅಭಿಪ್ರಾಯಪಟ್ಟಿದ್ದಾರೆ.

ಬಿಟ್ಟಂಗಾಲ ಸಮೀಪದ ವಿ. ಬಾಡಗ ಬಿಜೆಪಿ ಬೂತ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸ್ಥಳೀಯವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸುತ್ತಮುತ್ತಲಿನ ಪರಿಸರದ ಪ್ರತಿಯೊಂದು ಗಿಡವೂ ಕೂಡ ಅದರದೇ ಆದ ಮಹತ್ವವನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ, ಪರಿಸರ ಉಳಿದರೆ ಮಾತ್ರ ಮನುಷ್ಯನ ಬದುಕು ಹಸನಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಎರವರ ಅಕ್ಕಚ್ಚಿ ಮತ್ತು ವೀರಾಜಪೇಟೆ ಮಂಡಲ ಬಿಜೆಪಿ ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ ಅವರು ಗಿಡವೊಂದನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ಬಳಿಕ ಗ್ರಾಮದ ಮಹಾವಿಷ್ಣು ದೇವಸ್ಥಾನ, ಕಮ್ಮಟ್ಟಪ್ಪ ಕುದುರೆ ಪುಂಡ ಅಂಬಲ ಮತ್ತು ವಿ. ಬಾಡಗದ ಚಾಮುಂಡಿ ದೇವನೆಲೆಯಲ್ಲಿ ವಿವಿಧ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಜಾತಿಯ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಾಮೂಹಿಕವಾಗಿ ಅದನ್ನು ಉಳಿಸಿ ಬೆಳೆಸುವ ಪ್ರತಿಜ್ಞೆ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯೆ ಅಪ್ಪಂಡೇರAಡ ಭವ್ಯ ಚಿಟ್ಯಣ್ಣ, ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಎ.ಪಿ. ದಿನೇಶ್ ಕುಮಾರ್, ವಿ. ಬಾಡಗ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ಕುಪ್ಪಂಡ ಮೋಹನ್ ಮೊಣ್ಣಪ್ಪ, ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಮಚ್ಚಾರಂಡ ಪ್ರವೀಣ್, ಪಕ್ಷದ ಪ್ರಮುಖರಾದ ಮುಲ್ಲೆಂಗಡ ನಟ್ಟು ನಾಚಪ್ಪ, ಕೋಲತಂಡ ಸುಬ್ರಮಣಿ, ನಂಬುಡುಮಾಡ ಮುದ್ದಪ್ಪ, ಕೊಂಗAಡ ಅಚ್ಚಯ್ಯ, ಅಮ್ಮುಣಿಚಂಡ ರೋಹಿತ್, ತೀತಿಮಾಡ ಈಶ್ವರ, ಕುಪ್ಪಂಡ ನಾಣಯ್ಯ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಹಾಜರಿದ್ದರು.ಸುಂಟಿಕೊಪ್ಪ: ಕೊಡಗರಹಳ್ಳಿಯ ಗ್ರಾಮ ಪಂಚಾಯಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಪಂಚಾಯಿತಿ ಆವರಣದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್ ಸೇರಿದಂತೆ ಪಂಚಾಯಿತಿ ಆಡಳಿತ ಮಂಡಳಿ ಮಂಡಳಿ ಸಿಬ್ಬಂದಿ ಹಾಜರಿದ್ದರು.ಕುಂಜಿಲ-ಪರAಬುಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ನಾಪೋಕ್ಲು: ಕುಂಜಿಲ-ಪರAಬುಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗಿಡ ನೆಡುವದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.ಸೋಮವಾರಪೇಟೆ: ನಾವು ಪ್ರತಿಷ್ಠಾನದ ವತಿಯಿಂದ ವಿಶ್ವಪರಿಸರ ದಿನದ ಅಂಗವಾಗಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಗಿರಿಜನರ ಹಾಡಿಯಲ್ಲಿ ಪರಸರ ದಿನವನ್ನು ವಿನೂತನವಾಗಿ ಆಚರಿಸಲಾಯಿತು.

ಕೋವಿಡ್ ಸೋಂಕಿಗೆ ತುತ್ತಾಗಿ ಆಮ್ಲಜನಕದ ಕೊರತೆ ಅನುಭವಿಸಿ, ನಂತರ ಕೋವಿಡ್ ಸೋಂಕು ಗೆದ್ದು ಬಂದ ಡಿ.ಟಿ. ನಿರಂಜನ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಆಮ್ಲಜನಕ ಅವಶ್ಯಕತೆ ಹಾಗು ಪರಿಸರ ಸಮತೋಲನದ ಬಗ್ಗೆ ಅರಿವು ಮೂಡಿಸಿದರು.

ಐಗೂರು ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಅನಂತ್‌ಕುಮಾರ್, ಸಮಾಜ ಸೇವಕ ಕೆ.ಪಿ. ದಿನೇಶ್, ಹಾಡಿಯ ಶತಾಯುಷಿ ಸೀತಮ್ಮ, ಯೋಧ ಮಿಥುನ್, ಹಾಡಿ ಸಮಿತಿ ಅಧ್ಯಕ್ಷೆ ಕಮಲ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.