ಮಡಿಕೇರಿ, ಜೂ. ೧೭: ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತಲಿನ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಏಪ್ರಿಲ್ ೨೬ ರಿಂದ ಅನ್ವಯವಾಗುವಂತೆ ಮುಂದಿನ ೬ ತಿಂಗಳ ಅವಧಿಗೆ ಮುಂದೂಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರಸಭೆಗೆ ನಡೆಯಬೇಕಾಗಿದ್ದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯೂ ಏಪ್ರಿಲ್‌ನಿಂದ ೬ ತಿಂಗಳು ಅಂದರೆ ಅಕ್ಟೋಬರ್‌ವರೆಗೆ ನಡೆಸುವಂತಿಲ್ಲ. ಸಚಿವ ಸಂಪುಟದ ತೀರ್ಮಾನದಂತೆ ಈ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ನಗರಾಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

-ಅನಿಲ್ ಎಚ್.ಟಿ.