ಕುಶಾಲನಗರ, ಜೂ. ೧೮: ಕೋವಿಡ್ ಸೋಂಕು ತಗಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಕುಶಾಲನಗರದ ರಥಬೀದಿ ಮತ್ತು ಸುಂದರನಗರಕ್ಕೆ ಭೇಟಿ ನೀಡಿದ ಸಚಿವರು ಅನಾಥಮಕ್ಕಳ ಮನೆಗೆ ತೆರಳಿ ಮುಂದಿನ ಭವಿಷ್ಯದ ಬಗ್ಗೆ ಭರವಸೆ ನೀಡಿದರು. ರಥಬೀದಿಯ ಮೃತ ವೆಂಕಟ್ ನಾಗೇಶ್, ಛಾಯ ಅಶ್ವಿನಿ ದಂಪತಿಗಳ ಪುತ್ರಿ ನಾಗ ಅಶ್ವಿನಿ ಅವರನ್ನು ಭೇಟಿಯಾದ ಸಚಿವೆ ಸಾಂತ್ವನÀ ಹೇಳುವುದರೊಂದಿಗೆ ಮುಂದಿನ ವ್ಯಾಸಂಗಕ್ಕೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವುದ ರೊಂದಿಗೆ ಪ್ರತಿ ತಿಂಗಳು ರೂ.೩೫೦೦ ಪರಿಹಾರ ಧನ ನೀಡಲಾಗುವುದು, ಹೆಚ್ಚಿನ ವ್ಯಾಸಂಗ ನಡೆಸಲು ಲ್ಯಾಪ್ ಟಾಪ್ ನೀಡಲಾಗುವುದು, ೨೧ ವರ್ಷದ ನಂತರ ಒಂದು ಲಕ್ಷ ರೂ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು. ಪ್ರಸಕ್ತ ಅಜ್ಜಿ ಆರೈಕೆಯಲ್ಲಿರುವ ನಾಗ ಅಶ್ವಿನಿ ಅವರಿಗೆ ವಿಶೇಷ ಸಹಾಯಧನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸುವುದಾಗಿ ಸಚಿವೆ ಜೊಲ್ಲೆ ಹೇಳಿದರು.

ನಾಗ ಅಶ್ವಿನಿ ತಂದೆ ೮ ವರ್ಷ ಹಿಂದೆ ಮೃತಪಟ್ಟಿದ್ದು, ಮೇ ತಿಂಗಳಲ್ಲಿ ತಾಯಿ ಕೊರೊನಾ ಸೋಂಕಿನಿAದ ಮೃತಪಟ್ಟಿದ್ದರು.

ಸುಂದರ ನಗರದ ವಿ.ಪಿ. ಜಾರ್ಜ್ ಮತ್ತು ಗ್ರೇಸಿ ದಂಪತಿಗಳ ಪುತ್ರ ಶ್ಯಾಮ್ ಇದೀಗ ಅನಾಥನಾಗಿದ್ದು ಸಚಿವೆ ಜೊಲ್ಲೆ ಮನೆಗೆ

(ಮೊದಲ ಪುಟದಿಂದ) ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಜಾರ್ಜ್ ಮತ್ತು ಗ್ರೇಸಿ ಮೇ ತಿಂಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಸಾವನಪ್ಪಿದ್ದರು. ಇಬ್ಬರು ಅನಾಥ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರೊಂದಿಗೆ ಶಿಕ್ಷಣ ವ್ಯವಸ್ಥೆಗೆ ಎಲ್ಲಾ ವ್ಯವಸ್ಥೆ ಕಲ್ಪಿಸುವಂತೆ ಸಚಿವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ವಿ. ಸುರೇಶ್ ಅವರಿಗೆ ಸೂಚಿಸಿದರು.

ಈ ಸಂದರ್ಭ ಇಲಾಖೆಯ ಅಧಿಕಾರಿಗಳು, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಮತ್ತಿತರು ಇದ್ದರು.