ಮಡಿಕೇರಿ, ಜೂ. ೧೮: ಮಕ್ಕಳ ರಕ್ಷಣೆ ಇಲಾಖೆಯ ಪ್ರಥಮ ಆಧ್ಯತೆಯಾಗಿದ್ದು, ಮಕ್ಕಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣ ಖರೀದಿಗೆ ಕ್ರಮವಹಿಸಲಾಗುತ್ತದೆ ಎಂದು ಸಚಿವರಾದ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ಜಿ.ಪಂ ಸಭಾಂಗಣದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೪೮ ಮಕ್ಕಳು ಕೊರೊನಾದಿಂದ ಅನಾಥರಾಗಿ ದ್ದಾರೆ. ಸಾವಿರಾರು ಮಕ್ಕಳು ಏಕ ಪೋಷಕರನ್ನು ಕಳೆದು ಕೊಂಡಿದ್ದಾರೆ. ಅವರ ಮುಂದಿನ ಬದುಕಿಗೆ ಸರಕಾರ ನಾನಾ ಯೋಜನೆ ರೂಪಿಸಿದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಉಚಿತ ಶಿಕ್ಷಣಕ್ಕೆ ಕ್ರಮವಹಿಸಲಾಗಿದೆ. ದಾನಿಗಳ ನೆರವು ಪಡೆದು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಗಮನಹರಿಸಿದ್ದೇವೆ ಎಂದು ವಿವರಿಸಿದರು.

ಬಾಲಸೇವಾ ಯೋಜನೆ

ಮುಖ್ಯಮಂತ್ರಿಗಳು ಬಾಲಸೇವಾ ಯೋಜನೆ ಘೋಷಿಸಿದ್ದು, ಆ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. ಅನಾಥ ಮಕ್ಕಳಿಗೆ ಮಾಸಿಕ ತಲಾ ರೂ ೩,೫೦೦ ವಿತರಣೆಗೆ ಕ್ರಮವಹಿಸಲಾಗಿದೆ. ಉಚಿತ ಶಿಕ್ಷಣ, ಉನ್ನತ ಶಿಕ್ಷಣ ನೀಡಲಾಗುತ್ತದೆ. ೨೧ ವರ್ಷ ಮೇಲ್ಪಟ್ಟ ಯುವತಿಯರಿಗೆ ರೂ ೧ ಲಕ್ಷ ವಿತರಣೆ ಮಾಡಲು ಘೋಷಿಸಲಾಗಿದೆ. ಅನಾಥ ಮಕ್ಕಳನ್ನು ಸಂಬAಧಿಕರು ಸಾಕಲು ಅಶಕ್ತರಾದರೆ ಅಂತವರನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ದಾಖಲಿಸಿ ಕೊಳ್ಳಲಾಗುತ್ತದೆ.

(ಮೊದಲ ಪುಟದಿಂದ) ಅಲ್ಲಿಂದ ಯಾರಾದರು ದತ್ತು ಪಡೆಯಲು ಮುಂದೆ ಬಂದರೆ ನಿಯಮದಂತೆ ಮಕ್ಕಳನ್ನು ಅವರ ಸುಪರ್ದಿಗೆ ನೀಡುತ್ತೇವೆ. ಅದಲ್ಲದೆ ಬಾಲ ಹಿತೈಶಿ ಕಾರ್ಯಕ್ರಮದ ಮೂಲಕ ದಾನಿಗಳ ನೆರವು ಪಡೆದು ಮಕ್ಕಳ ಭವಿಷ್ಯಕ್ಕೆ ಇಲಾಖೆ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ೩ನೇ ಅಲೆ ಎದುರಿಸಲು ಬೇಕಾದ ಅಗತ್ಯ ವೈದ್ಯಕೀಯ ಉಪಕರಣ ಖರೀದಿಗೆ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯ ಸಚಿವರು ಈ ಬಗ್ಗೆ ಒಪ್ಪಿಗೆ ನೀಡಿದ್ದು ಬೇಕಾದ್ದಲ್ಲಿ ವೆಂಟಿಲೇಟರ್ ತರಿಸಿಕೊಳ್ಳುತ್ತೇವೆ ಎಂದರು.

ಮಹಿಳಾ ಸಾಂತ್ವನ ಕೇಂದ್ರ ಮುಚ್ಚುವ ಆದೇಶ ಹಿಂಪಡೆದುಕೊಳ್ಳಲಾಗಿದ್ದು, ಹಿಂದಿನ ರೀತಿಯಲ್ಲಿ ಅದು ಮುಂದುವರೆಯಲಿದೆ ಎಂದರು. ಗೋಷ್ಠಿಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ ಹಾಜರಿದ್ದರು.